ಶನಿವಾರಸಂತೆ, ಅ. ೨೫ : ಪಟ್ಟಣದ ತ್ಯಾಗರಾಜ ಕಾಲೋನಿಯಲ್ಲಿ ರುವ ಶ್ರೀಚಾಮುಂಡೇಶ್ವರಿ ದೇವಿ-ಗುಳಿಗ ದೈವದ ಕ್ಷೇತ್ರದಲ್ಲಿ ಮಂಗಳವಾರ ವಿಜಯದಶಮಿ ಹಬ್ಬದ ಪ್ರಯುಕ್ತ ಶ್ರೀಚಾಮುಂಡೇಶ್ವರಿ ದೇವಿ ಹಾಗೂ ಗುಳಿಗ ದೈವದ ಆರಾಧನೆ, ಪೂಜಾ ಕೈಂಕರ್ಯಗಳು ಶ್ರದ್ಧಾಭಕ್ತಿಯಿಂದ ಜರುಗಿದವು.
ಕ್ಷೇತ್ರದಲ್ಲಿ ಬನದ ಜಾಗದ ಕುಟುಂಬಸ್ಥರಾದ ಸಂತೋಷ್ ಹಾಗೂ ಯಶಸ್ವಿನಿ ರಾಜೇಶ್ ಕೋಟ್ಯಾನ್ ಅವರ ಸೇವಾರ್ಥ ಪೂಜೆಯ ಜತೆಗೆ, ಪುರೋಹಿತ ದರ್ಶನ್ ಹಾಗೂ ಭಕ್ತಾದಿಗಳು ಚಾಮುಂಡೇಶ್ವರಿ ದೇವಿ ಮತ್ತು ಗುಳಿಗ ದೈವಕ್ಕೆ ವಿವಿಧ ಬಗೆಯ ಹೂವುಗಳು, ಗಾಜಿನ ಬಳೆ, ಹಣ್ಣುಕಾಯಿ ಮತ್ತು ನೈವೇದ್ಯ ಸಮರ್ಪಿಸಿ ಪೂಜಿಸಿದರು. ಅರ್ಚಕರಾದ ಪ್ರಕಾಶ್ಚಂದ್ರ ಸುವರ್ಣ ಹಾಗೂ ಸಂತೋಷ್ ಕರ್ಕೇರ ಪೂಜಾ ವಿಧಿ ನೆರವೇರಿಸಿದರು.
ಪಟ್ಟಣ, ತ್ಯಾಗರಾಜ ಕಾಲೋನಿ, ಸುಳುಗಳಲೆ ಕಾಲೋನಿಯ ಭಕ್ತರು ಶ್ರದ್ಧಾಭಕ್ತಿಯಿಂದ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮಹಾಮಂಗಳಾರತಿ ನಂತರ ತೀರ್ಥ-ಪ್ರಸಾದ ವಿನಿಯೋಗ ನಡೆಯಿತು. ೯ ದಿನಗಳ ನವರಾತ್ರಿಯ ನವದುರ್ಗೆಯರ ಆರಾಧನೆಯೊಂದಿಗೆ ೧೦ನೇ ದಿನದ ವಿಜಯದಶಮಿ ಪೂಜಾ ಕಾರ್ಯಕ್ರಮ ವಿಜೃಂಭಣೆಯಿAದ ನಡೆದು ಸಂಪನ್ನವಾಯಿತು.