ಪಾಲಿಬೆಟ್ಟ, ಅ. ೩೦: ಕಾಡುಪ್ರಾಣಿಗಳ ಭಯದ ನಡುವೆ ಕೃಷಿ ಫಸಲುಗಳನ್ನು ಬೆಳೆದ ರೈತ ಕಂಗಾಲಾಗುತ್ತಿರುವುದು ಸಾಮಾನ್ಯ. ಆದರೆ, ಪಾಲಿಬೆಟ್ಟದ ಕಾಫಿ ತೋಟ ಒಂದರಲ್ಲಿ ಕಿಡಿಗೇಡಿಗಳ ಕೃತ್ಯದಿಂದ ಸುಮಾರು ೨೦೦ಕ್ಕೂ ಹೆಚ್ಚು ಮೆಣಸು ಬಳ್ಳಿಗಳು ನಾಶವಾಗಿವೆ. ಪಾಲಿಬೆಟ್ಟದ ಕೂತಂಡ ಚಂಗಪ್ಪ ಅವರ ಕಾಫಿ ತೋಟದಲ್ಲಿ ಘಟನೆ ನಡೆದಿದ್ದು, ಹಲವು ವರ್ಷಗಳಿಂದ ಕಾಫಿ ತೋಟದಲ್ಲಿ ಫಸಲಿನೊಂದಿಗೆ ಬೆಳೆದು ನಿಂತಿದ್ದ ಮೆಣಸು ಬಳ್ಳಿಗಳನ್ನು ಕಿಡಿಗೇಡಿಗಳು ಕಡಿದು ನಾಶಪಡಿಸಿದ್ದಾರೆ. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಮೂಕೊಂಡ ವಿಜು ಸುಬ್ರಮಣಿ ಕಾಫಿ ತೋಟಕ್ಕೆ ತೆರಳಿ ವೀಕ್ಷಿಸಿ ಕಿಡಿಗೇಡಿಗಳ ಕೃತ್ಯವನ್ನು ಖಂಡಿಸಿ ಕೂಡಲೇ ಕೃತ್ಯ ಎಸಗಿದವರನ್ನು ಬಂಧಿಸುವAತೆ ಒತ್ತಾಯಿಸಿದ್ದಾರೆ. ಕಿಡಿಗೇಡಿಗಳ ವಿರುದ್ಧ ಕೂತಂಡ ಚಂಗಪ್ಪ ಅವರ ಮಗ ಪೂವಣ್ಣ ಪಾಲಿಬೆಟ್ಟ ಪೊಲೀಸ್ ಠಾಣೆಗೆ ದೂರು ನೀಡಿ ಸೂಕ್ತ ಕ್ರಮಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ. ಪಾಲಿಬೆಟ್ಟ ಬೆಳೆಗಾರರ ಸಂಘದ ಅಧ್ಯಕ್ಷ ಕುಟ್ಟಂಡ ಅಜಿತ್ ಕರುಂಬಯ್ಯ ಕೃತ್ಯವನ್ನು ಖಂಡಿಸಿದ್ದಾರೆ.