ಮಡಿಕೇರಿ, ಅ. ೩೦: ಕುಶಾಲನಗರದ ಸಮಸ್ತ ಭಜನಾ ಮಂಡಳಿಗಳು ಮತ್ತು ದೇವಾಲಯ ಸಮಿತಿಗಳ ಒಕ್ಕೂಟ ಗುರು ಸೇವಾ ಸಮಿತಿ, ಸನಾತನÀ ಹಿಂದೂ ಸಮಾಜ ಪರಿಷತ್, ಹರಿಹರಪುರದ ಶ್ರೀ ಆದಿಶಂಕರಾಚಾರ್ಯ ಶಾರದಾ ಲಕ್ಷಿö್ಮ ನರಸಿಂಹ ಪೀಠದ ಶ್ರೀಮಠದ ಹಾಗೂ ಕೊಡಗು ವನವಾಸಿ ಕಲ್ಯಾಣ ವತಿಯಿಂದ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ನವೆಂಬರ್ ೧, ೨ ಹಾಗೂ ೩ ರಂದು ಸಂಜೆ ೬ ಗಂಟೆಗೆ ಕುಶಾಲನಗರ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಶ್ರೀ ಚಕ್ರ ನವಾರ್ಣ ಪೂಜೆ, ೫ ರಿಂದ ೬ ಗಂಟೆತನಕ ಸಮಸ್ತ್ತ ಭಜನಾ ಮಂಡಳಿಯಿAದ ಭಜನೆ. ತಾ. ೩ ರಂದು ಸಂಜೆ ೫ ರಿಂದ ೬ ಗಂಟೆ ತನಕ ಲಲಿತಾ ಸಹಸ್ರನಾಮ ಪಾರಾಯಣ ಮತ್ತು ಕುಂಕುಮಾರ್ಚನೆ ನಡೆಯಲಿದೆ.
ತಾ. ೨ ರಂದು ಕುಶಾಲನಗರ ವಿವೇಕಾನಂದ ವಿದ್ಯಾಸಂಸ್ಥೆ ಸಭಾಂಗಣದಲ್ಲಿ ಸಮಾನ ಸಂಸ್ಕಾರ ಕಾರ್ಯಾಗಾರ, ಬ್ಯಾಡಗೊಟ್ಟ, ದಿಡ್ಡಳ್ಳಿ ಪುನರ್ವಸತಿ ಕೇಂದ್ರ ಮದಲಾಪುರದಲ್ಲಿ ಭಜನೆ ಮತ್ತು ಶಿವದೀಕ್ಷಾ ಕಾರ್ಯಕ್ರಮಗಳು ನಡೆಯಲಿದೆ.