ಗೋಣಿಕೊಪ್ಪಲು, ಅ. ೨೫: ಕಣ್ಣು ಕುಕ್ಕುವ ಲೈಟಿಂಗ್ಸ್, ದೇವಾನು ದೇವತೆ- ರಕ್ಕಸರ ನಡುವೆ ಸಮರ, ಇದನ್ನು ನೋಡಲು ಜನರ ದಂಡು, ಆಕರ್ಷಕವಾಗಿ ನಡೆದ ದಸರಾ ಉತ್ಸವ, ಹುಚ್ಚೆದ್ದು ಕುಣಿದು ಸಂಭ್ರಮಿಸಿದ ಜನರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶ್ರೀ ಕಾವೇರಿ ದಸರಾ ಸಮಿತಿ ಸಹಯೋಗದಲ್ಲಿ ನಡೆದ ೪೫ನೇ ವರ್ಷದ ಗೋಣಿಕೊಪ್ಪ ದಸರಾಕ್ಕೆ ದಸರಾ ದಶಮಂಟಪ ಶೋಭಾ ಯಾತ್ರೆಯ ಮೆರಗಿನೊಂದಿಗೆ ಸಂಪನ್ನಗೊAಡಿತು. ಕಳೆದ ೯ ದಿನಗಳ ಕಾಲ ನಗರದ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಿಂದ ಸಂತೋಷ ಗೊಂಡಿದ್ದ ಗೋಣಿಕೊಪ್ಪಲುವಿನ ಜನತೆ ೧೦ನೇ ದಿನ ನಡೆದ ದಶಮಂಟಪ ಶೋಭಾಯಾತ್ರೆಯಲ್ಲಿ ಪಾಲ್ಗೊಂಡು ಕುಣಿದು ಕುಪ್ಪಳಿಸಿದರು. ಮುಂಜಾನೆಯಿAದಲೇ ನಗರಕ್ಕೆ ಜನಸಾಗರ ಹರಿದು ಬಂತು.
ದಶಮಂಟಪಗಳು ಅಳವಡಿಸಿದ್ದ ಡಿಜೆ ಸೌಂಡ್ಸ್ ಹಾಗೂ ಕೊಡವ ವಾಲಗಕ್ಕೆ ಜನರು ಕುಣಿದು ಕುಪ್ಪಳಿಸಿದರು. ಪ್ರತಿ ಮಂಟಪದ ಆಯಾಕಟ್ಟಿನ ಪ್ರದೇಶ ಸೇರಿದಂತೆ ವಿವಿಧ ಭಾಗದಲ್ಲಿ ಪೊಲೀಸರು, ಬಿಗಿ ಬಂದೋಬಸ್ತ್ ಕಲ್ಪಿಸಿ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದAತೆ ಎಚ್ಚರಿಕೆ ವಹಿಸಿದ್ದರು.
ಕಾವೇರಿ ದಸರಾ ಸಮಿತಿಯ ವತಿಯಿಂದ ಸ್ವಾತಂತ್ರö್ಯ ಹೋರಾಟ ಗಾರರ ಭವನದಲ್ಲಿ ಪ್ರತಿಷ್ಠಾಪಿಸ ಲಾಗಿದ್ದ ಚಾಮುಂಡೇಶ್ವರಿ ದೇವಿಯ ಮೂರ್ತಿಗೆ ಪೂಜೆ ಸಲ್ಲಿಸಿದ ತರುವಾಯ ಮಂಟಪಕ್ಕೆ ದೇವಿಯನ್ನು ಪ್ರತಿಷ್ಠಾಪಿಸಿ ನಂತರ ಸಮಿತಿಯ ಅಧ್ಯಕ್ಷÀ ಕುಲ್ಲಚಂಡ ಪ್ರಮೋದ್ ಗಣಪತಿ ಸಮ್ಮುಖದಲ್ಲಿ ಮೆರವಣಿಗೆಗೆ ಚಾಲನೆ ನೀಡಲಾಯಿತು.
