ವೀರಾಜಪೇಟೆ, ಅ. ೩೧: ಬಾಗಲಕೋಟೆ ಜಿಲ್ಲೆಯ ಇಳಕಲ್ನಲ್ಲಿ ನಡೆದ ೩ನೇ ಭಾವೈಕ್ಯ ಸಮ್ಮೇಳನದಲ್ಲಿ ಪೋಯಂಗಡ ಅಯ್ಯಪ್ಪ ಅವರಿಗೆ ನ್ಯಾಷನಲ್ ಯೂತ್ ಐಕಾನ್-೨೦೨೩ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವಿಶ್ವದರ್ಶನ ಪತಾಕೆ ವತಿಯಿಂದ ನೀಡಲಾಗುವ ಪ್ರಶಸ್ತಿಯನ್ನು ಮಹಾಂತೇಶ್ವರ ಸಂಸ್ಥಾನ ಹಿರೇಮಠ, ಅಳಂದ, ಕಾಲಜ್ಞಾನ ಮಠ, ಗಜೇಂದ್ರಗಡ, ಪರಮಪೂಜ್ಯ ಸ್ವಾಮೀಜಿ ಪ್ರದಾನ ಮಾಡಿದರು.
ಪೋಯಂಗಡ ಅಯ್ಯಪ್ಪ ಅವರು ಗಣಿತ ಸಹ ಶಿಕ್ಷಕರಾಗಿ ಸತತ ೮ ವರ್ಷಗಳು ರಜೆ ಹಾಕದೆ ಕರ್ತವ್ಯ ನಿರ್ವಹಿಸಿ, ಪ್ರಬಾರ ಮುಖ್ಯ ಶಿಕ್ಷಕರಾಗಿ, ವೀರಾಜಪೇಟೆ ತಾಲೂಕಿನ ಶಿಕ್ಷಣ ಸಂಯೋಜಕರಾಗಿ, ಕೆ.ಪಿ.ಎಸ್ ಪೊನ್ನಂಪೇಟೆ ಇಲ್ಲಿ ಗಣಿತ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.