ವೀರಾಜಪೇಟೆ, ಅ: ೨೩: ಬೈಕ್‌ನಲ್ಲಿ ಕಾರೊಂದನ್ನು ಹಿಂಬಾಲಿಸಿ ಹಿಂದಿಕ್ಕುವ ತವಕದಲ್ಲಿ ಮುಂದಿನಿAದ ಬಂದ ಲಾರಿಗೆ ಡಿಕ್ಕಿ ಹೊಡೆದು ಯುವಕನೋರ್ವ ಸಾವನ್ನಪ್ಪಿದ ಘಟನೆ ಪೆರುಂಬಾಡಿ ಮಾಕುಟ್ಟ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.

ಕೇರಳ ರಾಜ್ಯದ ಇರಿಟ್ಟಿ ತಾಲೂಕು ಉಳಿಯಿಲ್ ಗ್ರಾಮದ ನಿವಾಸಿ ಆಲಿ ಮತ್ತು ಆಫ್ಸಿ ದಂಪತಿಯ ಪುತ್ರ ಸುನೀಫ್ (೩೩) ಮೃತ ದುರ್ದೈವಿ.

ಮೃತ ಸುನೀಫ್ ವಿವಾಹಿತನಾಗಿದ್ದು, ಬೆಂಗಳೂರು ಹೊರವಲಯದಲ್ಲಿ ಹೊಟೇಲ್ ನಡೆಸುತಿದ್ದ ಎನ್ನಲಾಗಿದೆ. ಇಂದು ಮುಂಜಾನೆ ಬೆಂಗಳೂರಿನಿAದ ಸ್ವಗೃಹಕ್ಕೆ ವೀರಾಜಪೇಟೆ ಮಾರ್ಗವಾಗಿ ತನ್ನ ದ್ವಿಚಕ್ರ ವಾಹನ ಬುಲೆಟ್ ಎನ್‌ಫೀಲ್ಡ್ (ಕೆಎಲ್೧೭-೭೮ಎ-೭೫೯೨) ನಲ್ಲಿ ಪೆರುಂಬಾಡಿ ಮಾಕುಟ್ಟ ರಾಜ್ಯ ಹೆದ್ದಾರಿಯಲ್ಲಿ ತೆರಳುತ್ತಿದ್ದಾಗ ಕಾರೊಂದನ್ನು ಹಿಂದಿಕ್ಕಲು ಮುಂದಾಗಿದ್ದು, ಪೆರುಂಬಾಡಿ ಪೊಲೀಸ್ ತನಿಖಾ ಕೇಂದ್ರದಿAದ ಎರಡು ಕಿ.ಮೀ. ದೂರದಲ್ಲಿ ಎದುರಿನಿಂದ ಬಂದ ಕಣ್ಣನ್ನೂರು ವಳವಟ್ಟಣಂನಿAದ ಬೆಂಗಳೂರಿಗೆ ಫ್ಲೈವುಡ್ ಹೊತ್ತ ಲಾರಿ (ಕೆಎ ೦೫-ಎಸಿ-೯೪೨೮)ಗೆ ಡಿಕ್ಕಿಯಾಗಿ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ವೀರಾಜಪೇಟೆ ವೃತ್ತ ನಿರೀಕ್ಷಕ ಶಿವರುದ್ರ ಬಿ.ಎಸ್ ಮತ್ತು ಗ್ರಾಮಾಂತರ ಠಾಣಾಧಿಕಾರಿ ಮಂಜುನಾಥ್ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದು, ವೀರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಲಾರಿ ಚಾಲಕ ಸುರೇಂದ್ರನ್ ಎಂಬಾತನ ಮೇಲೆ ಪ್ರಕರಣ ದಾಖಲಾಗಿದೆ. -ಕಿಶೋರ್ ಕುಮಾರ್ ಶೆಟ್ಟಿ.