ದಶಮಂಟಪಗಳು ಶೋಭಾ ಯಾತ್ರೆಯಲ್ಲಿ ಗಮನ ಸೆಳೆದವು. ನಿರೀಕ್ಷೆಗೂ ಮೀರಿ ಮಂಟಪಗಳು ಹಲವು ಕಲಾಕೃತಿಗಳನ್ನು ಜನತೆಗೆ ಪ್ರದರ್ಶಿಸುವಲ್ಲಿ ಯಶಸ್ವಿಯಾದವು.
ಬಹುಮಾನ ವಿಜೇತರು
ಈ ಬಾರಿ ಪ್ರಥಮ ಬಹುಮಾನವನ್ನು ಸ್ನೇಹಿತರ ಬಳಗ ಕೊಪ್ಪ ಪ್ರಸ್ತುತ ಪಡಿಸಿದ ತಾರಕಾಸುರನ ವಧೆ ಹಾಗೂ ಹರಿಶ್ಚಂದ್ರಪುರದ ನಮ್ಮ ದಸರಾ ಸಮಿತಿ ಗಜಾಸುರನ ವಧೆ ಸಾದರಪಡಿಸಿದ ಪೌರಾಣಿಕ ಕಥಾ ಸಾರಂಶದ
(ಮೊದಲ ಪುಟದಿಂದ) ಮಂಟಪಗಳು ಪ್ರಥಮ ಬಹುಮಾನ ವನ್ನು ಸಮಾನ ಅಂಕ ಪಡೆದ ಹಿನ್ನೆಲೆ ಹಂಚಿಕೊAಡವು. ಮೈಸೂರಮ್ಮ ನಗರದ ಶಾರದಾಂಭ ದಸರಾ ಸಮಿತಿ ಶಾಖಾಂ ಭರಿಯ ಕಥೆಯನ್ನು ರೂಪಿಸಿ ದ್ವಿತೀಯ ಹಾಗೂ ಎರಡನೇ ವಿಭಾಗದ ಯುವ ದಸರಾ ಸಮಿತಿ ಕಲಾಂಶವಧೆ ನಿರೂಪಿಸಿ ತೃತೀಯ ಬಹುಮಾನಕ್ಕೆ ಭಾಜನವಾ ಯಿತು. ಕೈಕೇರಿಯ ಭಗವತಿ ದಸರಾ ಸಮಿತಿ ಮೂಕಸುರನ ವಧೆ, ಮಾರ್ಕೆಟ್ ಭಾಗದ ನವಚೇತನ ದಸರಾ ಸಮಿತಿ ಕೃಷ್ಣ ವೃತ್ತಾಂತ, ೩ನೇ ವಿಭಾಗದ ಸರ್ವರ ದಸರಾ ಸಮಿತಿ ಸಿಂಧೂರ ಗಣಪತಿ ಪುರಾಣ, ಅರುವತ್ತೋಕ್ಲುವಿನ ಕಾಡ್ಲಯ್ಯಪ್ಪ ದಸರಾ ಸಮಿತಿ ದಕ್ಷಯಜ್ಞ ಎಂಬ ಕಥಾನ ಕವನ್ನು ಪ್ರಸ್ತುಪಡಿಸಿದವು. ಉಳಿದಂತೆ ನಾಡಹಬ್ಬ ದಸರಾ ಸಮಿತಿ ಮಂಟಪ ಭಾರತಾಂಭೆಯ ಪ್ರತಿಮೆ ಹೊತ್ತು ಮುಂದೆ ಸಾಗಿತು. ದಸರಾದ ಆದಿಪೂಜಿತೆ ಚಾಮುಂಡಿ ಪ್ರತಿಷ್ಠಾಪನೆಯಾಗಿರುವ ಕಾವೇರಿ ದಸರಾ ಸಮಿತಿಯ ಮಂಟಪ ವನ್ನು ನವಮಂಟಪಗಳು ಹಿಂಬಾಲಿಸಿ ದವು. ಪ್ರತಿ ಮಂಟಪದಲ್ಲಿ ಕ್ರೇನ್, ಟ್ರಾಕ್ಟರ್, ಜೆಸಿಬಿ ಬಳಸಲಾಗಿತ್ತು. ದಶ ಮಂಟಪ ಗಳಿಗೆ ನಿಗದಿತ ಸಮಯದಲ್ಲಿ ಮುಖ್ಯ ರಸ್ತೆಯಲ್ಲಿ ಸಾರ್ವಜನಿಕರಿಗೆ ಉತ್ತಮ ಪ್ರದರ್ಶನ ನೀಡಬೇಕೆಂಬ ನಿರ್ದೇಶನ ವಿದ್ದರೂ ನಿಗದಿತ ಸಮಯದಲ್ಲಿ ಮಂಟಪ ಗಳು ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ.
