ಮಡಿಕೇರಿ, ಅ. ೩೦: ಹಾಕಿ ಕರ್ನಾಟಕ ಅಧೀನ ಸಂಸ್ಥೆ ಯಾಗಿರುವ ಹಾಕಿ ಕೂರ್ಗ್ ವತಿಯಿಂದ ವರ್ಷಂಪ್ರತಿ ನಡೆಸಿ ಕೊಂಡು ಬರಲಾಗುತ್ತಿರುವ ಹಾಕಿ ಕೂರ್ಗ್ ಲೀಗ್ ಮತ್ತು ನಾಕೌಟ್ ಹಾಕಿ ಪಂದ್ಯಾವಳಿ ನವೆಂಬರ್ ೧೦ರಿಂದ ಆರಂಭಗೊಳ್ಳಲಿದೆ. ಕೊಡಗು ಜಿಲ್ಲೆಯ ಒಟ್ಟು ೨೬ ಪ್ರತಿಷ್ಠಿತ ತಂಡಗಳು ಈ ಪಂದ್ಯಾವಳಿಯಲ್ಲಿ ಸೆಣಸಾಡಲಿವೆ.

ಪೊನ್ನಂಪೇಟೆಯ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಟರ್ಫ್ ಮೈದಾನದಲ್ಲಿ ಪಂದ್ಯಾವಳಿ ನಡೆಯಲಿದ್ದು, ೨೬ ತಂಡಗಳನ್ನು ನಾಲ್ಕು ಪೂಲುಗಳನ್ನಾಗಿ ವಿಂಗಡಣೆ ಮಾಡಿ ಆಡಿಸಲಾಗುವದು. ಆರಂಭಿಕ ಹಂತದಲ್ಲಿ ಲೀಗ್ ಮಾದರಿ ಪಂದ್ಯಾಟಗಳು ನಡೆಯಲಿದ್ದು, ನಂತರದಲ್ಲಿ ಅಂಕಪಟ್ಟಿ ಯಲ್ಲಿ ಅಧಿಕ ಅಂಕ ಗಳಿಸುವ ತಂಡಗಳ ನಡುವೆ ನಾಕೌಟ್ ಮಾದರಿ ಆಟಗಳು ನಡೆಯಲಿವೆ.

ಭಾಗವಹಿಸಲಿರುವ ತಂಡಗಳು

ಈ ಒಂದು ಪಂದ್ಯಾವಳಿಯಲ್ಲಿ ಒಟ್ಟು ೨೬ ತಂಡಗಳು ಭಾಗವಹಿಸಲಿವೆ. ಈಶ್ವರ ಯೂತ್ ಕ್ಲಬ್, ಬೇಗೂರು, ಕೋಣನಕಟ್ಟೆ ಇಲವೆನ್, ಸ್ಪೋರ್ಟ್ಸ್ ಅಂಡ್ ರಿಕ್ರಿಯೇಶನ್ ಕ್ಲಬ್, ಕಾಕೋಟುಪರಂಬು, ಮಲ್ಮ ಕಕ್ಕಬೆ, ಆಶ್ವಿಸ್ ಸ್ಪೋರ್ಟ್ಸ್ ಫೌಂಡೇಶನ್, ಬ್ಲೂ ಸ್ಟಾರ್ ಸೋಮವಾರಪೇಟೆ, ಶಿವಾಜಿ ನಾಪೋಕ್ಲು, ಚಾರ್ಮರ್ಸ್ ಮಡಿಕೇರಿ, ಅಂಜಿಗೇರಿ ನಾಡ್, ಹುದಿಕೇರಿ, ಎಎಸ್‌ಸಿ ಅಮ್ಮತ್ತಿ, ಕಿರುಗೂರು ಸ್ಪೋರ್ಟ್ಸ್ ಕ್ಲಬ್, ಎಂಆರ್‌ಎಫ್ ಮೂರ್ನಾಡ್, ಬೊಟ್ಟಿಯತ್‌ನಾಡ್ ಕುಂದ, ಬೊಳಿಯೂರ್ ಸ್ಪೋರ್ಟ್ಸ್ ಕ್ಲಬ್, ಚೆಂಬೆಬೆಳ್ಳೂರು, ಡ್ರಿಬ್ರ‍್ಸ್ ಹೆಂಪ್-ಬಿಶೆಟ್ಟಿಗೇರಿ, ಬೇರಳಿನಾಡ್ ಕಂಡAಗಾಲ, ಬ್ಲೇಝ್ ಮೂರ್ನಾಡ್, ಬ್ಲೂ ಸ್ಟಾರ್ ಪೊದ್ದುಮಾನಿ, ಕೊಡವ ಸಮಾಜ ಕ್ಲಬ್, ವೀರಾಜಪೇಟೆ, ಡಾಲ್ಫಿನ್ಸ್ ಸೋಮವಾರಪೇಟೆ, ಸ್ಪೋರ್ಟ್ಸ್ ಸ್ಕೂಲ್ ಕೂಡಿಗೆ, ಬಿಬಿಸಿ ಗೋಣಿಕೊಪ್ಪ, ಟೈಕೂನ್ ಸ್ಪೋರ್ಟ್ಸ್ ಕ್ಲಬ್ ಕುಶಾಲನಗರ, ಸ್ಪೋರ್ಟ್ಸ್ ಹಾಸ್ಟೆಲ್ ಪೊನ್ನಂಪೇಟೆ, ಪಾಲ್ಕನ್ಸ್ ಕ್ಲಬ್ ತೂಚಮಕೇರಿ/ಚಿಕ್ಕಮಂಡೂರು, ಮಹದೇವ ಸ್ಪೋರ್ಟ್ಸ್ ಕ್ಲಬ್ ತಂಡಗಳು ಭಾಗವಹಿಸಲಿವೆ ಎಂದು ಹಾಕಿ ಕೂರ್ಗ್ ಅಧ್ಯಕ್ಷ ಪಳಂಗAಡ ಲವ ತಿಳಿಸಿದ್ದಾರೆ.