ಮಡಿಕೇರಿ, ಅ. ೩೦: ೨೦೨೩-೨೪ನೇ ಸಾಲಿನ ಪ್ರೌಢಶಾಲಾ ಮಟ್ಟದ ಕ್ರೀಡಾಕೂಟದಲ್ಲಿ ಚೇರಂಬಾಣೆ ಅರುಣ ಪ್ರೌಢಶಾಲೆ ವಿವಿಧ ಕ್ರೀಡೆಯಲ್ಲಿ ವಿಜೇತರಾಗಿ ಸಾಧನೆ ಮಾಡಿದೆ.
ಬಾಲಕರ ಹಾಕಿ ಕ್ರೀಡಾಕೂಟ ತಾಲೂಕು ಮಟ್ಟಕ್ಕೆ ಆಯ್ಕೆ, ಬಾಲಕಿಯರ ವಾಲಿಬಾಲ್ ತಾಲೂಕು ಮಟ್ಟಕ್ಕೆ ಆಯ್ಕೆ, ಬಾಲಕರ ಖೋ ಖೋ ತಾಲೂಕು ಮಟ್ಟದಲ್ಲಿ ದ್ವಿತೀಯ, ಬಾಲಕಿಯರ ಕಬಡ್ಡಿ ತಾಲೂಕು ಮಟ್ಟದಲ್ಲಿ ದ್ವಿತೀಯ, ಬಾಲಕಿಯರ ಖೋ ಖೋ ತಾಲೂಕು ಮಟ್ಟ ಪ್ರಥಮ.೬.೪x ೧೦೦ ಮೀಟರ್ ರಿಲೇ ಬಾಲಕಿಯರು ಜಿಲ್ಲಾ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದು ವನಿತಾ ಡಿ.ಎಸ್., ಮೋನಿಷಾ ಕೆ.ಜಿ., ತನುಶ್ರೀ ಹೆಚ್.ವಿ., ಜೀವಿತ ಹೆಚ್. ವಿ. ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವನಿತ. ಡಿ.ಎಸ್. ೪೦೦ ಮೀಟರ್ ಓಟದಲ್ಲಿ ಕೊಡಗು ಜಿಲ್ಲಾಮಟ್ಟದ ಕ್ರೀಡಾ ಕೂಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.