ಮಡಿಕೇರಿ, ಅ. ೨೫: ವಿಜಯದಶಮಿಯ ಮುನ್ನಾ ದಿನದಂದು ನಡೆಯುವ ಆಯುಧಪೂಜಾ ಕಾರ್ಯಕ್ರಮ ಭಾನುವಾರದಂದು ಜಿಲ್ಲೆಯಾದ್ಯಂತ ಸಂಭ್ರಮ ಸಡಗರದಿಂದ ನಡೆಯಿತು. ವಾಹನ, ಅಂಗಡಿ, ಯಂತ್ರೋಪಕರಣಗಳು, ಕೈಗಾರಿಕಾ ಸ್ಥಳಗಳು ಸೇರಿದಂತೆ ಕಚೇರಿಗಳಲ್ಲಿ ಪೂಜಾ ಕೈಂಕರ್ಯದೊAದಿಗೆ ವೈವಿಧ್ಯಮಯ ಕಾರ್ಯಕ್ರಮಗಳು ಜರುಗಿದವು.
ಬಹುತೇಕ ಇಡೀ ಜಿಲ್ಲೆಯಾದ್ಯಂತ ಅಂಗಡಿ - ಮುಂಗಟ್ಟುಗಳು, ವಾಹನ ಗಳು ಅಲಂಕೃತಗೊAಡು ಆಯುಧಪೂಜಾ ಹಿನ್ನೆಲೆಗೆ ಮೆರುಗು ನೀಡಿತ್ತು. ವಿವಿಧ ಸಂಘ - ಸಂಸ್ಥೆಗಳ ಮೂಲಕ ವಾಹನ ಚಾಲಕರ ಸಂಘ, ಬಸ್ ಕಾರ್ಮಿಕರ ಸಂಘ ಸೇರಿದಂತೆ ಹಲವು ಸಂಘಟನೆಗಳ ಮೂಲಕವೂ ವೈವಿಧ್ಯಮಯವಾದ ಕಾರ್ಯಕ್ರಮಗಳು ಜರುಗಿದವು. ವಿವಿಧ ದೇವಾಲ ಯಗಳಲ್ಲೂ ವಾಹನಗಳಿಗೆ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಮಡಿಕೇರಿಯಲ್ಲಿ ಅಲಂಕೃತ ವಾಹನಗಳ ಸ್ಪರ್ಧೆಯೊಂದಿಗೆ ಸಂಜೆ ಗಾಂಧಿಮೈದಾನದಲ್ಲಿ ವಿವಿಧ ಕಾರ್ಯಕ್ರಮ ನಡೆಯಿತು. ಬಗೆ - ಬಗೆಯ ರೀತಿಯಲ್ಲಿ ಅಲಂಕೃತಗೊAಡಿದ್ದ ವಾಹನಗಳು ನೋಡುಗರ ಕಣ್ಮನ ಸೆಳೆದವು. ಕಟ್ಟಡಗಳೂ, ಅಂಗಡಿ ಮಳಿಗೆಗಳು ದೀಪಾಲಂಕಾರ ಗೊಂಡಿದ್ದವು. ಕ್ರೀಡೆ ಹಾಗೂ ಅಲಂಕಾರ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭಕ್ಕೆ ಜಿಲ್ಲಾಧಿಕಾರಿ ವೆಂಕಟ್ರಾಜಾ, ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್, ಜಿ.ಪಂ. ಸಿಇಓ ವರ್ಣೀತ್ ನೇಗಿ, ದಸರಾ ಸಮಿತಿ ಅಧ್ಯಕ್ಷೆ ಅನಿತಾ ಪೂವಯ್ಯ ಹಾಗೂ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಅಂತರರಾಷ್ಟಿçÃಯ ಟೆನ್ನಿಸ್ ಆಟಗಾರ ರೋಹನ್ ಬೋಪಣ್ಣ ಅವರ ಪೋಷಕರಾದ ಬೋಪಣ್ಣ ಹಾಗೂ ಮಲ್ಲಿಕಾ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ವೀರಾಜಪೇಟೆ: ಭಾರತ ಬಹು ಸಂಸ್ಕೃತಿಗಳ ದೇಶ. ದೇಶದ ಮೇಲೆ ಹಲವು ಭಾರಿ ಪರಕೀಯರ ಧಾಳಿ ಗಳು ನಡೆದರೂ ಸಂಸ್ಕತಿಗಳನ್ನು ಉಳಿಸುವಲ್ಲಿ ಪೂರ್ವಜರ ಶ್ರಮ ನಿಲುಕಕ್ಕೆ ಬಾರದು. ಸಂಸ್ಕೃತಿ ಉಳಿದಲ್ಲಿ ಸಂಸ್ಕಾರ ಉಳಿಯುತ್ತದೆ ಎಂದು ಭಾ.ಜ.ಪ ಜಿಲ್ಲಾ ಪ್ರಮುಖ್ ತೇಲಪಂಡ ಶಿವಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.