ಪ್ರತಿವರ್ಷ ಬಹುಮಾನ ವಿತರಣೆ ಸಂದರ್ಭ ಹಲವು ಗೊಂದಲಗಳು ಕಾಣಿಸಿಕೊಳ್ಳುತ್ತಿದ್ದವು. ಈ ಬಾರಿ ಯಾವುದೇ ಗೊಂದಲಕ್ಕೆ ಎಡೆ ಮಾಡಿಕೊಡದಂತೆ ಎಚ್ಚರ ವಹಿಸಲಾಗಿತ್ತು. ಬಹುಮಾನಕ್ಕೆ ಅರ್ಹತೆ ವಿಚಾರವನ್ನು ಸಾರ್ವಜನಿಕವಾಗಿ ದಶಮಂಟಪಗಳ ಅಧ್ಯಕ್ಷರುಗಳ ಸಮ್ಮುಖದಲ್ಲಿ ತೀರ್ಪುಗಾರರಾದ ಚಂದನ್, ಮಂಜುನಾಥ್ ಹಾಗೂ ದಿಲನ್ ಚಂಗಪ್ಪ ಮಂಡಿಸಿದರು. ಇದರಿಂದ ಮಂಟಪದ ಅಧ್ಯಕ್ಷರುಗಳು ಬಹುಮಾನದ ಪಾರದರ್ಶಕತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ನಿಗದಿತ ಸಮಯದಲ್ಲಿ ಬಸ್ ನಿಲ್ದಾಣಕ್ಕೆ ಮಂಟಪಗಳು ಬಾರದೆ ಇರುವುದರಿಂದ ಸಹಜವಾಗಿಯೇ ನಾಗರಿಕರು ತಮ್ಮ ನೋವನ್ನು ತೋಡಿಕೊಂಡರು. ಮುಂಜಾನೆಯ ೭ ಗಂಟೆಯವರೆಗೂ ಮಂಟಪಗಳು ಪ್ರದರ್ಶನ ನೀಡಿದವು. ವಾಹನ ಸಂಚಾರಕ್ಕೆ ಮುಂಜಾನೆ ವೇಳೆ ತೊಂದರೆ ಉಂಟಾಯಿತು. ಸರ್ಕಲ್ ಇನ್ಸ್ಪೆಕ್ಟರ್ ಗೋವಿಂದರಾಜ್ ಈ ಬಗ್ಗೆ ಸಮಿತಿಯ ಪ್ರಮುಖರಿಗೆ ಮಾಹಿತಿ ತಿಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಮನವಿ ಮಾಡಿದರು. ಕೆಲ ಸಮಯದ ನಂತರ ಮುಖ್ಯ ರಸ್ತೆಯಲ್ಲಿ ಎಂದಿನAತೆ ವಾಹನ ಓಡಾಟಗಳು ಆರಂಭವಾದವು.
