ವೀರಾಜಪೇಟೆ, ಅ. ೩೦: ಆರ್ಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೆರ್ಮೆಕಾಡು ಗೋಮಾಳವನ್ನು ಗೋಮಾಳವಾಗಿಯೇ ಉಳಿಸಿಕೊಳ್ಳಬೇಕು ಎಂದು ರಾಜ್ಯ ಉಚ್ಚನ್ಯಾಯಾಲಯದ ಆದೇಶದಂತೆ ಈ ಹಿಂದಿನ ಜಿಲ್ಲಾಧಿಕಾರಿ ೩೨.೨೫ ಎಕರೆ ಜಮೀನನ್ನು ಗೋಮಾಳ ಎಂದು ಮೀಸಲಿರಿಸಿ ಆದೇಶ ನೀಡಿದ್ದಾರೆ ಎಂದು ಆರ್ಜಿ ಗೋಮಾಳ ಸಂರಕ್ಷಣಾ ಸಮಿತಿ ಅಧ್ಯಕ್ಷ ಜಿ.ಕೆ ರಾಮಯ್ಯ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ವೆ ನಂಬರ್ ೩೧೫/೧ರ ೮೯.೦೬ ಎಕರೆ ಜಮೀನನ್ನು ಕೊಡಗು ಜಿಲ್ಲಾಧಿಕಾರಿ ೨೫.೦೯.೧೯೬೦ ವೀರಾಜಪೇಟೆ, ಅ. ೩೦: ಆರ್ಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೆರ್ಮೆಕಾಡು ಗೋಮಾಳವನ್ನು ಗೋಮಾಳವಾಗಿಯೇ ಉಳಿಸಿಕೊಳ್ಳಬೇಕು ಎಂದು ರಾಜ್ಯ ಉಚ್ಚನ್ಯಾಯಾಲಯದ ಆದೇಶದಂತೆ ಈ ಹಿಂದಿನ ಜಿಲ್ಲಾಧಿಕಾರಿ ೩೨.೨೫ ಎಕರೆ ಜಮೀನನ್ನು ಗೋಮಾಳ ಎಂದು ಮೀಸಲಿರಿಸಿ ಆದೇಶ ನೀಡಿದ್ದಾರೆ ಎಂದು ಆರ್ಜಿ ಗೋಮಾಳ ಸಂರಕ್ಷಣಾ ಸಮಿತಿ ಅಧ್ಯಕ್ಷ ಜಿ.ಕೆ ರಾಮಯ್ಯ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ವೆ ನಂಬರ್ ೩೧೫/೧ರ ೮೯.೦೬ ಎಕರೆ ಜಮೀನನ್ನು ಕೊಡಗು ಜಿಲ್ಲಾಧಿಕಾರಿ ೨೫.೦೯.೧೯೬೦ ಮಂಜೂರಾತಿಗಳನ್ನು ವಜಾ ಮಾಡಬೇಕೆಂದು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿತ್ತು. ವಾದ ವಿವಾದಗಳನ್ನು ಆಲಿಸಿದ ನ್ಯಾಯಾಲಯ ಗೋಮಾಳ ಜಮೀನನ್ನು ಖಾಸಗಿಯವರಿಗೆ ಮಂಜೂರು ಮಾಡಿದ್ದ ಜಿಲ್ಲಾಧಿಕಾರಿ ಆದೇಶವನ್ನು ವಜಾಗೊಳಿಸಿದೆ.
ಗೋಮಾಳ ಸಮಿತಿ ಉಳಿದ ಮಂಜೂರಾತಿಗಳನ್ನು ಸಹ ವಜಾ ಮಾಡಬೇಕೆಂದು ಉಚ್ಚ ನ್ಯಾಯಾಲಯಕ್ಕೆ ಅರ್ಜಿ ಹಾಕಿದಾಗ ಮಂಜೂರಾತಿ ಪಡೆದುಕೊಂಡವರು ಜಮೀನಿನಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವ ಕಾರಣ ಅವುಗಳನ್ನು ಹೊರತುಪಡಿಸಿ, ವಿಚಾರಣಾ ಸಂದರ್ಭದಲ್ಲಿ ಉಚ್ಚ ನ್ಯಾಯಾಲಯವು ಜಮೀನನ್ನು ಗೋಮಾಳವಾಗಿಯೇ ಉಳಿಸಿಕೊಳ್ಳಬೇಕೆಂದು ಆದೇಶಿಸಿದೆ.
ಈ ಹಿನ್ನೆಲೆ ಹಿಂದಿನ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ, ೪೬.೪೪ ಎಕರೆ ಪೈಕಿ ಸರ್ವೆಯಿಂದ ಗುರುತಿಸಿದ ೩೨.೨೫ ಎಕರೆ ಜಮೀನನ್ನು ಗೋಮಾಳ ಎಂದು ಕಂದಾಯ ಕಾಯ್ದೆ ಅನ್ವಯ ಮೀಸಲಿರಿಸಿ ಆದೇಶಿಸಿದ್ದಾರೆ. ಅಲ್ಲದೆ ಗೋಮಾಳ ಜಮೀನಿನಲ್ಲಿ ಸರ್ಕಾರದ ನಿರ್ದೇಶನಗಳನ್ನು ಪಾಲಿಸದೆ ೧೦ ಎಕರೆ ಜಮೀನನ್ನು ಖಾಸಗಿ ಅವರಿಗೆ ಮಂಜೂರು ಮಾಡಿರುವುದನ್ನು ವಜಾಗೊಳಿಸಲು ಸರ್ಕಾರದೊಡನೆ ಈಗಾಗಲೇ ವ್ಯವಹರಿಸಲಾಗಿದೆ, ಅದರಲ್ಲೂ ಗೋಮಾಳ ಸಂರಕ್ಷಣಾ ಸಮಿತಿ ಜಯ ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಗೋಷ್ಠಿಯಲ್ಲಿ ಗೋಮಾಳ ಸಮಿತಿ ಕಾರ್ಯದರ್ಶಿ ಕೆ.ಎಸ್ ಅಯ್ಯಣ್ಣ, ಖಜಾಂಚಿ ಬಿ.ವಿ ಹೇಮಂತ್, ಸದಸ್ಯರಾದ ಬಿ.ಆರ್ ಗಣೇಶ್, ವಿವೇಕ್ ರೈ, ಕುಶಾಲಪ್ಪ ಉಪಸ್ಥಿತರಿದ್ದರು.