ಗೋಣಿಕೊಪ್ಪ ವರದಿ, ಅ. ೩೧: ಅರಣ್ಯ ಇಲಾಖೆಯ ವತಿಯಿಂದ ತಾ.೧ರಂದು (ಇಂದು) ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಡಗರಕೇರಿ, ಬಿರುನಾಣಿ, ಪರಕಟಗೇರಿ ಗ್ರಾಮಗಳಲ್ಲಿ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟುವ ಕಾರ್ಯಾಚರಣೆ ನಡೆಯಲಿದೆ.

ಬೆ.೧೦ ಗಂಟೆಯಿAದ ಸಾಯಂಕಾಲ ೬ ಗಂಟೆವರೆಗೆ ಕಾರ್ಯಾಚರಣೆ ನಡೆಯಲಿದ್ದು, ಗ್ರಾಮಸ್ಥರು, ಕಾರ್ಮಿಕರು, ಬೆಳೆಗಾರರು, ತೋಟದ ಕೆಲಸವನ್ನು ಸ್ಥಗಿತಗೊಳಿಸಿ ವಿದ್ಯಾರ್ಥಿಗಳು ಬಗ್ಗೆಯೂ ಎಚ್ಚರವಹಿಸಿ ಸಹಕಾರ ನೀಡುವಂತೆ ಶ್ರೀಮಂಗಲ ವನ್ಯಜೀವಿ ವಲಯದ ವಲಯ ಅರಣ್ಯ ಅಧಿಕಾರಿ ಎಸ್. ಎಲ್ ಅರವಿಂದ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕಾಡಾನೆಗಳು ತೋಟದಲ್ಲಿರುವ ಮಾಹಿತಿ ಇದ್ದಲ್ಲಿ ಮೊಬೈಲ್ ನಂಬರ್ ೮೮೬೧೮೬೧೬೮೨ ೭೭೬೦೮೭೩೮೯೭ ಮಾಹಿತಿ ನೀಡಬಹುದಾಗಿದೆ.