ಮಡಿಕೇರಿ, ನ. ೧: ಮಾದಾಪುರದ ಶ್ರೀಮತಿ ಡಿ. ಚೆನ್ನಮ್ಮ ಪದವಿಪೂರ್ವ ಕಾಲೇಜಿನಲ್ಲಿ ರಾಷ್ಟಿçÃಯ ಸೇವಾ ಯೋಜನಾ ಘಟಕದ ೨೦೨೩-೨೦೨೪ನೇ ಸಾಲಿನ ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ೭ ದಿನಗಳ ಶಿಬಿರದ ಸಮಾರೋಪ ಸಮಾರಂಭ ಜರುಗಿತು.

ವೀರಾಜಪೇಟೆಯ ಸಂತ ಅನ್ನಮ್ಮ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕಿ ಪ್ರತಿಮಾ ರೈ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿ, ಎನ್‌ಎಸ್.ಎಸ್. ಶಿಬಿರಾರ್ಥಿಗಳು ಶಿಬಿರದಲ್ಲಿ ಮೈಗೂಡಿಸಿಕೊಂಡಿರುವ ಜೀವನ ಮೌಲ್ಯ, ಸಹಕಾರ ಮನೋಭಾವ, ಶಿಸ್ತು ಮೊದಲಾದ ಗುಣಗಳನ್ನು ತಮ್ಮ ಜೀವನದ ಭಾಗವಾಗುವಂತೆ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ವಿದ್ಯಾರ್ಥಿಗಳು ಸದಾ ಅಧ್ಯಯನಶೀಲರಾಗಿ ಅಪರಿಪೂರ್ಣತೆಯಿಂದ ಪರಿಪೂರ್ಣತೆ ಕಡೆಗೆ ಸಾಗುವಂತೆ ಪ್ರತಿಮಾ ರೈ ಸಲಹೆ ನೀಡಿದರು. ವೇದಿಕೆಯಲ್ಲಿ ಶಿಬಿರದ ನಿರ್ದೇಶಕರು ಹಾಗೂ ಸಂಸ್ಥೆಯ ಪ್ರಾಂಶುಪಾಲ ಸಿ.ಜಿ. ಮಂದಪ್ಪ, ಹರದೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾ, ಕಾರ್ಯಕ್ರಮಾಧಿಕಾರಿ ಎನ್.ಎನ್. ಮನೋಹರ್, ಸಹ ಶಿಬಿರಾಧಿಕಾರಿ ಪ್ರಫುಲ್ಲ ಕುಮಾರಿ, ಹಿರಿಯ ಉಪನ್ಯಾಸಕ ರಾಜಸುಂದರA, ಶೀಲಾ ಸಂಸ್ಥೆಯ ಬೋಧಕ-ಬೋಧಕೇತರ ವರ್ಗ, ಶಿಬಿರಾರ್ಥಿಗಳು ಹಾಜರಿದ್ದರು.