ಮಡಿಕೇರಿ, ಅ. ೨೩ : ದಕ್ಷಿಣ ಕೊಡಗಿನ ಬಾಡಗರಕೇರಿ ಯಲ್ಲಿರುವ ಶ್ರೀ ಮೃತ್ಯುಂಜಯ ದೇವಸ್ಥಾನದಲ್ಲಿ ಎರಡನೇ ವರ್ಷದ ಸಾಮೂಹಿಕ ವಾಹನ ಪೂಜೆಯನ್ನು ಮಾಡಲಾಯಿತು. ಸ್ಥಳೀಯ ಗ್ರಾಮಸ್ಥರ ವಾಹನಗಳು, ಪೂಜೆಗೆ ಆಗಮಿಸಿದ್ದ ಭಕ್ತಾದಿಗಳ ವಾಹನ, ದೇವಸ್ಥಾನಕ್ಕೆ ಬರುವ ಸರಕಾರಿ ಬಸ್ ಸೇರಿದಂತೆ ನೂರಾರು ವಾಹನಗಳಿಗೆ ದೇವಸ್ಥಾನದ ವತಿಯಿಂದ ಉಚಿತವಾಗಿ ಪೂಜೆ ನೆರವೇರಿಸಿಕೊಡುವುದರೊಂದಿಗೆ ಎಲ್ಲರಿಗೂ ಸಿಹಿ ಹಾಗೂ ಪ್ರಸಾದ ವಿತರಿಸಲಾಯಿತು. ದೇವಸ್ಥಾನ ಸಮಿತಿ ಅಧ್ಯಕ್ಷ ಬಲ್ಯಮಿದೇರಿರ ಸುರೇಶ್, ಕಾರ್ಯದರ್ಶಿ ಕಾಯಪಂಡ ಸತು ಚಿಣ್ಣಪ್ಪ, ನಾಡ್ ತಕ್ಕರಾದ ಕಾಯಪಂಡ ಅಯ್ಯಪ್ಪ, ದೇವತಕ್ಕರಾದ ಅಣ್ಣೀರ ದಾದಾ ಗಣಪತಿ, ಆಡಳಿತ ಮಂಡಳಿ ಸದಸ್ಯರು, ಇತರ ಗ್ರಾಮಸ್ಥರು ಈ ಸಂದರ್ಭ ಹಾಜರಿದ್ದರು.