ಸೋಮವಾರಪೇಟೆ, ಅ. ೩೦: ಮೊಗೇರ ಸೇವಾ ಸಮಾಜದ ಕುಸುಬೂರು ಗ್ರಾಮ ಶಾಖೆಯ ವತಿಯಿಂದ ಬಜೆಗುಂಡಿ ಗ್ರಾಮದಲ್ಲಿ ಮೊಗೇರ ಸಮಾಜ ಬಾಂಧವರಿಗೆ ವಿವಿಧ ಕ್ರೀಡಾಕೂಟ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಶಾಖೆಯ ಅಧ್ಯಕ್ಷ ಹೆಚ್.ಬಿ. ರಾಮಚಂದ್ರ ವಹಿಸಿದ್ದರು. ಕ್ರೀಡಾಕೂಟವನ್ನು ಸಮಾಜದ ಜಿಲ್ಲಾಧ್ಯಕ್ಷ ಪಿ.ಬಿ. ಜನಾರ್ಧನ್ ನೆರವೇರಿಸಿದರು. ರಾಜ್ಯಮಟ್ಟದಲ್ಲಿ ಹಾಕಿ ಕ್ರೀಡೆಯಲ್ಲಿ ಸಾಧನೆ ತೋರಿದ ಜೆ. ರಕ್ಷಿತಾ ಮತ್ತು ಎಂ. ರಶ್ಮಿ ಅವರುಗಳಿಗೆ ಕುಸುಬೂರು ಎಸ್ಟೇಟ್ ಮಾಲೀಕರಾದ ನಂದಿನಿ ಆನಂದ್ ಬಸಪ್ಪ ಅವರು ತಲಾ ೫ ಸಾವಿರ ಪ್ರೋತ್ಸಾಹ ಧನ ವಿತರಿಸಿದರು.
ಸಮಾರೋಪ ಸಮಾರಂಭದಲ್ಲಿ ಬೇಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಾರ್ವತಿ ಅವರನ್ನು ಸಮಾಜದ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಮೊಗೇರ ಸಮಾಜದ ಉಪಾಧ್ಯಕ್ಷ ಬಿ.ಎಂ. ದಾಮೋದರ್, ಪ.ಪಂ. ಸದಸ್ಯ ಪಿ.ಕೆ. ಚಂದ್ರು, ಜಿಲ್ಲಾ ಗೌರವಾಧ್ಯಕ್ಷ ಗೌತಮ್ ಶಿವಪ್ಪ, ತಾಲೂಕು ಅಧ್ಯಕ್ಷ ಪಿ.ಬಿ. ವಸಂತ, ಗೌರವಾಧ್ಯಕ್ಷ ನಂದ, ವ್ಯವಸ್ಥಾಪಕ ಕುಶಾಲಪ್ಪ, ಗ್ರಾ.ಪಂ. ಸದಸ್ಯೆ ಸುಧಾ ಗಣೇಶ್, ಗ್ರಾಮ ಶಾಖೆ ಉಪಾಧ್ಯಕ್ಷ ತನಿಯಪ್ಪ, ಕಾರ್ಯದರ್ಶಿ ಲೋಕೇಶ್, ಖಜಾಂಚಿ ಸುರೇಶ್, ನಾರಾಯಣ, ಕುಶಾಲಪ್ಪ, ದಿನೇಶ್, ಶಿವಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.