ವೀರಾಜಪೇಟೆಯ ಕೊಡಗು ಖಾಸಗಿ ಬಸ್ ಕಾರ್ಮಿಕರ ಸಂಘದ ವೀರಾಜಪೇಟೆ ವತಿಯಿಂದ ವೀರಾಜ ಪೇಟೆ ಖಾಸಗಿ ಬಸ್ ನಿಲ್ದಾಣದಲ್ಲಿ ೧೬ನೇ ವರ್ಷದ ಅದ್ದೂರಿ ಆಯುಧ ಪೂಜೆ ಕಾರ್ಯಕ್ರಮ ಏರ್ಪಡಿಸ ಲಾಗಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾ ಡಿದ ಶಿವಕುಮಾರ್ ಅವರು ಪೂರ್ವ ಇತಿಹಾಸದಿಂದ ಬಳುವಳಿಯಾಗಿ ಬಂದಿರುವ ಧೀಮಂತ ಸಂಸ್ಕೃತಿ ಯನ್ನು ಉಳಿಸುವಂತಾಗಬೇಕು. ಸನಾತನ ಹಿಂದೂ ಧರ್ಮವು ಅತ್ಯಂತ ಪುರಾತನವಾದುದು. ನಮ್ಮಲ್ಲಿ ಹಲವು ಬಗೆಯ ಆಚರಣಾ ಪದ್ಧತಿ ಗಳು ಪ್ರಚಲಿತದಲ್ಲಿದೆ. ಕಷ್ಟ ಅಡೆತಡೆ ಗಳು ಬಂದರೂ ಆಚರಣೆಗಳು ನಿಲ್ಲಬಾರದು. ಸರ್ಕಾರದ ಉಚಿತ ಬಸ್ಸು ಪ್ರಯಾಣ ಕಾರ್ಯಕ್ರಮ ಉತ್ತಮವೆನಿಸಿದರೂ ಖಾಸಗಿ ಬಸ್ಸುಗಳ ನಿರ್ವಹಣೆಗೆ ಕುಂದು ಬಂದಿದೆ. ಇದರಿಂದ ಬಸ್ಸುಗಳನ್ನು ಅವಲಂಭಿಸಿ ಬದುಕು ಕಂಡವರು ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಸರ್ಕಾರವು ಖಾಸಗಿ ಬಸ್ ಮಾಲೀ ಕರ ಮತ್ತು ಕಾರ್ಮಿಕರ ಹಿತ ಕಾಪಾಡುವ ನಿಟ್ಟಿನಲ್ಲಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷರಾದ ಹನೀಫ್ ಚೋಕಂಡಳ್ಳಿ ಅವರು ಮಾತನಾಡಿ, ಧರ್ಮ ಮತ್ತು ಜಾತಿಗಳ ಮಧ್ಯೆ ಸಂಘರ್ಷಗಳು ನಿರ್ಮಾಣವಾಗದೆ ಆಚರಣೆಗಳು ಸಮಾಜಮುಖಿಯಾ ಗಬೇಕು. ಆಚರಣೆಗಳು ಬಾಂಧವ್ಯದ ಸಂಕೇತಗಳಾಗಬೇಕು. ಎಲ್ಲಾ ಧರ್ಮ ಗಳು ಶಾಂತಿ, ಪರಸ್ಪರ ಪ್ರೀತಿ, ಸೌಹಾರ್ದದ ಬದುಕನ್ನು ಬದುಕಲು ತಿಳಿಸುತ್ತದೆ. ಮನುಜ ತನ್ನ ಬೇಡಿಕೆ ಗಳನ್ನು ಈಡೇರಿಸಿಕೊಳ್ಳಲು ಧರ್ಮ ಮತ್ತು ಜಾತಿಯ ಮಧ್ಯೆ ಕಂದಕ ನಿರ್ಮಾಣ ಮಾಡಲು ಮುಂದಾಗು ತ್ತಾನೆ. ಇದು ಕಳವಳಕಾರಿ ಸಂಗತಿ. ಬಡ ಮಧ್ಯಮ ಕೂಲಿ ಅವಲಂಬಿತರು ಖಾಸಗಿ ಬಸ್ಸುಗಳನ್ನು ಅವಲಂಬಿಸಿ ದ್ದಾರೆ. ಬಸ್ಸು ನಿರ್ವಹಣೆಯು ಇಂದಿನ ಕಾಲಘಟ್ಟದಲ್ಲಿ ಕಷ್ಟಸಾದ್ಯ ವಾಗಿದೆ. ಆದರೂ ಖಾಸಗಿ ಬಸ್ಸು ಸಮಾಜಕ್ಕೆ ತನ್ನ ಸೇವೆಯನ್ನು ಒದಗಿಸುತ್ತಿದೆ ಎಂದು ಹೇಳಿದರು.
ನಗರ ಕಾಂಗ್ರೆಸ್ ಅಧ್ಯಕ್ಷ ಮಾದಂಡ ತಿಮ್ಮಯ್ಯ ಅವರು ಮಾತನಾಡಿ, ಸನಾ ತನ ಹಿಂದೂ ಧರ್ಮದ ಆಚರಣೆ ಗಳು ಉಳಿದಲ್ಲಿ ಮಾತ್ರ ದೇಶವು ಯಶಕಾಣಲು ಸಾಧ್ಯ, ಸಂಸ್ಕತಿಯನ್ನು ಮರೆತು ಯಾವುದೂ ನಡೆಯಲು ಅಸಾಧ್ಯ ಆದುದರಿಂದ ಪೂರ್ವ ಕಾಲದಿಂದ ಆಚರಿಸಿಕೊಂಡು ಬಂದಿ ರುವ ಆಚರಣೆಗಳು ಮುಂದಿನ ಪೀಳಿ ಗೆಗೂ ವಿಸ್ತರಣೆಯಾಗಬೇಕು ಈ ನಿಟ್ಟಿ ನಲ್ಲಿ ಪೋಷಕರು ತಮ್ಮ ಮಕ್ಕಳಿಗೆ ತಿಳಿಯಪಡಿಸಬೇಕು ಎಂದು ಹೇಳಿದರು.
