ಕೂಡಿಗೆ, ನ. ೧: ತೊರೆನೂರು ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾಗಿ ಉದಯಕುಮಾರ್ ಅವರು ಲಾಟರಿ ಮೂಲಕ ಆಯ್ಕೆಯಾದರು. ಉಪಾಧ್ಯಕ್ಷೆಯಾಗಿ ಗೌರಮಣಿ ಆಯ್ಕೆಯಾದರು.
ಸಹಕಾರ ಸಂಘದ ಆಡಳಿತ ಮಂಡಳಿಯ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಟಿ.ಜೆ. ಉದಯಕುಮಾರ್ ಮತ್ತು ಟಿ.ಬಿ. ಜಗದೀಶ್ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಗೌರಮಣಿ ಮತ್ತು ಹೇಮಾ ನಾಮಪತ್ರವನ್ನು ಸಲ್ಲಿಕೆ ಮಾಡಿದ್ದರು.
ನಂತರ ನಡೆದ ಮತದಾನದಲ್ಲಿ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಉದಯಕುಮಾರ್ರಿಗೆ ೬ ಮತಗಳು, ಜಗದೀಶ್ ಅವರಿಗೆ ೬ ಮತಗಳು ದೊರಕಿತು. ಲಾಟರಿ ಮೂಲಕ ಟಿ.ಕೆ ಉದಯಕುಮಾರ್ ಅವರು ಅಧ್ಯಕ್ಷರಾಗಿ ಆಯ್ಕೆಯಾದರು.
ಉಪಾಧ್ಯಕ್ಷೆ ಸ್ಥಾನದ ಚುನಾವಣೆಯಲ್ಲಿ ಗೌರಮಣಿ ಅವರಿಗೆ ೭ ಮತಗಳು, ಹೇಮಾ ಅವರಿಗೆ ೬ ಮತಗಳು ಬಂದವು. ಗೌರಮಣಿ ಅವರು ಉಪಾಧ್ಯಕ್ಷೆಯಾಗಿ ಆಯ್ಕೆಗೊಂಡರು.
ಆಡಳಿತ ಮಂಡಳಿಯ ನಿರ್ದೇಶಕರಾಗಿ ಆಯ್ಕೆಗೊಂಡಿದ್ದ ಟಿ.ಎಸ್. ಕೃಷ್ಣಗೌಡ, ಹೆಚ್.ಬಿ. ಚಂದ್ರಪ್ಪ, ಕುಶಾಲಪ್ಪ, ಜಗದೀಶ್, ದೇವರಾಜ್, ಮೂರ್ತಿ, ರವಿಕುಮಾರ್, ರವಿಚಂದ್ರ, ಹರೀಶ್, ಹೇಮಾ, ಕೆ.ಡಿ.ಡಿ.ಸಿ. ಬ್ಯಾಂಕ್ನ ಮೇಲ್ವೀಚಾರಕ ಗಣಪತಿ ಹಾಜರಿದ್ದರು.
ಚುನಾವಣಾ ಅಧಿಕಾರಿಯಾಗಿ ಸಹಕಾರ ಇಲಾಖೆಯ ಅಧಿಕಾರಿ ಸುದೀಪ್, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೀತು ಹಾಜರಿದ್ದರು. ಸಂಘದ ಸದಸ್ಯರು, ರೈತರು, ಸಾರ್ವಜನಿಕರು ವಿಜಯೋತ್ಸವವನ್ನು ಆಚರಿಸಿದರು.