ಸೋಮವಾರಪೇಟೆ, ಅ. ೩೧ : ಜಿಲ್ಲೆಯ ಸೇನಾಧಿಕಾರಿ, ರಾಷ್ಟçಪತಿ ಅವರ ಮಿಲಿಟರಿ ಸೆಕ್ರೇಟರಿಯಾಗಿ ಸೇವೆ ಸಲ್ಲಿಸಿ ಹತ್ತಾರು ಮೆಡಲ್ಗಳಿಗೆ ಭಾಜನರಾಗಿರುವ ಮಾದಾಪುರ ಸಮೀಪದ ಗರಗಂದೂರು ಗ್ರಾಮದ ಕೋದಂಡ ಪೂವಯ್ಯ ಕಾರ್ಯಪ್ಪ ಅವರು ಪ್ರಸಕ್ತ ಸಾಲಿನ ಕನ್ನಡ ರಾಜ್ಯೋತ್ಸವ ರಾಜ್ಯ ಪ್ರಶಸ್ತಿಗೆ ಆಯ್ಕೆಗೊಂಡಿದ್ದು, ಬೆಂಗಳೂರಿನಲ್ಲಿ ನ. ೧ ರಂದು (ಇಂದು) ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಭಾರತೀಯ ಸೇನೆಯಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಕಾರ್ಯಪ್ಪ ಅವರನ್ನು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಈ ಬಾರಿ ಕೊಡಗಿನಿಂದ ಇವರೋರ್ವರೇ ಆಯ್ಕೆಯಾಗಿದ್ದಾರೆ. ಕರ್ನಲ್ ಆಫ್ ರಾಜ್ ಪುಟಾಣ್ ರೈಫಲ್ಸ್ ರೆಜಿಮೆಂಟ್, ಮಿಲಿಟರಿ ಸೆಕ್ರೇಟರಿ ಇನ್ ಪ್ರೆಸಿಡೆಂಟ್ ಆಫ್ ಇಂಡಿಯಾ, ಮಾಸ್ಟರ್ ಜನರಲ್ ಸಸ್ಟನೆನ್ಸ್ ಆಗಿ ಕಾರ್ಯನಿರ್ವಹಿಸಿ ಇತ್ತೀಚೆಗಷ್ಟೇ ನಿವೃತ್ತರಾಗಿರುವ ಕಾರ್ಯಪ್ಪ ಅವರು ಪ್ರಸ್ತುತ ಮುಂಬಯಿಯಲ್ಲಿ ನೆಲೆಸಿದ್ದಾರೆ.
ಸೋಮವಾರಪೇಟೆಯ ಓ.ಎಲ್.ವಿ. ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು, ನಂತರ ಮಡಿಕೇರಿಯಲ್ಲಿ ವಿದ್ಯಾಭ್ಯಾಸ ಮಾಡಿದ ಇವರು ಬೆಂಗಳೂರು ಮಿಲಿಟರಿ ಶಾಲೆಯಲ್ಲಿ ಹೆಚ್ಚಿನ ಶಿಕ್ಷಣ ಪಡೆದು ಭಾರತೀಯ ಸೇನೆಗೆ ಆಯ್ಕೆಯಾಗುವ ಮೂಲಕ ರಾಷ್ಟç ರಕ್ಷಣೆಗೆ ಪದಾರ್ಪಣೆ ಮಾಡಿದರು.
ಗರಗಂದೂರು ಗ್ರಾಮದ ಕೋದಂಡ ಅಪ್ಪಯ್ಯ ಪೂವಯ್ಯ ಹಾಗೂ ಪೂವಮ್ಮ ದಂಪತಿಯ ಐದನೇ ಪುತ್ರರಾಗಿರುವ ಇವರು ಭಾರತೀಯ ಸೇನೆಯ ಉನ್ನತ ಸ್ಥಾನಗಳಲ್ಲಿ ಅಲಂಕರಿಸಿ ದೇಶ ಸೇವೆ ಸಲ್ಲಿಸುವ
(ಮೊದಲ ಪುಟದಿಂದ) ಮೂಲಕ ಕೊಡಗಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಬೆಂಗಳೂರು ಮಿಲಿಟರಿ ಶಾಲೆಯ ಸ್ಕೂಲ್ ಕ್ಯಾಪ್ಟನ್ ಆಗಿ ಆಯ್ಕೆಗೊಳ್ಳುವ ಮೂಲಕ ವಿದ್ಯಾರ್ಥಿ ದಿಸೆಯಿಂದಲೇ ಮುನ್ನೆಲೆಗೆ ಬಂದ ಕಾರ್ಯಪ್ಪ ಅವರು ಉತ್ತಮ ಕ್ರೀಡಾಪಟುವಾಗಿಯೂ ಗಮನ ಸೆಳೆದವರು. ಹಾಕಿ, ಬಾಕ್ಸಿಂಗ್, ಪುಟ್ ಬಾಲ್, ಅಥ್ಲೇಟಿಕ್ಸ್, ಬಾಸ್ಕೆಟ್ ಬಾಲ್ ಸೇರಿದಂತೆ ಇತರ ಕ್ರೀಡೆಗಳಲ್ಲಿ ಗಮನ ಸೆಳೆದ ಇವರು, ಶಾಲಾ ಮಟ್ಟದಲ್ಲಿ ಬ್ಲೂಸ್ ಅವಾರ್ಡ್ ಪಡೆದಿದ್ದರು.
