ಕಣಿವೆ, ನ. ೩: ಸರಿಯಾದ ನಿರ್ವಹಣೆ ಇಲ್ಲದೆ ಹಾಳಾಗಿದ್ದ ಹಾರಂಗಿಯ ಉದ್ಯಾನವನದ ಬಗ್ಗೆ ‘ಶಕ್ತಿ'ಯಲ್ಲಿ ವರದಿ ಪ್ರಕಟಗೊಂಡ ಬಳಿಕ ಎಚ್ಚೆತ್ತುಕೊಂಡ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಹಾರಂಗಿಯ ಉದ್ಯಾನದೊಳಗೆ ಬೆಳೆದು ನಿಂತಿದ್ದAತಹ ಹುಲ್ಲು, ಕಾಡು ಗಿಡಗಳು ಹಾಗೂ ಇತರೇ ಬಳ್ಳಿಗಳನ್ನು ಬುಡ ಸಹಿತ ತೆರವುಗೊಳಿಸಿ ಸ್ವಚ್ಛಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಈ ಸಂದರ್ಭ ‘ಶಕ್ತಿ'ಯೊಂದಿಗೆ ವಿವರಣೆ ನೀಡಿದ ಹಾರಂಗಿ ಅಣೆಕಟ್ಟು ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಪುಟ್ಟಸ್ವಾಮಿ, ಹಾರಂಗಿಯ ಉದ್ಯಾನದ ನಿರ್ವಹಣೆಯನ್ನು ನಾವು ನಿರ್ಲಕ್ಷಿಸಿಲ್ಲ. ಸುಮಾರು ಹತ್ತು ವರ್ಷಗಳ ಹಿಂದೆ ನಿರ್ಮಾಣಗೊಂಡ ಉದ್ಯಾನವನ್ನು ಮತ್ತಷ್ಟು ಆಧುನಿಕ ವ್ಯವಸ್ಥೆಯೊಂದಿಗೆ ಮಾರ್ಪಾಡುಗೊಳಿಸಲು ಸರ್ಕಾರಕ್ಕೆ ರೂ ೫ ಕೋಟಿ ಅನುದಾನ ಕೋರಿ ಕ್ರಿಯಾ ಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಅನುದಾನ ಬಂದೊಡನೆ ಉದ್ಯಾನದ ಸ್ವರೂಪವೇ ಬದಲಾಗಲಿದೆ. ಆ ಮೂಲಕ ಇಲ್ಲಿಗೆ ಆಗಮಿಸುವ ಪ್ರವಾಸಿಗರಿಗೆ ಇದು ಮತ್ತಷ್ಟು ಆಕರ್ಷಣೆಯಾಗಲಿದೆ ಎಂದರು.

ಈ ಹಿಂದೆ ಹಾರಂಗಿ ಉದ್ಯಾನದ ಒಳಗೆ ಬರುವ ಪ್ರವಾಸಿಗರಿಂದ ಸಂಗ್ರಹಿಸುತ್ತಿದ್ದ ಪ್ರವೇಶಾತಿ ಶುಲ್ಕ ವಾರ್ಷಿಕವಾಗಿ ಹತ್ತು ಲಕ್ಷಕ್ಕೆ ಏರಿರಲಿಲ್ಲ. ಇದೀಗ ವಿಶೇಷ ಒತ್ತು ನೀಡಿ ಉದ್ಯಾನದ ಒಳಗೆ ಸಣ್ಣ ಪುಟ್ಟ ನಿರ್ವಹಣಾ ಕಾಮಗಾರಿಗಳನ್ನು ಕೈಗೊಂಡು ಪ್ರವೇಶ ಶುಲ್ಕದ ಕಟ್ಟುನಿಟ್ಟಿನ ವ್ಯವಸ್ಥೆಯನ್ನು ಬಲಪಡಿಸಿದ ನಂತರ ವರ್ಷಕ್ಕೆ ರೂ. ೨೫ ಲಕ್ಷ ವರಮಾನ ಬಂದಿದೆ ಎಂದು ಎಇಇ ಪುಟ್ಟಸ್ವಾಮಿ ಹೆಮ್ಮೆಪಟ್ಟರು. ಸಂಜೆಯ ಸಂಗೀತ ಕಾರಂಜಿಯ ಬಳಿ ಒಂದು ಸಾವಿರ ಮಂದಿ ಕುಳಿತು ವೀಕ್ಷಿಸುವಂತಹ ವ್ಯವಸ್ಥೆಗೂ ನಾವು ಯೋಜನೆ ರೂಪಿಸಿದ್ದೇವೆ ಎಂದು ವಿವರಿಸಿದರು.ಇದೀಗ ವಿಶೇಷ ಒತ್ತು ನೀಡಿ ಉದ್ಯಾನದ ಒಳಗೆ ಸಣ್ಣ ಪುಟ್ಟ ನಿರ್ವಹಣಾ ಕಾಮಗಾರಿಗಳನ್ನು ಕೈಗೊಂಡು ಪ್ರವೇಶ ಶುಲ್ಕದ ಕಟ್ಟುನಿಟ್ಟಿನ ವ್ಯವಸ್ಥೆಯನ್ನು ಬಲಪಡಿಸಿದ ನಂತರ ವರ್ಷಕ್ಕೆ ರೂ. ೨೫ ಲಕ್ಷ ವರಮಾನ ಬಂದಿದೆ ಎಂದು ಎಇಇ ಪುಟ್ಟಸ್ವಾಮಿ ಹೆಮ್ಮೆಪಟ್ಟರು. ಸಂಜೆಯ ಸಂಗೀತ ಕಾರಂಜಿಯ ಬಳಿ ಒಂದು ಸಾವಿರ ಮಂದಿ ಕುಳಿತು ವೀಕ್ಷಿಸುವಂತಹ ವ್ಯವಸ್ಥೆಗೂ ನಾವು ಯೋಜನೆ ರೂಪಿಸಿದ್ದೇವೆ ಎಂದು ವಿವರಿಸಿದರು.

ಇದೀಗ ವಿಶೇಷ ಒತ್ತು ನೀಡಿ ಉದ್ಯಾನದ ಒಳಗೆ ಸಣ್ಣ ಪುಟ್ಟ ನಿರ್ವಹಣಾ ಕಾಮಗಾರಿಗಳನ್ನು ಕೈಗೊಂಡು ಪ್ರವೇಶ ಶುಲ್ಕದ ಕಟ್ಟುನಿಟ್ಟಿನ ವ್ಯವಸ್ಥೆಯನ್ನು ಬಲಪಡಿಸಿದ ನಂತರ ವರ್ಷಕ್ಕೆ ರೂ. ೨೫ ಲಕ್ಷ ವರಮಾನ ಬಂದಿದೆ ಎಂದು ಎಇಇ ಪುಟ್ಟಸ್ವಾಮಿ ಹೆಮ್ಮೆಪಟ್ಟರು. ಸಂಜೆಯ ಸಂಗೀತ ಕಾರಂಜಿಯ ಬಳಿ ಒಂದು ಸಾವಿರ ಮಂದಿ ಕುಳಿತು ವೀಕ್ಷಿಸುವಂತಹ ವ್ಯವಸ್ಥೆಗೂ ನಾವು ಯೋಜನೆ ರೂಪಿಸಿದ್ದೇವೆ ಎಂದು ವಿವರಿಸಿದರು