ಮಡಿಕೇರಿ, ನ. ೩: ಭಾರತ ದೇಶದ ಪ್ರಪ್ರಥಮ ಮಹಿಳಾ ಪ್ರಧಾನಿ ದಿ. ಮಾಜಿ ಪ್ರಧಾನಿ ಇಂದಿರಾಗಾAಧಿ ಅವರ ೩೯ನೇ ಪುಣ್ಯತಿಥಿಯನ್ನು ಕೊಡಗು ಜಿಲ್ಲಾ ಕಾಂಗ್ರೆಸ್ ವತಿಯಿಂದ ಆಚರಿಸಲಾಯಿತು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಸೇರಿದಂತೆ ಕಾಂಗ್ರೆಸ್ ಪ್ರಮುಖರು ಹಾಗೂ ಕಾರ್ಯಕರ್ತರು ಇಂದಿರಾಗಾAಧಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ಈ ಸಂದರ್ಭ ದೇಶದ ಗೃಹ ಸಚಿವರಾಗಿದ್ದ ಮತ್ತು ೫೫೦ ಸಣ್ಣ ಸಣ್ಣ ರಾಜ್ಯಗಳನ್ನು ಒಗ್ಗೂಡಿಸಿ ಉಕ್ಕಿನ ಮನುಷ್ಯ ಎಂದು ಹೆಸರುವಾಸಿ ಯಾಗಿದ್ದ ಸರದಾರ್ ವಲ್ಲಭಾಯಿ ಪಟೇಲ್ ಅವರ ೧೪೮ನೇ ಜನ್ಮ ದಿನಾಚರಣೆ ಹಾಗೂ ಸ್ವಾತಂತ್ರö್ಯ ಹೋರಾಟಗಾರ ಗುಡ್ಡೆಮನೆ ಅಪ್ಪಯ್ಯ ಗೌಡರ ೧೮೬ನೇ ಪುಣ್ಯತಿಥಿಯನ್ನು ಆಚರಿಸಲಾಯಿತು.

ದೇಶದ ಅಪ್ರತಿಮ ಮಹಿಳೆ ಎನಿಸಿಕೊಂಡ ಹಾಗೂ ಸುಮಾರು ೧೬ ವರ್ಷಗಳ ಕಾಲ ದೇಶವನ್ನು ಆಳಿದ ಇಂದಿರಾಗಾAಧಿ ಅವರ ವ್ಯಕ್ತಿತ್ವ, ಸಾಧನೆ, ಹಿರಿಮೆ ಮತ್ತು ಬಡ ಹಾಗೂ ಶೋಷಿತ ವರ್ಗಕ್ಕೆ ಅವರು ಕೈಗೊಂಡ ಕಾರ್ಯಕ್ರಮ, ಬ್ಯಾಂಕ್‌ಗಳ ರಾಷ್ಟಿçÃಕರಣ, ರಾಜಧನ ಪದ್ಧತಿ, ೨೦ ಅಂಶಗಳ ಕಾರ್ಯಕ್ರಮ ಅನುಷ್ಠಾನಗಳ ಬಗ್ಗೆ ಸಭೆಯಲ್ಲಿ ತಿಳಿಸಲಾಯಿತು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ, ಡಿ.ಸಿ.ಸಿ. ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ದಿನದ ಮಹತ್ವದ ಕುರಿತು ಮಾತನಾಡಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬ್ಲಾಕ್ ಅಧ್ಯಕ್ಷ ಹೆಚ್.ಎ. ಹಂಸ, ಕೆ.ಎ. ಇಸ್ಮಾಯಿಲ್, ಪ್ರಧಾನ ಕಾರ್ಯದರ್ಶಿ ಕೊಲ್ಯದ ಗಿರೀಶ್, ಕಾಂಗ್ರೆಸ್ ಜಿಲ್ಲಾ ಸೈನಿಕ ಘಟಕದ ಅಧ್ಯಕ್ಷ ಬೊಳ್ಳಿಯಂಡ ಗಣೇಶ್, ನಗರ ಕಾಂಗ್ರೆಸ್ ಅಧ್ಯಕ್ಷ ಬಿ.ವೈ. ರಾಜೇಶ್, ಸಾಮಾಜಿಕ ಜಾಲತಾಣದ ಅಧ್ಯಕ್ಷ ಸೂರಜ್ ಹೊಸೂರು, ಪ್ರಮುಖರಾದ ಚುಮ್ಮಿ ದೇವಯ್ಯ, ಕೆ.ಎಂ. ವೆಂಕಟೇಶ್, ಪುಲಿಯಂಡ ಜಗದೀಶ್, ಕಲೀಲ್ ಬಾಷಾ, ಕೆ.ಜಿ. ಪೀಟರ್, ಹೊಟ್ಟೆಯಂಡ ಫ್ಯಾನ್ಸಿ ಪಾರ್ವತಿ ಬೆಳ್ಯಪ್ಪ, ಜುಲೇಕಾಬಿ, ಟಿ.ಎಂ. ಉದಯ್‌ಕುಮಾರ್, ತೆನ್ನಿರಾ ಮೈನಾ, ಜಯರಾಜ್, ಕೆ.ಎ. ಆನಂದ್, ಪುಷ್ಪ ಪೂಣಚ್ಚ ಸೇರಿದಂತೆ ಮತ್ತಿತರ ಕಾರ್ಯಕರ್ತರು ಹಾಜರಿದ್ದರು.

ಡಿ.ಸಿ.ಸಿ. ಸದಸ್ಯರಾದ ಪ್ರಕಾಶ್ ಆಚಾರ್ಯ ಸ್ವಾಗತಿಸಿದರು. ಜಿಲ್ಲಾ ಕಾಂಗ್ರೆಸ್ ಗೌರವ ಕಾರ್ಯದರ್ಶಿ ವಿ.ಪಿ. ಸುರೇಶ್ ನಿರೂಪಿಸಿದರು. ಡಿ.ಸಿ.ಸಿ. ಸದಸ್ಯ ಜಾನ್ಸನ್ ಪಿಂಟೋ ವಂದಿಸಿದರು.