ಶನಿವಾರಸಂತೆ, ಅ. ೨೫: ಪಟ್ಟಣದ ತ್ಯಾಗರಾಜ ಕಾಲೋನಿಯಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಿ-ಗುಳಿಗ ದೈವದ ಕ್ಷೇತ್ರದಲ್ಲಿ ಸೋಮವಾರ ಬೆಳಿಗ್ಗೆ ನವರಾತ್ರಿಯ ೯ನೇ ದಿನ ಮಹಾನವಮಿಯ ದುರ್ಗೆಯ ಒಂಭತ್ತನೇಯ ಅವತಾರ ಸಿದ್ಧಿಧಾತ್ರಿ ದೇವಿಯ ಆರಾಧನೆ ಹಾಗೂ ಆಯುಧ ಪೂಜಾ ಕೈಂಕರ್ಯಗಳು ಶ್ರದ್ಧಾಭಕ್ತಿಯಿಂದ ಜರುಗಿದವು.

ಕ್ಷೇತ್ರದಲ್ಲಿ ಬನದ ಜಾಗದ ಕುಟುಂಬಸ್ಥರಾದ ಜಯಂತಿಮಾಲ- ದಾಮೋದರ್ ಕುಟುಂಬದವರು ಹಾಗೂ ಶಿಕ್ಷಕಿ ಮಾಲಿನಿ-ಶೇಷಗಿರಿ ಕುಟುಂಬದವರ ಸೇವಾರ್ಥ ಪೂಜೆಯ ಜತೆಗೆ, ಭಕ್ತಾದಿಗಳು ಸಿದ್ಧಿಧಾತ್ರಿ ತಾಯಿ, ಚಾಮುಂಡೇಶ್ವರಿ ದೇವಿ ಮತ್ತು ಗುಳಿಗ ದೈವಕ್ಕೆ ವಿವಿಧ ಬಗೆಯ ಹೂವುಗಳು, ಗೆಜ್ಜೆವಸ್ತç, ಗಾಜಿನ ಬಳೆ, ಹಣ್ಣುಕಾಯಿ ಮತ್ತು ನೈವೇದ್ಯ ಸಮರ್ಪಿಸಿದರು. ಅರ್ಚಕರಾದ ಪ್ರಕಾಶ್ಚಂದ್ರ ಸುವರ್ಣ ಪೂಜಾ ವಿಧಿ ನೆರವೇರಿಸಿದರು.

ಭಕ್ತರು ಶ್ರದ್ಧಾಭಕ್ತಿಯಿಂದ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮಹಾಮಂಗಳಾರತಿ ನಂತರ ತೀರ್ಥ-ಪ್ರಸಾದ ವಿನಿಯೋಗ ನಡೆದು ನವರಾತ್ರಿಯ ವ್ರತಾಚರಣೆಯೊಂದಿಗೆ ಒಂಭತ್ತನೇಯ ದಿನದ ಮಹಾನವಮಿ ಪೂಜಾ ಕಾರ್ಯ ಸಂಪನ್ನವಾಯಿತು.