೧೯೮೧ರಲ್ಲಿ ಭಾರತೀಯ ಸೇನೆಗೆ ಸೇರ್ಪಡೆಗೊಂಡ ಕಾರ್ಯಪ್ಪ, ೧೯೮೪ರಲ್ಲಿ ಪುಣೆಯ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಕಡಕವಾಸಲಕ್ಕೆ ಸೇರ್ಪಡೆಗೊಂಡರು.
ತದನAತರ ಭಾರತೀಯ ಸೇನೆಯಲ್ಲಿ ಹಲವು ಸ್ಥಾನಗಳನ್ನು ಪಡೆದು ಸೇವೆ ಸಲ್ಲಿಸಿದರು. ಪ್ರಮುಖವಾಗಿ ಡೆಹರಾಡೂನ್ ರಾಜ್ ಪುಟಾಣ್ ರೈಫಲ್ಸ್, ೯ನೇ ಕಾಶ್ಮೀರ ರಾಷ್ಟಿçÃಯ ರೈಫಲ್ಸ್ನಲ್ಲಿ ಸೇವೆ ಸಲ್ಲಿಸಿದ ಇವರು, ಅಮೇರಿಕನ್ ವಾರ್ ಕಾಲೇಜಿನಲ್ಲಿ ತರಬೇತಿ ಪಡೆದರು. ಮಥುರಾದಲ್ಲಿ ಎಲೈಟ್ ಫಸ್ಟ್ ಸ್ಟೆççಕ್ ಕಾರ್ಪ್ಸ್ನ ಜನರಲ್ ಆಫೀಸರ್ ಕಮಾಂಡಿAಗ್ ಆಗಿದ್ದರು. ಲೆಫ್ಟಿನೆಂಟ್ ಜನರಲ್ ಆಗಿ ಸೇವೆ ಸಲ್ಲಿಸಿದ ನಂತರ ರಾಷ್ಟçಪತಿಗಳ ಮಿಲಿಟರಿ ಕಾರ್ಯದರ್ಶಿಯಾಗಿ, ಮಾಸ್ಟರ್ ಜನರಲ್ ಸಸ್ಟನೆನ್ಸ್, ಕರ್ನಲ್ ಆಫ್ ರಾಜ್ ಪುಟಾಣ್ ರೈಫಲ್ಸ್ ರೆಜಿಮೆಂಟ್ ನಲ್ಲಿ ಸೇವೆ ಸಲ್ಲಿಸಿ ಕಳೆದ ಏಪ್ರಿಲ್ ೩೦ ರಂದು ನಿವೃತ್ತರಾದರು. ವಿಶ್ವ ಸಂಸ್ಥೆಯ ಪರವಾಗಿ ಮೊಝಾಂಬಿಕ್ ಹಾಗೂ ಇರಾಕ್ ಮತ್ತು ಕುವೈತ್ನಲ್ಲಿ ಶಾಂತಿ ಸ್ಥಾಪನಾ ಪಡೆಯಲ್ಲಿಯೂ ಸೇವೆ ಸಲ್ಲಿಸಿದ್ದರು. ಇವರ ಪುತ್ರ ಸದ್ಯ ಮುಂಬಯಿಯಲ್ಲಿ ಇಂಜಿನಿಯರಿAಗ್ ವ್ಯಾಸಂಗ ಮಾಡುತ್ತಿದ್ದು, ಅವರ ವಿದ್ಯಾಭ್ಯಾಸಕ್ಕಾಗಿ ಪತ್ನಿ ತಶೀನಾ ಕಾರ್ಯಪ್ಪ ಅವರೊಂದಿಗೆ ಕೋದಂಡ ಪೂವಯ್ಯ ಕಾರ್ಯಪ್ಪ ಅವರು ಮುಂಬಯಿಯಲ್ಲಿ ನೆಲೆಸಿದ್ದಾರೆ.
ಮಾದಾಪುರ ಸಮೀಪದ ಗರಗಂದೂರು ಗ್ರಾಮದ ಇಂದ್ರಪ್ರಸ್ಥ ಎಸ್ಟೇಟ್ನಲ್ಲಿ ಸ್ವಗೃಹ ಹೊಂದಿರುವ ಕಾರ್ಯಪ್ಪ ಅವರು, ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದು, ನ. ೧ ರಂದು (ಇಂದು) ಬೆಂಗಳೂರಿನಲ್ಲಿ ನಡೆಯುವ ರಾಜ್ಯೋತ್ಸವ ಸಮಾರಂಭದಲ್ಲಿ ಪ್ರತಿಷ್ಠಿತ ಪ್ರಶಸ್ತಿ ಸ್ವೀಕರಿಸಲಿದ್ದಾರೆ.