ಮಡಿಕೇರಿ, ಅ. ೩೧: ಕಟ್ಟಡ ಕೆಲಸದ ಸಂದರ್ಭ ಬರೆ ಕುಸಿದು ಮಣ್ಣಿನಡಿ ಸಿಲುಕಿ ಮೂವರು ಕಾರ್ಮಿಕರು ಸಾವನ್ನಪ್ಪಿ, ಇಬ್ಬರು ಕಾರ್ಮಿಕರು ಗಾಯಗೊಂಡ ಘಟನೆ ನಡೆದಿದೆ.
ಮಡಿಕೇರಿ ಸ್ಟುವರ್ಟ್ ಹಿಲ್ನಲ್ಲಿ ರೆಡ್ಕ್ರಾಸ್ ಕಟ್ಟಡದ ಸಮೀಪ ಪ್ರದೀಪ್ ಎಂಬವರ ಕಟ್ಟಡ ನಿರ್ಮಾಣ ಕೆಲಸ ನಡೆಯುತ್ತಿತ್ತು, ಮೂರು ತಿಂಗಳ ಹಿಂದೆ ಇಲ್ಲಿ ಕೆಲಸ ನಿರ್ವಹಿಸಲು ರಾಜ್ಯದ ಬೇರೆ ಬೇರೆ ಕಡೆಗಳಿಂದ ಒಟ್ಟು ೯ ಮಂದಿ ಕಾರ್ಮಿಕರು ಆಗಮಿಸಿದ್ದರು. ಈ ಪೈಕಿ ಇಂದು ಎಂಟು ಮಂದಿ ಕೆಲಸ ಮಾಡುತ್ತಿದ್ದರು. ತಡೆಗೋಡೆ ನಿರ್ಮಾಣಕ್ಕೆಂದು ಮಣ್ಣು ಅಗೆಯುತ್ತಿದ್ದ ಸಂದರ್ಭ ದಿಢೀರನೆ ಬರೆ ಕುಸಿಯಲ್ಪಟ್ಟಿತು. ಐವರು ಮಣ್ಣಿನಡಿಯಲ್ಲಿ ಸಿಲುಕಿಕೊಂಡರು. ಸುಮಾರು ೧೫ ಅಡಿಗಳ ಮೇಲಿನಿಂದ ರಭಸದಿಂದ ಬೀಳಲ್ಪಟ್ಟ ಮಣ್ಣು ಮೂರು ಅಡಿಗಳಿಗಿಂತಲೂ ಅಧಿಕವಾಗಿ ಕಾರ್ಮಿಕರ ಮೇಲೆ ಬಿದ್ದು, ಐವರು ಕಾರ್ಮಿಕರು ಮಣ್ಣಿನಡಿ ಸಿಲುಕಿಕೊಂಡರು. ಈ ಸಂದರ್ಭ ಉಸಿರಾಡಲು ಸಾಧ್ಯವಾಗದೆ ತಕ್ಷಣ ರಕ್ಷಣೆಗೆ ಅಸಾಧ್ಯವಾದ ಹಿನ್ನೆಲೆಯಲ್ಲಿ ಲಿಂಗಪ್ಪ (೪೫), ಆನಂದ್ (೩೫), ಬಸವ (೩೫) ಎಂಬವರುಗಳು ತೀವ್ರ ಆಘಾತಕ್ಕೆ ಒಳಗಾದರು. ನಂತರ ಅಗ್ನಿಶಾಮಕದಳ, ಪೊಲೀಸರು, ಮಣ್ಣು ಅಗೆಯುವ ಯಂತ್ರದ ನೆರವಿನೊಂದಿಗೆ ಸುಮಾರು ಒಂದು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಈ ಮೂವರನ್ನು ಮೇಲೆತ್ತಲಾಯಿತಾದರೂ ಅಷ್ಟರಲ್ಲಾಗಲೇ ಅವರುಗಳ ಪ್ರಾಣಪಕ್ಷಿ ಹಾರಿ ಹೋಗಿತ್ತು. ಆನಂದ ಹಾವೇರಿ ಜಿಲ್ಲೆಯವರಾಗಿದ್ದು, ಬಸವ ಹಾಗೂ ಲಿಂಗಪ್ಪ ಹುಬ್ಬಳ್ಳಿ ಮೂಲದವರಾಗಿದ್ದಾರೆ.
ಈ ನಡುವೆ ಮಣ್ಣಿನಡಿ ಸಿಲುಕಿದ್ದ ರಾಜು (೩೫), ಮಂಜು (೩೮) ಎಂಬವರುಗಳನ್ನು ಸ್ಥಳೀಯರು ಹಾಗೂ ಇತರ ಕಾರ್ಮಿಕರ ನೆರವಿನಿಂದ ಸುರಕ್ಷಿತವಾಗಿ ಮೇಲೆತ್ತಲಾಯಿತಾದರೂ ಮಣ್ಣಿನಡಿ ಸಿಲುಕಲ್ಪಟ್ಟು ಇಬ್ಬರೂ ಗಾಯಗೊಂಡಿದ್ದು, ಬಳಿಕ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಸಾಗಿಸಿ ಚಿಕಿತ್ಸೆಗೆ ಒಳಪಡಿಸಲಾಯಿತು.