ಕೊಡಗು ಜಿಲ್ಲಾ ಸಹಕಾರ ಮಾರಾಟ ಮಹಾಮಂಡಳ ವೀರಾಜ ಪೇಟೆಯ ಅಧ್ಯಕ್ಷರಾದ ವಾಟೇರಿರ ಬೋಪಣ್ಣ ಅವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಕೊಡಗು ಜಿಲ್ಲಾ ಖಾಸಗಿ ಬಸ್ಸು ಕಾರ್ಮಿಕರ ಸಂಘ ವೀರಾಜಪೇಟೆ ಅಧ್ಯಕ್ಷರಾದ ಕುಂಬೆಯAಡ ಸುರೇಶ್ ದೇವಯ್ಯ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳಾದ ಮೊಹಮ್ಮದ್ ಸಾಹೀಲ್, ಸಂಕೇತ್ ಕೆ.ಎ ಮತ್ತು ಶ್ರಾವ್ಯ ಪೌರಕಾರ್ಮಿಕರಾದ ಶಂಕರಮ್ಮ, ಮ್ಯೆಕಾನಿಕ್ ಶಶಿಧರನ್ ಪಿ.ಕೆ. ಮತ್ತು ಚಾಲಕರಾದ ನೆಲ್ಲಮಕ್ಕಡ ಪೂಣಚ್ಚ ಅವರುಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಬೆಳಿಗ್ಗೆ ಖಾಸಗಿ ಬಸ್ಸುಗಳಿಗೆ ಸಾಮೂಹಿಕ ಆಯುಧ ಪೂಜೆ ನೆರವೇರಿಸಲಾಯಿತು. ನಂತರ ಸ್ಥಳೀಯ ಮತ್ತು ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕತಿಕ ಕಾರ್ಯಕ್ರಮ ಜರುಗಿತು. ಮಧ್ಯಾಹ್ನ ಅನ್ನಸಂತರ್ಪಣೆ ಕಾರ್ಯಕ್ರಮದ ಬಳಿಕ ರಾತ್ರಿ ಮಂಗಳೂರಿನ ಶಾರದ ಮೆಲೋಡಿಸ್ ತಂಡದಿAದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು.
ಕಾಫಿ ಬೆಳೆಗಾರರಾದ ಕೋಡಿರ ವಿವೇಕ್, ವಿನಾಯಕ ಟರ್ಸ್ ಅಂಡ್ ಟ್ರಾವೆಲ್ಸ್ನ ಮಾಲೀಕರಾದ ಬಿ.ವಿ. ಹೇಮಂತ್, ಉದ್ಯಮಿಗಳಾದ ಸುರೇಶ್ ಟಿ.ಸಿ. ಮಹಾಲಕ್ಷಿö್ಮÃ ಜುವೆರ್ಸ್ ಮಾಲೀಕರಾದ ರಾಹುಲ್, ಚಿಲಿಗೇರಿ ಬಸ್ಸು ಮಾಲೀಕರಾದ ತೀತಿರ ದರ್ಶನ್, ಭಗವತಿ ಡೆಕೋರೇರ್ಸ್ನ ಮಾಲೀಕರಾದ ಬೋಪಣ್ಣ ಹಾಗೂ ಸಂಘದ ಉಪಾಧ್ಯಕ್ಷರಾದ ಪಿ.ಎಂ. ಕಾವೇರಪ್ಪ ಅವರುಗಳು ಉಪಸ್ಥಿತರಿದ್ದರು.
ಸಂಘದ ಕಾರ್ಯದರ್ಶಿ ಜ್ಯೂಡಿ ವಾಸ್ ಸ್ವಾಗತಿಸಿ ವಂದಿಸಿದರು, ಮಾಜಿ ಅಧ್ಯಕ್ಷರಾದ ದಿನೇಶ್ ನಾಯರ್ ಅವರು ಕಾರ್ಯಕ್ರಮ ನಿರೂಪಣೆ ಮಾಡಿದರು.
ಕೊಡಗು ಜಿಲ್ಲಾ ಖಾಸಗಿ ಬಸ್ಸು ಕಾರ್ಮಿಕರ ಸಂಘದ ಪದಾ ಧಿಕಾರಿಗಳು, ಸದಸ್ಯರು, ಬಸ್ಸಿನ ಮಾಲೀಕರು, ಸಾರ್ವಜನಿಕರು ಹಾಜರಿದ್ದರು.ಸುಂಟಿಕೊಪ್ಪ: ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯಲ್ಲಿನ ಮೂಲ ಭೂತ ಸಮಸ್ಯೆಗಳನ್ನು ಹಂತ ಹಂತ ವಾಗಿ ಪರಿಹರಿಸುವ ನಿಟ್ಟಿನಲ್ಲಿ ತಾನು ಕಾರ್ಯಪ್ರವೃತನಾಗುತ್ತೇನೆಂದು ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ. ಮಂಥರ್ಗೌಡ ಖಚಿತ ಭರವಸೆ ನೀಡಿದ್ದಾರೆ.
ಸೋಮವಾರದಂದು ಸುಂಟಿ ಕೊಪ್ಪ ವಾಹನ ಚಾಲಕರ ಸಂಘದ ೫೩ನೇ ವಾರ್ಷಿಕೋತ್ಸವ ಅದ್ದೂರಿ ಆಯುಧ ಪೂಜಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಈಗಾಗಲೇ ಈ ವ್ಯಾಪ್ತಿಯಲ್ಲಿ ಕುಡಿಯುವ ನೀರು, ನಿವೇಶನಗಳ ಬೇಡಿಕೆ, ವೈದ್ಯಾಧಿಕಾರಿಗಳ ಕೊರತೆ, ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಬೇಕಾಗಿರುವ ಹೆಚ್ಚಿನ ಬಸ್ಸುಗಳ ಬೇಡಿಕೆ ಪ್ರಸ್ತಾಪಿಸಿದ ಅವರು ಈಗಾಗಲೇ ರೂ. ೧೦ ಕೋಟಿ ವೆಚ್ಚ ದಲ್ಲಿ ಕುಶಾಲನಗರ ತಾಲೂಕಿನ ಬಸ ವನಹಳ್ಳಿ ಗ್ರಾಮದಲ್ಲಿ ಸುಸ್ಸಜ್ಜಿತವಾದ ಬಸ್ ಡಿಪೋ ಬರಲಿದ್ದು, ಕಾಮಗಾರಿ ಪೂರೈಸಿದ ಕೂಡಲೇ ಬಸ್ಸು ಮಾರ್ಗ ಗಳ ಸಂಖ್ಯೆ ಹೆಚ್ಚಾಗಲಿದೆ. ಸಮಸ್ಯೆ ಶಾಶ್ವತ ಪರಿಹಾರ ಕಾಣಲಿದೆ ಎಂದು ಹೇಳಿದ ಅವರು ಇದೇ ರೀತಿಯಲ್ಲಿ ಸಮಸ್ಯೆಗಳಿಗೆ ಆದ್ಯತೆ ಮೇರೆ ಹಂತ ಹಂತವಾಗಿ ಪರಿಹಾರ ಕಂಡುಕೊಳ್ಳ ಲಾಗುವುದು ಎಂದು ಹೇಳಿದರು. ಅಭಿವೃದ್ಧಿಯನ್ನು ಮಾಡುವುದು ತಮ್ಮ ಪ್ರಥಮ ಆದ್ಯತೆ ಎಂದು ಡಾ.ಮಂಥರ್ ಗೌಡ ಹೇಳಿದರು.
