ವೀರಾಜಪೇಟೆ, ಅ. ೩೦: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ, ರಾಷ್ಟಿçÃಯ ಸೇವಾ ಯೋಜನಾ ಘಟಕದ ವತಿಯಿಂದ ಪೆರುಂಬಾಡಿಯ ಚೆಕ್‌ಪೋಸ್ಟ್ (ತನಿಖಾ ಠಾಣೆ) ಸುತ್ತಮುತ್ತಲಿನ ಪರಿಸರವನ್ನು ಶುಚಿಗೊಳಿಸುವ ಸಲುವಾಗಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳ ಲಾಗಿತ್ತು.

ಸುಮಾರು ೭೦ ಸ್ವಯಂ ಸೇವಕ-ಸೇವಕಿಯರನ್ನೊಳಗೊಂಡ ತಂಡವು ಚೆಕ್‌ಪೋಸ್ಟ್ನ ಸಿಬ್ಬಂದಿಗಳ ಮಾರ್ಗದರ್ಶನದೊಂದಿಗೆ ಈ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪೆರುಂಬಾಡಿ ಚೆಕ್‌ಪೋಸ್ಟ್ ಸುತ್ತಮುತ್ತಲಿನ ಪರಿಸರದಲ್ಲಿ ದಾರಿ ಹೋಕರು, ಸ್ಥಳೀಯರು ರಸ್ತೆ ಬದಿಯಲ್ಲಿ ಎಸೆದಿದ್ದ ಪ್ಲಾಸ್ಟಿಕ್ ವಸ್ತುಗಳು, ಇನ್ನಿತರ ಹಸಿ ಮತ್ತು ಒಣ ತ್ಯಾಜ್ಯಗಳನ್ನು ಸಂಗ್ರಹಿಸಿ ಪುರಸಭೆಯ ಕಸ ಸಂಗ್ರಹಣೆ ಮಾಡುವ ಗಾಡಿಗೆ ನೀಡಲಾಯಿತು. ನಂತರ ತನಿಖಾ ಠಾಣೆಯ ಸುತ್ತಮುತ್ತಲು ಬೆಳೆದಿದ್ದ ಗಿಡಗಂಟಿಗಳನ್ನು ಕಡಿದು ಸ್ವಚ್ಛಗೊಳಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ದಯಾನಂದ ಕೆ.ಸಿ. ಅವರು ವಹಿಸಿದ್ದರು. ಕಾರ್ಯಕ್ರಮದಲಿ ್ಲರಾಷ್ಟಿçÃಯ ಸೇವಾ ಯೋಜನಾ ಘಟಕದ ಯೋಜನಾಧಿಕಾರಿ ವೇಣುಗೋಪಾಲ್ ಹೆಚ್.ಎಸ್. ಮತ್ತು ಪೆರುಂಬಾಡಿ ಚೆಕ್‌ಪೋಸ್ಟ್ನ ಸಿಬ್ಬಂದಿಗಳು ಹಾಗೂ ಸ್ವಯಂ ಸೇವಕ-ಸೇವಕಿಯರು ಹಾಜರಿದ್ದರು.