ಮಡಿಕೇರಿ, ಅ. ೩೦: ಕೊಡಗಿನಲ್ಲಿ ಮೂಲ ಬೇರು ಹೊಂದಿದ್ದು, ಉದ್ಯೋಗ-ವ್ಯಾಪಾರ-ಶಿಕ್ಷಣ ಮತ್ತಿತರ ಹಲವಾರು ಕಾರಣಗಳಿಂದಾಗಿ ಪ್ರಪಂಚದಾದ್ಯAತ ಹಂಚಿ ಹೋಗಿರುವ ಕೊಡವ ಜನಾಂಗವನ್ನು ಒಂದಾಗಿ ಒಂದೇ ವೇದಿಕೆಯಡಿ ಸೇರಿಸುವ ಪ್ರಯತ್ನವೊಂದು ನಡೆಯುತ್ತಿದೆ.
ಜನಾಂಗದ ಪರವಾಗಿ ಕಳೆದ ಹಲವು ಸಮಯದಿಂದ ಅವಿರತವಾಗಿ ಶ್ರಮಿಸುತ್ತಿರುವ ಕೆಲವರು ಯುವಕ-ಯುವತಿಯರನ್ನು ಒಳಗೊಂಡ ‘ಕನೆಕ್ಟಿಂಗ್ ಕೊಡವಾಸ್ ಟ್ರಸ್ಟ್’ ಈ ಸವಾಲಿನ ಪ್ರಯತ್ನವನ್ನು ನಡೆಸಲು ಮುಂದಾಗಿದೆ. ಜಿಲ್ಲಾ ಕೇಂದ್ರವಾದ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಆವರಣದಲ್ಲಿ ಇದೇ ಡಿಸೆಂಬರ್ ೨೯ ಹಾಗೂ ೩೦ ರಂದು ‘ಗ್ಲೋಬಲ್ ಕೊಡವ ಸಮ್ಮಿಟ್’ (ಜಾಗತಿಕ ಕೊಡವ ಸಮ್ಮೇಳನ) ಆಯೋಜಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಕನೆಕ್ಟಿಂಗ್ ಕೊಡವಾಸ್ ಟ್ರಸ್ಟ್ ಸಂಘಟನೆ ಕಳೆದ ಹಲವಷ್ಟು ಸಮಯಗಳಿಂದ ಶ್ರಮವಹಿಸಿದ್ದು, ಇದೀಗ ಇದರ ಅಂತಿಮ ಸಿದ್ಧತೆಗಳು ನಡೆಯುತ್ತಿವೆ. ಕೇವಲ ಸಭೆ ಸಮಾರಂಭದ ರೀತಿಯಲ್ಲಿ ಮಾತ್ರ ಕಾರ್ಯಕ್ರಮವನ್ನು ನಡೆಸುವ ಬದಲಾಗಿ ಜಿಲ್ಲೆಯಲ್ಲಿ ತಾಯಿ ಬೇರು ಹೊಂದಿರುವ ಕೊಡವ ಜನಾಂಗದ ಪ್ರಸ್ತುತದ ವಾಸ್ತವತೆಯ ಎಲ್ಲಾ ಚಿತ್ರಣದ ಸಮಗ್ರ ಮಾಹಿತಿ-ಅಧ್ಯಯನ, ಚಿತ್ರಣಗಳನ್ನು ಒಳಗೊಂಡAತೆ ಜನಜಾಗೃತಿ ಮೂಡಿಸುವುದು, ಎಲ್ಲೆಡೆ ಚದುರಿದಂತಿರುವ ಜನಾಂಗದವರನ್ನು ಮತ್ತೆ ಪರಸ್ಪರ ಬೆರೆಯುವಂತೆ ಮಾಡಿ ಸಾಮರಸ್ಯ ಮೂಡಿಸುವುದು, ಮಾತೃ ಜಿಲ್ಲೆ, ಸಂಸ್ಕೃತಿ, ಆಚಾರ ವಿಚಾರಗಳ ಮಹತ್ವವನ್ನು ಸಾರುವುದು, ಈಗಿನ ವಾಸ್ತವತೆ, ಆಗಬೇಕಿರುವ ಅಗತ್ಯತೆಗಳ ಕುರಿತಾಗಿ ಬೆಳಕು ಚೆಲ್ಲುವ ಪ್ರಯತ್ನವೆಂಬAತೆ ಕಠಿಣ ಸವಾಲಿನ ಈ ಕೆಲಸವನ್ನು ಕನೆಕ್ಟಿಂಗ್ ಕೊಡವಾಸ್ ಸಂಘಟನೆ ಮಾಡುತ್ತಿದೆ ಎಂದು ಇದರ ಪ್ರಮುಖರು ತಿಳಿಸಿದ್ದಾರೆ.