ಸುಂಟಿಕೊಪ್ಪ ವಾಹನ ಚಾಲಕರ ಸಂಘ ಕಳೆದ ೫೩ ವರ್ಷಗಳಿಂದ ತನ್ನದೆಯಾದ ರೀತಿಯಲ್ಲಿ ಸಮಾಜ ಮುಖಿ ಮತ್ತು ಜನಮುಖಿ ಸೇವೆಗ ಳನ್ನು ಮಾಡುತ್ತ ಬಂದಿದ್ದು, ಭವ್ಯ ಇತಿಹಾಸವನ್ನು ಹೊಂದಿದೆಯೆAದು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಲ್ಲಿ ಒಬ್ಬರಾದ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಹರಪಳ್ಳಿ ರವೀಂದ್ರ ಮಾತನಾಡಿ ಯುವಜನಾಂಗ ಉನ್ನತ ವಿದ್ಯಾಭ್ಯಾಸ ಮತ್ತು ಜ್ಞಾನರ್ಜನೆಗೆ ಒತ್ತು ಕೊಡಬೇಕು. ತಂದೆ ತಾಯಿಯರ ಗುಣಗಳು ಮತ್ತು ಸಂಸ್ಕೃತಿ, ಪರಂಪರೆಯಿAದ ರೂಢಿಸಿಕೊಂಡ ಗುಣಗಳು ಈ ಹಿನ್ನೆಲೆಯಲ್ಲಿ ಮನುಷ್ಯನು ತನ್ನಲಿನ ಪರಿಪೂರ್ಣತೆ ಯನ್ನು ಪ್ರಕಾಶಗೊಳಿಸುವಲ್ಲಿ ತಮ್ಮ ವಿದ್ಯೆ ಮತ್ತು ಜ್ಞಾನರ್ಜನೆ ಸಮಾಜದ ಏಳಿಗೆಗಾಗಿ ಬಡವರ ಮತ್ತು ಅನಾ ಥರ ಸೇವೆಗೆ ಮುಂದಾಗುವAತಾ ಬೇಕೆಂದು ಅವರು ಕರೆ ನೀಡಿದರು. ವಾಹನ ಚಾಲಕರ ಸಂಘದ ಈ ಕಾರ್ಯಕ್ರಮಕ್ಕೆ ಜನರು ಸಾಗರೋಪಾ ದಿಯಲ್ಲಿ ಸೇರಿರುವುದು ಸಂಘ ಜಿಲ್ಲೆಯಲ್ಲಿ ಪಡೆದಿರುವ ವಿಶೇಷ ಜನಪ್ರೀತಿಯನ್ನು ತೋರಿಸುತ್ತದೆ ಎಂದು ಅವರು ಶ್ಲಾಘಿಸಿದರು.
ಇನ್ನೋರ್ವ ಮುಖ್ಯ ಅತಿಥಿ ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾ ರರಾದ ಎ.ಲೋಕೇಶ್ಕುಮಾರ್ ಅವರು ಮಾತನಾಡಿ ವಾಹನ ಚಾಲಕರ ಸಂಘ ಊರಿನ ಅಭಿವೃದ್ಧಿ ವಿಚಾರದಲ್ಲಿ ಕರ್ತವ್ಯ ನಿರತರಾಗಿದ್ದು, ವೇದಿಕೆಯು ಬೇಡಿಕೆಗಳನ್ನು ಈಡೇರಿ ಸುವ ಸ್ಥಳವಾಗಿದೆ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್. ಸುನಿಲ್ಕುಮಾರ್ ಮಾತ ನಾಡಿ, ಸುಂಟಿಕೊಪ್ಪ ವಾಹನ ಚಾಲ ಕರ ಸಂಘದ ವತಿಯಿಂದ ನಡೆಸಿ ಕೊಂಡು ಬರುತ್ತಿರುವ ಆಯುಧ ಪೂಜಾ ಸಮಾರಂಭವು ವಿವಿಧತೆ ಯಲ್ಲಿ ಏಕತೆಗೆ ಸಾಕ್ಷಿಯಾಗಿದ್ದು ಸಂಘವು ತನ್ನ ಪ್ರಾರಂಭದ ದಿನಗಳಿಂ ದಲೂ ಸಮಾಜ ಸೇವೆಯಲ್ಲಿ ನಿರತವಾಗಿದೆ. ಆಯುಧ ಪೂಜಾ ಸಂದರ್ಭದಲ್ಲಿ ಶಾಸಕರು, ಮಂತ್ರಿಗಳು ಮತ್ತು ಗ್ರಾಮ ಪಂಚಾಯಿತಿಗೆ ಹೋಬಳಿ ಮಟ್ಟದಲ್ಲಿ ಆಗಬೇಕಾದ ಆದ್ಯತೆಯ ಕೆಲಸಗಳನ್ನು ನಿರ್ವ ಹಿಸಿಕೊಂಡು ಬರುತ್ತಿರುವುದು ವೈಶಿಷ್ಟö್ಯ ಪೂರ್ಣವಾಗಿದೆ ಎಂದು ಬಣ್ಣಿಸಿದರು.