(ಮೊದಲ ಪುಟದಿಂದ)
ಬಿರುಸಿನ ಕಾರ್ಯಾಚರಣೆ
ಘಟನೆ ನಡೆದ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕದಳ ಹಾಗೂ ಪೊಲೀಸರು ಬಿರುಸಿನ ಕಾರ್ಯಾಚರಣೆ ಕೈಗೊಂಡರು. ಎಸ್ಪಿ ಕೆ. ರಾಮರಾಜನ್ ಸ್ಥಳದಲ್ಲಿ ನಿಂತು ಕಾರ್ಯಾಚರಣೆಯ ಉಸ್ತುವಾರಿ ನೋಡಿಕೊಂಡರು. ಅಗ್ನಿಶಾಮಕದಳ ಸಿಬ್ಬಂದಿ ಮಣ್ಣು ತೆಗೆಯುವ ಕಾರ್ಯ ಆರಂಭಿಸಿದರಾದರೂ ಅದರಿಂದ ಪ್ರಯೋಜನವಾಗದಿದ್ದಾಗ ಎರಡು ಮಣ್ಣು ತೆಗೆಯುವ ಯಂತ್ರಗಳನ್ನು ತರಿಸಲಾಯಿತು.
ಬಳಿಕ ಸುಮಾರು ಒಂದು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಮಣ್ಣಿನಡಿ ಸಿಲುಕಿದ್ದವರನ್ನು ಮೇಲೆತ್ತಲಾಯಿತಾದರೂ ಯಾವುದೇ ಪ್ರಯೋಜನವಾಗಲಿಲ್ಲ.
ಶಾಸಕರ ಭೇಟಿ : ಘಟನೆ ಬಗ್ಗೆ ಮಾಹಿತಿ ತಿಳಿದ ಶಾಸಕ ಡಾ. ಮಂಥರ್ಗೌಡ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂತಹ ಘಟನೆ ನಡೆದಿರುವುದು ದುಃಖಕರ. ಸಂಬAಧಿಸಿದವರ ಬೇಜವಾಬ್ದಾರಿ ಯಿಂದ ಘಟನೆ ಸಂಭವಿಸಿದ್ದು, ಇಂತಹ ಘಟನೆ ಮರುಕಳಿಸಬಾರದು. ಘಟನೆಗೆ ಕಾರಣರಾದವರ ಮೇಲೆ ಪೊಲೀಸರು ಕ್ರಮ ಜರುಗಿಸಬೇಕು ಕೆ. ರಾಮರಾಜನ್ ಸ್ಥಳದಲ್ಲಿ ನಿಂತು ಕಾರ್ಯಾಚರಣೆಯ ಉಸ್ತುವಾರಿ ನೋಡಿಕೊಂಡರು. ಅಗ್ನಿಶಾಮಕದಳ ಸಿಬ್ಬಂದಿ ಮಣ್ಣು ತೆಗೆಯುವ ಕಾರ್ಯ ಆರಂಭಿಸಿದರಾದರೂ ಅದರಿಂದ ಪ್ರಯೋಜನವಾಗದಿದ್ದಾಗ ಎರಡು ಮಣ್ಣು ತೆಗೆಯುವ ಯಂತ್ರಗಳನ್ನು ತರಿಸಲಾಯಿತು.
ಬಳಿಕ ಸುಮಾರು ಒಂದು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಮಣ್ಣಿನಡಿ ಸಿಲುಕಿದ್ದವರನ್ನು ಮೇಲೆತ್ತಲಾಯಿತಾದರೂ ಯಾವುದೇ ಪ್ರಯೋಜನವಾಗಲಿಲ್ಲ.
ಶಾಸಕರ ಭೇಟಿ : ಘಟನೆ ಬಗ್ಗೆ ಮಾಹಿತಿ ತಿಳಿದ ಶಾಸಕ ಡಾ. ಮಂಥರ್ಗೌಡ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂತಹ ಘಟನೆ ನಡೆದಿರುವುದು ದುಃಖಕರ. ಸಂಬAಧಿಸಿದವರ ಬೇಜವಾಬ್ದಾರಿ ಯಿಂದ ಘಟನೆ ಸಂಭವಿಸಿದ್ದು, ಇಂತಹ ಘಟನೆ ಮರುಕಳಿಸಬಾರದು. ಘಟನೆಗೆ ಕಾರಣರಾದವರ ಮೇಲೆ ಪೊಲೀಸರು ಕ್ರಮ ಜರುಗಿಸಬೇಕು ಸಂದರ್ಭ ಉಪವಿಭಾಗಾಧಿಕಾರಿ ಯತೀಶ್ ಉಲ್ಲಾಳ್, ಎಎಸ್ಪಿ ಸುಂದರ್ರಾಜ್, ತಹಶೀಲ್ದಾರ್ ಪ್ರವೀಣ್, ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ, ಸ್ಥಾಯಿ ಸಮಿತಿ ಅಧ್ಯಕ್ಷ ಸತೀಶ್, ಸದಸ್ಯರಾದ ಅಪ್ಪಣ್ಣ, ರಾಜೇಶ್ ಯಲ್ಲಪ್ಪ, ಚಂದ್ರಶೇಖರ್, ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಎಂ.ಪಿ. ಮುತ್ತಪ್ಪ ಮತ್ತಿತರರು ಭೇಟಿ ನೀಡಿದ್ದರು.