ಪೂರ್ವಭಾವಿ ಪ್ರಯತ್ನಗಳು
ಈ ಕಾರ್ಯಕ್ರಮಕ್ಕೆ ಪೂರ್ವಭಾವಿ ತಯಾರಿ ಎಂಬAತೆ ಸಂಘಟನೆ ಈಗಾಗಲೇ ಜನಾಂಗದ ಸಮಗ್ರ ಅಧ್ಯಯನವನ್ನು ನಡೆಸಿ ಮಾಹಿತಿ ಸಂಗ್ರಹಿಸಿದೆ. ಬಹುತೇಕ ಊರು-ಊರುಗಳಿಗೆ, ಮನೆ-ಮನೆಗಳಿಗೆ ತೆರಳಿ ಆಯಾ ಮನೆತನದ ಇತಿಹಾಸವನ್ನು ಸಂಗ್ರಹಿಸಲಾಗಿದೆ. ೨೦೧೭ರಿಂದಲೇ ಸಂಘಟನೆ ಈ ಕೆಲಸಕ್ಕೆ ಮುಂದಾಗಿದ್ದು, ಇದೀಗ ಬಹುತೇಕ ಅಧ್ಯಯನ ಪೂರ್ಣಗೊಂಡಿದೆ. ಪ್ರಸ್ತುತ ಇರುವ ಜನಾಂಗದ ನಿಖರ ಜನಸಂಖ್ಯೆ ಇರುವ ಕುಟುಂಬಗಳ ಸಂಖ್ಯೆ, ವಿನಾಶದ ಅಂಚಿನಲ್ಲಿರುವ ಕುಟುಂಬಗಳ ವಿವರ, ಆಚರಣೆಯಲ್ಲಿರುವ ಪದ್ಧತಿ-ಪರಂಪರೆಗಳು ಮತ್ತಿತರ ವಿಚಾರಗಳ ಕುರಿತಾಗಿ ವಿವರ ಸಂಗ್ರಹಿಸಲಾಗಿದೆ.
ತಕ್ಕಾಮೆ, ಊರಿನ ದೇವಾಲಯಗಳು, ಮಂದ್-ಮಾನಿಗಳು, ಕುಟುಂಬ-ಊರಿನ ಆಡಳಿತಾತ್ಮಕ ಅಂಶಗಳು ಇತ್ಯಾದಿ ಮಾಹಿತಿಗಳೆಲ್ಲವನ್ನು ಕ್ರೋಢಿಕರಿಸಿ ದಾಖಲೀಕರಿಸುವ ಕೆಲಸವೂ ನಡೆದಿದೆ.
ಇವೆಲ್ಲದರ ಸಮಗ್ರವಾದ ವಿಚಾರಧಾರೆಗಳೊಂದಿಗೆ, ಎರಡು ದಿನಗಳ ಸಮ್ಮೇಳನದಲ್ಲಿ ಜನಾಂಗದ ಆಚಾರ-ವಿಚಾರಗಳನ್ನು ಪ್ರತಿಬಿಂಬಿಸುವ ವೈವಿಧ್ಯಮಯ ಕಾರ್ಯಕ್ರಮಗಳು, ಸಾಂಸ್ಕೃತಿಕ ಪ್ರದರ್ಶನ, ಮೆರವಣಿಗೆ ಮತ್ತಿತರ ಕಾರ್ಯಕ್ರಮಗಳೊಂದಿಗೆ ಸಮ್ಮೇಳನ ಡಿಸೆಂಬರ್ ೨೯-೩೦ರಂದು ಕೊಡಗು ಜಿಲ್ಲಾ ಕೇಂದ್ರದಲ್ಲಿ ಜರುಗಲಿದೆ.
ಸಮ್ಮೇಳನದಲ್ಲಿನ ವಿಶೇಷತೆಗಳು
ಟ ಜನಾಂಗದ ಸರ್ವಾಂಗೀಣ ಅಭಿವೃದ್ಧಿ ವಿಚಾರಗಳಿಗೆ ಒತ್ತು ನೀಡುವುದು.
