ಕೂಡಿಗೆ, ಅ. ೨೩: ಕುಶಾಲನಗರ ರೋಟರಿ ಸಂಸ್ಥೆಗೆ ರೋಟರಿ ಜಿಲ್ಲಾ ೩೧೮೧ ರ ರಾಜ್ಯಪಾಲ ಹೆಚ್.ಆರ್. ಕೇಶವ ಅವರು ಭೇಟಿ ನೀಡಿದರು.
ಈ ಸಂದರ್ಭ ಕುಶಾಲನಗರ ರೋಟರಿ ವತಿಯಿಂದ ಕುಶಾಲನಗರ ಕಲಾಭವನ ಮುಂಭಾಗ ಕಾವೇರಿ ಬಡಾವಣೆಯ ಉದ್ಯಾನವನದಲ್ಲಿ ಅಳವಡಿಸಿದ್ದ ಹೊರಾಂಗಣ ವ್ಯಾಯಾಮ ಉಪಕರಣಗಳನ್ನು ಲೋಕಾರ್ಪಣೆಗೊಳಿಸಿ ಪುರಸಭೆಗೆ ಹಸ್ತಾಂತರಿಸಲಾಯಿತು.
ಮಾದಾಪಟ್ಟಣ ಶಾಲೆಯ ಹಿಂಭಾಗದ ಅಂಗನವಾಡಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ, ಆಟಿಕೆ ಸಾಮಗ್ರಿ, ಜಮಖಾನ, ವಾಟರ್ ಫಿಲ್ಟರ್ ಸೇರಿದಂತೆ ವಿವಿಧ ಶೈಕ್ಷಣಿಕ ಉಪಕರಣಗಳನ್ನು ಕೊಡುಗೆಯಾಗಿ ನೀಡಲಾಯಿತು.
ಸಂಜೆ ರೋಟರಿ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿಜೇತ ಶಿಕ್ಷಕರಾದ ಸುನಿತಾ ಲೋಕೇಶ್, ಉ.ರಾ. ನಾಗೇಶ್, ಬಿ.ಟಿ. ಪೂರ್ಣೇಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭ ರೋಟರಿ ಅಧ್ಯಕ್ಷೆ ಸುನಿತಾ ಮಹೇಶ್, ಅಸಿಸ್ಟೆಂಟ್ ಗವರ್ನರ್ ಲಿಖಿತ್ ಎಂ.ಡಿ., ಜೋನಲ್ ಲೆಫ್ಟಿನೆಂಟ್ ಉಲ್ಲಾಸ್ ಕೃಷ್ಣ, ಕಾರ್ಯದರ್ಶಿ ಶಿರ್ಲಿ ಸಂತೋಷ್, ರೋಟರಿ ಪದಾಧಿಕಾರಿಗಳಾದ ಮಹೇಶ್ ಕುಮಾರ್ ನಲ್ವಾಡೆ, ಹರಿ ಎ. ಶೆಟ್ಟಿ, ಆರತಿ ಶೆಟ್ಟಿ, ಎಸ್.ಕೆ. ಸತೀಶ್, ಶೋಭಾ ಸತೀಶ್, ಎಂ.ಡಿ. ರಂಗಸ್ವಾಮಿ, ರವೀಂದ್ರ ವಿ. ರೈ ಮತ್ತಿತರರು ಇದ್ದರು.