ಕುಶಾಲನಗರ, ನ. ೧: ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಹಾಗೂ ಕುಶಾಲನಗರದ ಸಮುದಾಯ ಆರೋಗ್ಯ ಕೇಂದ್ರದ ವತಿಯಿಂದ ಆಯು ಷ್ಮಾನ್ ಭವ ಆರೋಗ್ಯ ಕರ್ನಾಟಕದ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.

ಶಿಬಿರವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಮಧುಸೂದನ್, ಪ್ರತಿಯೊಂದು ಬಡ ಕುಟುಂಬವೂ ಸಹ ಆರೋಗ್ಯವಂತ ಕುಟುಂಬವಾಗುವ ನಿಟ್ಟಿನಲ್ಲಿ ಮತ್ತು ರೋಗಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಆಯುಷ್ಮಾನ್ ಭವ ಆರೋಗ್ಯ ಕರ್ನಾಟಕ ಯೋಜನೆಯನ್ನು ಜಾರಿಗೆ ತಂದಿದ್ದು ಪ್ರತಿಯೊಬ್ಬ ರೋಗಿಗಳು ಯಾವುದೇ ಖರ್ಚಿಲ್ಲದೆ ಎಲ್ಲಾ ತರಹದ ಕಾಯಿಲೆಗಳ ತಪಾಸಣೆ ಪಡೆಯುವ ಅವಕಾಶ ಇದೆ. ಚಿಕಿತ್ಸೆ ಪಡೆದು ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ತಿಳಿಸಿದರು.

ನಂತರ ಮಾತನಾಡಿದ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಪ್ರೊ. ಡಾ. ರಾಮಚಂದ್ರ ಕಾಮತ್ ಆಯುಷ್ಮಾನ್ ಭವ ಆರೋಗ್ಯ ಕರ್ನಾಟಕ ಸೇವೆಯು ವೈದ್ಯಕೀಯ ಕ್ಷೇತ್ರದಲ್ಲಿ ಒಂದು ಮೈಲಿಗಲ್ಲಾಗಿದೆ. ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವು ಏರ್ಪಡಿಸಲಾಗಿದೆ. ವಿವಿಧ ರೀತಿಯ ಮಾದರಿಯ ಕಾಯಿಲೆಗಳ ತಪಾಸಣೆ ಮಾಡಲಾಗುತ್ತಿದ್ದು ಶಿಬಿರದಲ್ಲಿ ಹಾಗೂ ಮರಣೋತ್ತರ ಅಂಗಾAಗ ದಾನ ನೇತ್ರದಾನದ ನೋಂದಣಿ ಕೂಡ ಮಾಡಲಾಗುತ್ತದೆ ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್. ಜಿಲ್ಲಾ ಶಸ್ತçಚಿಕಿತ್ಸಕ ಡಾ. ನಂಜುAಡಯ್ಯ ಪ್ರಬಾರ ತಾಲೂಕು ವೈದ್ಯಾಧಿಕಾರಿ ಡಾ. ಇಂದೂಧರ, ಕ್ಷೇತ್ರ ಆರೋಗ್ಯ ಶಿಕ್ಷಣಾ ಧಿಕಾರಿ ಹೆಚ್.ಕೆ. ಶಾಂತಿ, ವೈದ್ಯರಾದ ಡಾ. ಶಿವಕುಮಾರ್, ಡಾ. ಪ್ರಾಣೇಶ್, ಡಾ. ಅಂಜಲಿ, ಆಶಾ ಕಾರ್ಯಕರ್ತರು ಇದ್ದರು.