ಸಮಾರಂಭಕ್ಕೆ ಮುಖ್ಯ ಅತಿಥಿ ಗಳಾಗಿ ಆಗಮಿಸಿದ್ದ ಚಂದ್ರಮೌಳಿ, ವಿಶಾಲ್ ಶಿವಪ್ಪ, ಶುಭ್ರ ಅಯ್ಯಪ್ಪ, ಜರ್ಮಿಡಿಸೋಜ, ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಪ್ರಸಾದ್ ಕುಟ್ಟಪ್ಪ, ಪಂಚಾ ಯಿತಿ ಅಭಿವೃದ್ಧಿ ಅಧಿಕಾರಿ ಲೋಕೇಶ್ ಅವರುಗಳು ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.
ವೇದಿಕೆಯಲ್ಲಿ ಕೆ.ಪಿ. ಚಂದ್ರಕಲಾ, ವಿ.ಪಿ. ಶಶಿಧರ್, ಕ್ಲಾಡಿಯಸ್ ಲೋಬೋ, ಶಿವಮ್ಮ ಮಹೇಶ್, ರಫೀಕ್ಖಾನ್, ಆಲಿಕುಟ್ಟಿ, ವಸಂತಿ, ಶಾಂತಿ, ಗೀತಾ, ಮಂಜುಳಾ, ರೇಷ್ಮ, ಮಂಗಳಾಮ್ಮ, ಸೋಮನಾಥ್, ಮುಕುಲ್ ಮಹೇಂದ್ರ, ಸ್ಯಾಂಡಲ್ ವುಡ್ ತೋಟದ ಮಾಲೀಕರಾದ ಎಸ್.ಯು. ಝೂಯ್ದ್, ಮಾಜಿ ಅಧ್ಯ ಕ್ಷರುಗಳಾದ ಅಚ್ಚುಪ್ಪ, ಬಿ.ಎಂ. ಪೂವಪ್ಪ, ಎಂ.ಎ. ಉಸ್ಮಾನ್, ರಹೆನಾ ಫೈರೋಜ್, ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ.ಮಂಥರ್ ಗೌಡ ಮತ್ತು ಹರಪಳ್ಳಿ ರವೀಂದ್ರ ಅವರಿಗೆ ವಾಹನ ಚಾಲಕರ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾ ಯಿತು. ನಾಟಿ ಕಿಡ್ಸ್ ಹಾಗೂ ಸ್ಥಳೀಯ ಶಾಲಾ ಮಕ್ಕಳು ಹಾಗೂ ಸಾರ್ವಜನಿಕರ ಡ್ಯಾನ್ಸ್ಮೇಳ ಕಾರ್ಯಕ್ರಮವು ಸಾವಿರಾರು ನೆರೆದಿದ್ದ ಜನತೆಯ ಮನ ರಂಜಿಸಿತು.
ವಿವಿಧ ದೊಡ್ಡ ವಾಹನಗಳ, ಚಿಕ್ಕ ವಾಹನಗಳ ಅಲಂಕಾರ ಅಂಗಡಿಗಳ ಅಲಂಕಾರ ಸ್ಪರ್ಧೆ, ವರ್ಕ್ಶಾಫ್, ಸರ್ಕಾರಿ ಕಛೇರಿಗಳ ಅಲಂಕಾರ ಗಮನಸೆಳೆಯಿತು.
ಸುಂಟಿಕೊಪ್ಪ ಆಟೋ
ಚಾಲಕರ ಸಂಘ:
ಸುAಟಿಕೊಪ್ಪದ ಆಟೋಚಾಲಕರ ಸಂಘವು ಜನಸ್ನೇಹಿಯಾಗಿ ಮತ್ತು ಜೀವ ಉಳಿಸುವ ರಕ್ತದಾನದಂತಹ ಶ್ರೇಷ್ಠ ಕಾರ್ಯಕ್ರಮವನ್ನು ಹಮ್ಮಿ ಕೊಂಡು ಪ್ರಗತಿ ಪಥದಲ್ಲಿ ಮುಂದು ವರಿಯುತ್ತಿರುವುದು ಶ್ಲಾಘನೀಯ ವಿಚಾರವೆಂದು ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪಿ.ಆರ್. ಸುನಿಲ್ ಕುಮಾರ್ ಹೇಳಿದರು.
ಸೋಮವಾರದಂದು ಆಟೋ ಚಾಲಕ ಮತ್ತು ಮಾಲೀಕರ ವತಿ ಯಿಂದ ಆಟೋನಿಲ್ದಾಣ ಆವರಣದಲ್ಲಿ ನಡೆದ ೨೫ನೇ ವರ್ಷದ ಆಯುಧ ಪೂಜಾ ಸಮಾರಂಭದ ಅಧ್ಯಕ್ಷತೆ ಯನ್ನು ವಹಿಸಿ ಮಾತನಾಡಿದ ಅವರು ನಮ್ಮ ಪ್ರಮುಖ ಹಬ್ಬಗಳಲ್ಲಿ ನವರಾತ್ರಿ ಆಯುಧಪೂಜಾ ಮತ್ತು ವಿಜಯ ದಶಮಿ ಪ್ರಮುಖವಾಗಿದ್ದು, ಇದನ್ನು ಜಾತಿ ಮತಭೇದವಿಲ್ಲದೆ ವೈವಿಧ್ಯಮ ಯವಾಗಿ ವಿವಿಧತೆಯಲ್ಲಿ ಏಕತೆ ಯನ್ನು ಬಿಂಬಿಸುವ ನಿಟ್ಟಿನಲ್ಲಿ ಆಚರಿಸುತ್ತಿರುವುದು ಮೆಚ್ಚಬೇಕಾದ ವಿಚಾರ ಎಂದು ಅವರು ಹೇಳಿದರು.