ಟ ಸಾಂಸ್ಕೃತಿಕ ಪ್ರದರ್ಶನ- ಹಬ್ಬಹರಿದಿನಗಳ ಆಚರಣೆ- ನೃತ್ಯ, ಹಾಡು ಮತ್ತಿತರ ಕಲಾ ಪ್ರಕಾರಗಳು.
ಟ ಐನ್ಮನೆ-ಮಂದ್, ಪತ್ತಾಯ-ಕೈಮಡಗಳ ಪ್ರಾತ್ಯಕ್ಷಿಕೆ- ವಿವರ ಮಾಹಿತಿ.
ಟ ಐತಿಹಾಸಿಕ ವಸ್ತುಗಳು- ಪರಿಕರಗಳನ್ನು ಒಳಗೊಂಡ
ಮ್ಯೂಸಿಯಂ.
(ಮೊದಲ ಪುಟದಿಂದ)
ಟ ಉಡುಗೆ-ತೊಡುಗೆ-ಸಾಂಪ್ರದಾಯಿಕ ಅಡುಗೆ. ಕಲೆ-ಕರಕುಶಲ ಇತ್ಯಾ ದಿಗಳ ಕಾರ್ಯಾಗಾರ.
ಟ ಭಾಷಾ ಪ್ರಚಾರಕ್ಕೆ ಸಂಬAಧಿಸಿದAತೆ ಲಿಪಿಯ ಉತ್ತೇಜನ ಪುಸ್ತಕ ಮೇಳ, ಅಧಿವೇಶನ.
ಟ ಜನಾಂಗದ ಹಕ್ಕು ಬಾಧ್ಯ ತೆಗಳಿಗೆ, ಸಂಬAಧಿಸಿದ ಪ್ಯಾನಲ್ ಚರ್ಚೆಗಳು.
ಟ ಶಿಕ್ಷಣ-ಕ್ರೀಡೆ-ಸೇನೆ ಮತ್ತಿತರ ಸಾಧನೆಗಳ ವಿವರ.
ಟ ಸಾಂಸ್ಕೃತಿಕವಾದ ವೈವಿಧ್ಯಮಯ ಸ್ಪರ್ಧೆಗಳು.
ಟ ಸಂಗೀತ-ನೃತ್ಯಗಳನ್ನು ಒಳಗೊಂಡ ವರ್ಣರಂಜಿತ ಪ್ರದರ್ಶನ, ಮೆರವಣಿಗೆ
ಟ ವ್ಯಾಪಾರ-ವಹಿವಾಟುಗಳ ಬಗ್ಗೆ ಮಾಹಿತಿ, ಉತ್ತೇಜನ
ಟ ತಾಯ್ನಾಡಿಗೆ ಮರಳುವ ಬಗ್ಗೆ, ಬೇಕಾದ ಅಗತ್ಯ ಸೇವೆಗಳ ಬಗ್ಗೆ ಬೆಂಬಲ- ಕ್ರೋಢೀಕರಣ
ಟ ಕರಕುಶಲ- ವ್ಯಾಪಾರ ಮೇಳ
ಟ ಸಾಂಸ್ಕೃತಿಕ-ಸಾಮಾಜಿಕ ಮಾತುಕತೆಗಳು, ಉಪನ್ಯಾಸಗಳು, ಇತ್ಯಾದಿ
ಸದ್ಯದಲ್ಲಿ ವಿವರ ಬಿಡುಗಡೆ
ಪ್ರಸ್ತುತ ಬಹುತೇಕ ಅಂಶಗಳ ವಿವರವನ್ನು ಕ್ರೋಢೀಕರಿಸಲಾಗಿದೆ. ಇದರ ಮಾಹಿತಿಯನ್ನು ಸದ್ಯದಲ್ಲಿ ಬಿಡುಗಡೆ ಮಾಡುವ ಚಿಂತನೆ ನಡೆಸಲಾಗಿದೆ ಎಂದು ಸಂಘಟನೆಯ ಪ್ರಮುಖರು ತಿಳಿಸಿದ್ದಾರೆ. ಸುಮಾರು ೩೨ ಮಂದಿಯ ತಂಡ ಈ ಕುರಿತು ಹಲವು ವರ್ಷಗಳಿಂದ ಸಮೀಕ್ಷೆ ನಡೆಸಿದೆ.
ಸದ್ಯದಲ್ಲಿ ವಿವರ ಬಿಡುಗಡೆ