*ಸಿದ್ದಾಪುರ, ನ. ೧: ವಾಲ್ನೂರು-ತ್ಯಾಗತ್ತೂರು ಗ್ರಾ.ಪಂ.ಗೆ ಅಭಿವೃದ್ಧಿ ಅಧಿಕಾರಿಯನ್ನು ನೇಮಕ ಮಾಡದೆ ಇರುವುದರಿಂದ ನೀರುಘಂಟಿ ಸೇರಿದಂತೆ ಕೆಲವು ನೌಕರರಿಗೆ ವೇತನ ಬಿಡುಗಡೆಯಾಗಿಲ್ಲ.
ಕಳೆದ ಎರಡು ತಿಂಗಳುಗಳಿAದ ವೇತನದಿಂದ ವಂಚಿತರಾಗಿರುವ ನೌಕರರು ದಸರಾ ಹಬ್ಬಕ್ಕೆ ಕೂಡ ವೇತನ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಪಿಡಿಓ ಅವರ ಅಲಭ್ಯತೆಯಿಂದ ನೌಕರರ ವೇತನ ಮಾತ್ರವಲ್ಲದೆ, ಅಭಿವೃದ್ಧಿ ಕಾರ್ಯಗಳಿಗೂ ಹಿನ್ನಡೆಯಾಗಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಕ್ಷಣ ಪಿಡಿಓ ನೇಮಕಕ್ಕೆ ಹಿರಿಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.