ಜನಪ್ರತಿನಿಧಿಗಳು ಸೋಲುವುದು, ಗೆಲ್ಲುವುದು ಸಹಜ. ಜನಪ್ರತಿನಿಧಿ ಗಳನ್ನು ಪ್ರಶ್ನಿಸುವುದು ಜನರ ಹಕ್ಕು. ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಸಾಕಷ್ಟು ಅನುದಾನಗಳನ್ನು ತಂದಿ ದ್ದಾರೆ. ಈಗಾಗಲೇ ಸುಂಟಿಕೊಪ್ಪ ಮಾರುಕಟ್ಟೆ ಕಾಮಗಾರಿಗೆ ಹಿಂದಿನ ಶಾಸಕರಾಗಿದ್ದ ಎಂ.ಪಿ.ಅಪ್ಪಚ್ಚು ರಂಜನ್ ಪ್ರಯತ್ನದಿಂದ ನಬಾರ್ಡ್ ಮತ್ತು ಮಲೆನಾಡು ಅಭಿವೃದ್ಧಿ ಮಂಡಳಿಯಿAದ ವಿಶೇಷ ಅನುದಾ ನಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಸರಕಾರ ಬದಲಾದ ಹಿನ್ನೆಲೆಯಲ್ಲಿ ಈಗ ಕೆ.ಪಿ.ಚಂದ್ರಕಲಾ ಅವರ ಜವಾಬ್ದಾರಿ ಹೆಚ್ಚಾಗಿದ್ದು, ಅದಷ್ಟು ಬೇಗನೆ ಕಾಮಗಾರಿ ಪೂರೈಸುವ ನಿಟ್ಟಿನಲ್ಲಿ ಸಹಕಾರಿಸಬೇಕೆಂದು ಸುನಿಲ್ ಕುಮಾರ್ ಮನವಿ ಮಾಡಿದರು.
ಜಿ.ಪಂ. ಮಾಜಿ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ ಮಾತನಾಡಿ, ತಾವು ಜಿ.ಪಂ. ಅವಧಿಯಲ್ಲಿ ೪-೫ ಜಿ.ಪಂ. ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದು ಸುಂಟಿ ಕೊಪ್ಪ ಒಂದು ಮಾದರಿ ಕ್ಷೇತ್ರವೆಂದು ಬಣ್ಣಿಸಿದರು. ಸುಂಟಿಕೊಪ್ಪ ಬಸ್ ನಿಲ್ದಾಣ ಕಾಮಗಾರಿ ನೆನೆಗುದಿಗೆ ಬಿದ್ದ ವಿಚಾರದ ಬಗ್ಗೆ ಪ್ರಸ್ತಾಪಿಸಿದ ಅವರು ಇದು ಅದಷ್ಟು ಬೇಗನೆ ಆಗಬೇ ಕೆಂಬುದು ನಮ್ಮ ಆಶಯವಾಗಿದೆ ಎಂದು ಅವರು ಹೇಳಿದರು. ಸುಂಟಿ ಕೊಪ್ಪ ವ್ಯಾಪ್ತಿಯಲ್ಲಿ ಒಂದು ಸುಸ್ಸ ಜ್ಜಿತವಾದ ಪ್ರವಾಸಿಮಂದಿರ ಹಾಗೂ ಕಂದಾಯ ಭವನದ ಬೇಡಿಕೆಯಿದ್ದು, ಇದರ ಬಗ್ಗೆಯೂ ಸಾಕಷ್ಟು ಗಂಭೀರ ವಾಗಿ ಕೆಲಸ ಮಾಡಬೇಕಾಗಿದೆ ಎಂದರು.
ಮುಖ್ಯ ಅತಿಥಿ ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರರಾದ ಎ. ಲೋಕೇಶ್ ಕುಮಾರ್ ಮಾತನಾಡಿ, ಮನುಷ್ಯನು ಮನುಷ್ಯ ಧರ್ಮವನ್ನು ಪಾಲಿಸಬೇಕು. ಯಾವುದೇ ಜಾತಿ ಮತ ಇದ್ದರೂ ಕೂಡ ಮನುಷ್ಯ ಧರ್ಮ ನಿತ್ಯವಾಗಬೇಕು. ಸುಂಟಿಕೊಪ್ಪ ಆಟೋ ಚಾಲಕರ ಸಂಘವು ಜನರ ಕಷ್ಟ ಸುಖಗಳಿಗೆ ಸ್ಪಂದಿಸುತ್ತಿದ್ದು, ಸಂವಿ ಧಾನದ ಅಡಿಯಲ್ಲಿ ಸಾಮಾಜಿಕ ಮೌಲ್ಯ ಗಳನ್ನು ಎತ್ತಿ ಹಿಡಿಯುವ ಕೆಲಸದಲ್ಲಿ ಸಂಘ ನಿರಂತವಾಗಿರುವುದು ಸಂತೋ ಷದ ವಿಚಾರ ಎಂದು ಬಣ್ಣಿಸಿದರು.
