ಐಗೂರು, ಅ. ೨೫: ಹೊಸ ತೋಟದ ಪರಿಶಿಷ್ಟ ಪಂಗಡದ ಕಾಲೋನಿಯಲ್ಲಿ ವಿಶ್ವ ಕೈ ತೊಳೆಯುವ ದಿನಾಚರಣೆಯನ್ನು ಆಚರಿಸಲಾಯಿತು.

ಪರಿಶಿಷ್ಟ ಪಂಗಡದ ಕಾಲೋನಿಯ ಮಕ್ಕಳು ಮತ್ತು ಅಂಗನವಾಡಿ ಮಕ್ಕಳಿಗೆ ಕೈಯನ್ನು ಯಾವಾಗಲೂ ಸಾಬೂನಿನಿಂದ ತೊಳೆದು ನಂತರ ಆಹಾರ ಸೇವನೆ ಮಾಡುವುದರಿಂದ ದೇಹದೊಳಗೆ ಕೆಟ್ಟ ತ್ಯಾಜ್ಯ-ಕೊಳೆಗಳು ಸೇರಿಕೊಳ್ಳುವುದಿಲ್ಲ ಎಂದು ಮಕ್ಕಳಿಗೆ ಕೈ ತೊಳೆಯುವ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿಯನ್ನು ಆಶಾ ಕಾರ್ಯಕರ್ತೆ ಚಿತ್ರ ಅವರು ನೀಡಿದರು.

ಈ ಸಂದರ್ಭ ಉಷಾ, ಉಷಾ ಮಲ್ಲಿಕಾರ್ಜುನ, ಪಂಚಾಯಿತಿ ಉಪಾಧ್ಯಕ್ಷ ಸಲೀಂ ಹೊಸತೋಟ ಉಪಸ್ಥಿತರಿದ್ದರು.