ಕಾವೇರಿ ದಸರಾ ಸಮಿತಿಯು ಸ್ವಾತಂತ್ರö್ಯ ಭವನದಲ್ಲಿ ೧೦ ದಿನಗಳ ಕಾಲ ಚಾಮುಂಡೇಶ್ವರಿ ದೇವಿಯ ಪ್ರತಿಮೆಗೆ ಪೂಜೆ ಸಲ್ಲಿಸಿ, ನವರಾತ್ರಿಯಂದು ಪ್ರತಿಮೆಯನ್ನು ಮುಂಜಾನೆಯ ಸೀಗೆತೋಡಿನಲ್ಲಿ ಪೂಜಾ ಕೈಂಕರ್ಯಗಳೊAದಿಗೆ ಸಮಿತಿಯ ಪದಾಧಿಕಾರಿಗಳ ಸಮ್ಮುಖದಲ್ಲಿ ವಿಸರ್ಜಿಸಲಾಯಿತು. ಮುಂಜಾನೆಯ ವೇಳೆ ಬಸ್ ನಿಲ್ದಾಣದಲ್ಲಿ ಮಂಟಪಗಳಿಗೆ ಬಹುಮಾನವನ್ನು ಸಮಿತಿಯ ವತಿಯಿಂದ ವಿತರಿಸಲಾಯಿತು. ಈ ವೇಳೆ ಅಧ್ಯಕ್ಷ ಪ್ರಮೋದ್ ಗಣಪತಿ, ಉಪಾಧ್ಯಕ್ಷ ಶಿವಾಜಿ, ಕಾರ್ಯದರ್ಶಿ ಕಂದಾ ದೇವಯ್ಯ, ಸಮಿತಿಯ ಪ್ರಮುಖರಾದ ಚಂದನ್, ಮಂಜುನಾಥ್, ದಿಲನ್ ಚಂಗಪ್ಪ, ಗುರುರಾಜ್, ಬಿ.ಎನ್.ಪ್ರಕಾಶ್ ಹಾಗೂ ವೃತ್ತ ನಿರೀಕ್ಷಕ ಗೋವಿಂದರಾಜ್ ಹಾಜರಿದ್ದರು.
ನಗರದಲ್ಲಿ ವ್ಯಾಪಾರ ವಹಿವಾಟು ಉತ್ತಮವಾಗಿ ನಡೆಯಿತು. ಪೊಲೀಸರು ಆಯಾಕಟ್ಟಿನ ಪ್ರದೇಶದಲ್ಲಿ ಗಸ್ತು ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಪ್ರಬಾರ ಡಿವೈಎಸ್ಪಿ ಸುಂದರ್ರಾಜ್ ಮುಂದಾಳತ್ವದಲ್ಲಿ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು. ಗೋಣಿಕೊಪ್ಪ ಸಿಪಿಐ ಗೋವಿಂದರಾಜು, ಮಂಜಪ್ಪ, ಠಾಣಾಧಿಕಾರಿ ರೂಪಾದೇವಿ ಬೀರಾದಾರ್ ಸೇರಿದಂತೆ ವೀರಾಜಪೇಟೆ, ಕುಟ್ಟ ಭಾಗದ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಕರ್ತವ್ಯ ನಿರ್ವಹಿಸಿದರು. ಚೆಸ್ಕಾಂ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ವಿದ್ಯುತ್ ಸಮಸ್ಯೆ ಉಂಟಾಗದAತೆ ಅತ್ಯಂತ ಎಚ್ಚರಿಕೆ ಕಾರ್ಯನಿರ್ವಹಿಸಿದರು.ಈ ಬಾರಿ ಡಿಜೆ ಪ್ರದರ್ಶನಕ್ಕೆ ಹಿನ್ನಡೆಯಾಗುವ ಹಿನ್ನೆಲೆಯಲ್ಲಿ ಅನೇಕ ಮಂಟಪಗಳು ಕೊಡಗಿನ ಸಾಂಪ್ರದಾಯಿಕ ವಾಲಗಕ್ಕೆ ಒತ್ತು ನೀಡಿದ್ದವು. ಕೊಡಗಿನ ವಾಲಗಕ್ಕೆ ನಾಗರಿಕರು ಹೆಜ್ಜೆ ಹಾಕಿ, ಮೆರವಣಿಗೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು. ಹೆಚ್ಚಿನ ಸಂಖ್ಯೆಯಲ್ಲಿ ಯುವಕ ಯುವತಿಯರು ವಾಲಗಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿದರು.
(-ಚಿತ್ರ, ವರದಿ : ಹೆಚ್.ಕೆ.ಜಗದೀಶ್)