ಸಂತ ಅಂತೋಣಿ ದೇವಾಲ ಯದ ಧರ್ಮಗುರು ಅರುಳ್ ಸೇಲ್ವಕುಮಾರ್ ಮಾತನಾಡಿ, ಸಂಘವನ್ನು ಕಟ್ಟುವುದು ಸುಲಭ, ೨೫ ವರ್ಷಗಳ ಕಾಲ ಸದಸ್ಯರನ್ನು ಒಂದಾಗಿ ತೆಗೆದುಕೊಂಡು ಹೋಗುವುದು ಸವಾಲಿನ ಕೆಲಸವೆಂದು ಅವರು ಬಣ್ಣಿಸಿದರಲ್ಲದೆ, ತಾವು ಮೈಸೂರು ಬೆಂಗಳೂರು ಮುಂಬಯಿಗಳಲ್ಲಿ ಸೇವೆ ಸಲ್ಲಿಸಿದ್ದು, ಸುಂಟಿಕೊಪ್ಪ ಆಟೋ ಚಾಲಕರು ಜಾತ್ಯತೀತ ನೆಲೆಗಟ್ಟಿನಲ್ಲಿ ತಮ್ಮ ಕೆಲಸವನ್ನು ಧರ್ಮಸೇವೆಯನ್ನು ತಿಳಿದು ಮಾಡುತ್ತಿರುವುದು ಹರ್ಷ ದಾಯಕ ಜೀವ ಉಳಿಸುವ ರಕ್ತದಾನ ಶಿಬಿರಗಳನ್ನು ಏರ್ಪಡಿಸಿ ಮನುಷ್ಯ ಜಾತಿ ಒಂದೇ ಎಲ್ಲಾರೂ ಸ್ನೇಹ ಮಯಿಯಾಗಿ ಬದುಕುವ ನಿಟ್ಟಿನಲ್ಲಿ ಕಳೆದ ೨೫ ವರ್ಷಗಳಿಂದ ಒಂದೇ ಮನೋಭಾವದಿಂದ ಕೆಲಸ ಮಾಡು ತ್ತಿರುವುದನ್ನು ಶ್ಲಾಘಿಸಿದರು.
ಧರ್ಮಗುರು ಸಿ.ಎಂ. ಹಮೀದ್ ಮೌಲವಿ ಮಾತನಾಡಿ ಕೊರೊನಾ ಮತ್ತು ಜಲಪ್ರಳಯ ಸಂದರ್ಭದಲ್ಲಿ ಆಟೋ ಚಾಲಕರ ಸೇವೆಗಾಗಿ ಅವ ರನ್ನು ಅಭಿನಂದಿಸಿದರಲ್ಲದೆ ಸುಂಟಿ ಕೊಪ್ಪ ಹೋಬಳಿಯು ಸರ್ವ ಧರ್ಮ ಕೇಂದ್ರವಾಗಿದ್ದು, ಇಲ್ಲಿ ನಾವೆಲ್ಲಾರೂ ಸಹೋದರತೆ ಮತ್ತು ಬ್ರಾತೃತ್ವ ಭಾವೈಕ್ಯತೆಯಿಂದ ಬಾಳುತ್ತಿದ್ದೇವೆ ಎಂದು ಬಣ್ಣಿಸಿದರು.
ಸನ್ಮಾನ: ಅತ್ಯುತ್ತಮ ಬಾಲಪ್ರತಿಭೆ ಶ್ರೀಶಾ, ಗ್ರಾ.ಪಂ.ಅಧ್ಯಕ್ಷರಾಗಿ ನೇಮಕ ಗೊಂಡ ಪಿ.ಆರ್.ಸುನಿಲ್ ಕುಮಾರ್, ಗ್ರಾ.ಪಂ. ಉಪಾಧ್ಯಕ್ಷೆ ನೇಮಕಗೊಂಡ ಶಿವಮ್ಮ, ಆಟೋ ಮೆಕಾನಿಕ್ ಮೋಹನ್ (ಪುತ್ತು) ಅವರುಗಳನ್ನು ಶಾಲು ಹೊದಿಸಿ ಫಲತಾಂಬೂಲ, ನೆನಪಿನ ಕಾಣಿಕೆ ನೀಡಿ ಸನ್ಮಾನಿ ಸಲಾಯಿತು.
ಸಮಾರಂಭದ ವೇದಿಕೆಯಲ್ಲಿ ಆಟೋ ಚಾಲಕರ ಸಂಘದ ಅಧ್ಯಕ್ಷ ಶರೀಫ್ ಹಾಗೂ ಕಾರ್ಯದರ್ಶಿ ಸಚಿನ್, ಗ್ರಾ.ಪಂ. ಉಪಾಧ್ಯಕೆ ್ಷಶಿವಮ್ಮ, ವಸಂತಿ, ಶಾಂತಿ, ಗೀತಾ, ಮಂಜುಳಾ, ರಫೀಕ್ಖಾನ್, ಆಲಿಕುಟ್ಟಿ, ಪಿ.ಎಫ್. ಸಬಾಸ್ಟೀನ್, ಸೋಮನಾಥ್, ಶಬ್ಬೀರ್, ಪ್ರಸಾದ್ಕುಟ್ಟಪ್ಪ, ಎಂ.ಎ.ಉಸ್ಮಾನ್, ಕೆ.ಇ.ಕರೀಂ, ವಾಹನ ಚಾಲಕರ ಸಂಘದ ಅಧ್ಯಕ್ಷ ಸುರೇಶ್, ಮಾಜಿ ಅಧ್ಯಕ್ಷ ಬಿ.ಎಂ. ಪೂವಪ್ಪ, ಮೋಹನ (ಪುತು) ಮತ್ತಿತರರು ಇದ್ದರು. ಐಗೂರು: ಪ್ರತಿವರ್ಷದಂತೆ ಆಯುಧ ಪೂಜೆಯನ್ನು ಹೊಸತೋಟ ಆಟೋ ಚಾಲಕರ ಸಂಘದ ವತಿಯಿಂದ ಸ್ಥಳೀಯ ಚಾಮುಂಡೇಶ್ವರಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಪ್ರಸಾದವನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಆಟೋ ಚಾಲಕರ ಸಂಘದ ಸದಸ್ಯರಾದ ಚಿದಾನಂದ, ಮಣಿಕಂಠ, ಸುದೀಪ್, ವಾಸು ಮತ್ತು ಪ್ರಮುಖರಾದ ಶಶಿ ಇದ್ದರು.ಕೂಡಿಗೆ: ಕೂಡುಮಂಗಳೂರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷ ಡಿ. ಭಾಸ್ಕರ್ ನೇತೃತ್ವದಲ್ಲಿ ಆಯುಧಪೂಜೆ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸಂತೋಷ್ ಮತ್ತು ಪಂಚಾಯಿತಿ ಸಿಬ್ಬಂದಿ ವರ್ಗ ಹಾಗೂ ಸಾರ್ವಜನಿಕರು ಆಗಮಿಸಿ ಆಯುಧ ಪೂಜೆಯನ್ನು ನೆರವೇರಿಸಿದರು.
