ಗೋಣಿಕೊಪ್ಪಲು, ಅ. ೨೩: ವಾಣಿಜ್ಯ ನಗರದಲ್ಲಿ ಆಯುಧ ಪೂಜೆಯ ಸಂಭ್ರಮ ಮನೆ ಮಾಡಿತ್ತು. ಬೆಳಿಗ್ಗೆ ೫ ಗಂಟೆಯಿAದಲೇ ಆಟೋ ನಿಲ್ದಾಣದಲ್ಲಿ ಪೂಜೆ ಕಾರ್ಯ ಆರಂಭಿಸಲಾಗಿತ್ತು. ಸರತಿ ಸಾಲಿನಲ್ಲಿ ಬಂದ ಆಟೋ ಚಾಲಕ ಹಾಗೂ ಮಾಲೀಕರು ಸಿಂಗಾರಗೊAಡಿದ್ದ ತಮ್ಮ ತಮ್ಮ ಆಟೋಗಳಿಗೆ ಪೂಜೆ ಸಲ್ಲಿಸಿದರು.

ಮೊದಲ ಬಾರಿಗೆ ನೂರಾರು ರೈತರು ಹೂವಿನ ವ್ಯಾಪಾರಕ್ಕೆ ನಗರಕ್ಕೆ ಆಗಮಿಸಿದ್ದರು. ರಸ್ತೆ ಬದಿಯಲ್ಲಿ ಹೂವಿನ ವ್ಯಾಪಾರವನ್ನು ಭರ್ಜರಿಯಾಗಿ ನಡೆಸಿದರು.

ನಗರದ ಅಂಗಡಿ, ಮಳಿಗೆಗಳು, ಹೂವಿನ ಅಲಂಕಾರ ಹಾಗೂ ಲೈಟಿಂಗ್‌ಗಳಿAದ ಕಂಗೊಳಿಸುತ್ತಿದ್ದವು. ಮಹಿಳೆಯರು, ಮಕ್ಕಳು ತಮ್ಮ ತಮ್ಮ ವಾಹನಗಳಿಗೆ ಪೂಜೆ ಸಲ್ಲಿಸುವ ಸಲುವಾಗಿ ಅಪಾರ ಸಂಖ್ಯೆಯಲ್ಲಿ ನಗರಕ್ಕೆ ಭೇಟಿ ನೀಡಿ ಹೂ, ಬಾಳೆಗಿಡ, ಇತ್ಯಾದಿ ಅಗತ್ಯ ವಸ್ತುಗಳನ್ನು ಖರೀದಿಸಿದರು.

ಮುಂಜಾನೆಯಿAದಲೇ ವಾಹನ ದಟ್ಟಣೆ ಹೆಚ್ಚಾಗಿತ್ತು. ಮಾರ್ಕೆಟ್ ಆವರಣದ ನವಚೇತನ ದಸರಾ ಸಮಿತಿಯ ವತಿಯಿಂದ ಅನ್ನದಾನ ಕಾರ್ಯಕ್ರಮ ನಡೆಯಿತು.

೩೪ನೇ ವರ್ಷದ ನವಚೇತನ ದಸರಾ ಸಮಿತಿಯ ಅಧ್ಯಕ್ಷರಾದ ಕರ್ಣರಾಜ್ ತಂಬಿ ಅಧ್ಯಕ್ಷತೆಯಲ್ಲಿ ದಾನಿಗಳಾದ ಎಂ.ಜಿ. ಮೋಹನ್, ದಸರಾ ಸಮಿತಿಯ ಅಧ್ಯಕ್ಷ ಪ್ರಮೋದ್ ಗಣಪತಿ, ಗ್ರಾ.ಪಂ. ಮಾಜಿ ಅಧ್ಯಕ್ಷೆ ಮನ್ನಕಮನೆ ಸೌಮ್ಯಬಾಲು, ಕಾರ್ಯದರ್ಶಿ ಸಚಿನ್ ಜಲೀಲ್, ಎಂ.ಆರ್. ರಫೀಕ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು. ಸಾವಿರಾರು ಮಂದಿ ಅನ್ನದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಗ್ರೀಸ್ ಕಂಬ ಹತ್ತುವ ಸ್ಪರ್ಧೆ

ಆಟೋ ಚಾಲಕರ ಹಾಗೂ ಮಾಲೀಕರ ಸಂಘದಿAದ ಗ್ರೀಸ್ ಕಂಬ ಹತ್ತುವ ಸ್ಪರ್ಧೆಗೆ ಬಸ್ ನಿಲ್ದಾಣದಲ್ಲಿ ಗಣ್ಯರು ಚಾಲನೆ ನೀಡಿದರು.

ಬಸ್ ನಿಲ್ದಾಣದಲ್ಲಿ ಬೆಳಿಗ್ಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾವೇರಿ ದಸರಾ ಸಮಿತಿಯ ಅಧ್ಯಕ್ಷರಾದ ಪ್ರಮೋದ್ ಗಣಪತಿ, ಉಪಾಧ್ಯಕ್ಷ ಶಿವಾಜಿ, ಗ್ರಾ.ಪಂ. ಅಧ್ಯಕ್ಷೆ ಸೌಮ್ಯಬಾಲು, ಆಟೋ ಸಂಘದ ಗೌರವ ಅಧ್ಯಕ್ಷ ಕುಲ್ಲಚಂಡ ಬೋಪಣ್ಣ, ಅಧ್ಯಕ್ಷ ಜಪ್ಪು ಸುಬ್ಬಯ್ಯ, ಕಾರ್ಯದರ್ಶಿ ಕೆ.ವಿ. ಸುರೇಶ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಗ್ರಾಮೀಣ ಪ್ರದೇಶದ ಹಲವಾರು ಯುವಕರು ಗ್ರೀಸ್ ಕಂಬ ಹತ್ತುವ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಉತ್ತಮ ವಾಹನ ಅಲಂಕಾರಕ್ಕೆ ಸಮಿತಿಯ ವತಿಯಿಂದ ಬಹುಮಾನ ನೀಡಲಾಯಿತು. ಸಂಘದ ವತಿಯಿಂದ ಅನ್ನದಾನ ಕಾರ್ಯಕ್ರಮ ಜರುಗಿತು. -ಜಗದೀಶ್ ಹೆಚ್.ಕೆ.