ಈ ಸಂದರ್ಭ ಪಂಚಾಯಿತಿ ಸಿಬ್ಬಂದಿಗಳಾದ ಮಮತಾ, ಅವಿನಾಶ್, ಪವಿತ್ರ, ಲೈನ, ಚುಂಚನಾಯ್ಕ, ಸುಬ್ರಮಣಿ, ರಾಮು ಮತ್ತಿತರರು ಉಪಸ್ಥಿತರಿದ್ದರು.ಮಾದಾಪುರ: ಪ್ರಕೃತಿ ಮಹಿಳಾ ಸ್ವ ಸಹಾಯ ಸಂಘ ಎಫ್.ಎಂ.ಸಿ ಕಾರ್ಯಪ್ಪ ಬಡಾವಣೆ ಜಂಬೂರು ಮಾದಾಪುರ ವತಿಯಿಂದ ಎರಡನೇ ವರ್ಷದ ಆಯುಧಪೂಜೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸಂಘದ ಮಾಜಿ ಅಧ್ಯಕ್ಷರಾದ ಗೌರಮ್ಮ, ನೂತನ ಅಧ್ಯಕ್ಷರಾದ ರೀಟಾ ಅಹಮ್ಮದ್, ಖಜಾಂಚಿ ಕಸ್ತೂರಿ ಬಿ.ವಿ. ಹಾಗೂ ಸದಸ್ಯರು ಸುಂದರಿ ಬಡಾವಣೆಯ ನಿವಾಸಿಗಳು ಪಾಲ್ಗೊಂಡಿದ್ದರು.
ಅಲ್ಲಿಯ ನಿವಾಸಿ ಜಯ ಪೂಜಾ ಕಾರ್ಯಕ್ರಮವನ್ನು ನಡೆಸಿ, ಶುಭ ಕೋರಿದರು.ಸಂಪಾಜೆ: ಶ್ರೀ ಚಾಮುಂಡೇಶ್ವರಿ ಕ್ಷೇತ್ರ, ಕುದ್ಕುಳಿ ಇಲ್ಲಿ ನವರಾತ್ರಿ ಪೂಜಾ ಕಾರ್ಯಕ್ರಮ ತಾ.೨೨ ರಂದು ಜರುಗಿತು.
ಭಜನೆ ಕಾರ್ಯಕ್ರಮದ ನಂತರ ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು. ಮರುದಿನ ಆಯುಧಪೂಜೆ ಕಾರ್ಯಕ್ರಮ ನಡೆಯಿತು.ಸಿದ್ದಾಪುರ: ಸಿದ್ದಾಪುರದಲ್ಲಿ ವಾಹನ ಚಾಲಕರ ಮಜ್ದೂರ್ ಸಂಘದ ವತಿಯಿಂದ ೩೦ನೇ ವರ್ಷದ ಆಯುಧ ಪೂಜೆಯನ್ನು ಸಡಗರ ಸಂಭ್ರಮದಿAದ ಆಚರಿಸಲಾಯಿತು. ಸಿದ್ದಾಪುರದ ಬಸ್ಸು ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮವನ್ನು ಸಿದ್ದಾಪುರ ಠಾಣಾಧಿಕಾರಿ ರಾಘವೇಂದ್ರ ಉದ್ಘಾಟಿಸಿದರು. ನಂತರ ನಡೆದ ಸೈಕಲ್ ಸ್ಪರ್ಧೆಯನ್ನು ದೇವಿ ನರ್ಸರಿ ಮಾಲೀಕರಾದ ವೆಂಕಪ್ಪರೈ ಚಾಲನೆ ನೀಡಿದರು. ರಸ್ತೆ ಓಟ ಸ್ಪರ್ಧೆಯು ನಡೆಯಿತು. ಇದಾದ ಬಳಿಕ ಜಿಲ್ಲಾಮಟ್ಟದ ಶಾಲಾ ಮಕ್ಕಳ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು ನೃತ್ಯ ಕಾರ್ಯಕ್ರಮಗಳು ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಜ್ದೂರ್ ಸಂಘದ ಜಿಲ್ಲಾಧ್ಯಕ್ಷ ಸೂದನ ಸತೀಶ್ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಸಿದ್ದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮ ಗೋಪಾಲ್, ಎಸ್.ಎನ್.ಡಿ.ಪಿ ಜಿಲ್ಲಾ ಯೂನಿಯನ್ ಅಧ್ಯಕ್ಷ ವಿ.ಕೆ ಲೋಕೇಶ್, ವಕೀಲ ರತ್ನಕರ ಶೆಟ್ಟಿ, ಸಮಾಜ ಸೇವಕ ಜೋಸೆಫ್ ಶ್ಯಾಂ, ಭಾರತೀಯ ಮಜ್ದೂರ್ ಸಂಘದ ಸಿದ್ದಾಪುರ ಘಟಕದ ಅಧ್ಯಕ್ಷ ನೆಲ್ಲಿಕಲ್ ಸುರೇಶ್, ಕೆ.ಎಂ. ಅನಿಶ್ ಇನ್ನಿತರರು ಹಾಜರಿದ್ದರು.
ಜಿಮ್ಮಿ ಸಿಕ್ವೇರಾ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂ�