ಕೂಡಿಗೆ, ಅ. ೨೨: ಇಲ್ಲಿಗೆ ಸಮೀಪದ ಹೆಬ್ಬಾಲೆ ಗ್ರಾಮ ಪಂಚಾಯಿತಿಯ ಮಾಸಿಕ ಸಭೆಯು ಅಧ್ಯಕ್ಷೆ ಅರುಣ ಕುಮಾರಿ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಮೊದಲಿಗೆ ಖರ್ಚು ವೆಚ್ಚಗಳ ಬಗ್ಗೆ ಮಾಜಿ ಅಧ್ಯಕ್ಷ ಮಂಜುನಾಥ, ಜೋಗಿ, ಮಹದೇವ ಅವರು ಸವಿಸ್ತಾರವಾದ ಚರ್ಚೆಗಳನ್ನು ನಡೆಸಿ, ಶುಚಿತ್ವಕ್ಕೆ ಸಂಬAಧಿಸಿದ ಹೆಚ್ಚು ಹಣವನ್ನು ವ್ಯಯ ಮಾಡಲಾಗಿದೆ. ಅದರ ಬದಲಾಗಿ ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿAದಲೇ ಗ್ರಾಮದ ಎಲ್ಲಾ ವಾರ್ಡ್ಗಳ ಶುಚಿತ್ವ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಅದಕ್ಕೆ ಸಂಬAಧಿಸಿದ ಎಲ್ಲಾ ನೀರಿನ ಟ್ಯಾಂಕರ್ಗಳನ್ನು ಸ್ವಚ್ಛತೆಗೊಳಿಸುವಂತೆ ಶುದ್ಧ ಕುಡಿಯುವ ನೀರಿನ ಘಟಕವನ್ನು ದುರಸ್ತಿ ಪಡಿಸುವ ಬಗ್ಗೆ ಒತ್ತಾಯಿಸಿದರು.
ಕಳೆದ ಎರಡು ವರ್ಷಗಳಿಂದಲೂ ರಾಷ್ಟಿçÃಯ ಉದ್ಯೋಗ ಖಾತರಿ ಯೋಜನೆ ಕಾಮಗಾರಿಯ ಕೆಲಸಗಳು ನಡೆಯುತ್ತಿವೆ, ಆದರೆ ಅದಕ್ಕೆ ಸಂಬAಧಿಸಿದ ಸಾಮಾಗ್ರಿಗಳ ಬಿಲ್ಗಳು ಇದುವರೆಗೂ ಬರದೆ ಇರುವುದರಿಂದಾಗಿ ಉದ್ಯೋಗ ಚೀಟಿಯ ಅಡಿಯಲ್ಲಿ ಕೆಲಸವನ್ನು ನಿರ್ವಹಿಸದ್ದ ಗ್ರಾಮಸ್ಥರಿಗೆ ಬಾರಿ ತೊಂದರೆಗಳು ಅಗುತ್ತಿವೆ ಅದರ ಹಣವನ್ನು ಶೀಘ್ರವಾಗಿ ಅವರವರ ಖಾತೆ ವರ್ಗಾವಣೆ ಮಾಡುವಂತೆ ಸದಸ್ಯರಾದ ಹೆಚ್.ಎನ್. ಶಿವನಂಜಪ್ಪ, ಪರಮೇಶ್ ತಿಳಿಸಿದರು.
೧೫ನೇ ಹಣಕಾಸು ಯೋಜನೆಯ ಕಾಮಗಾರಿ ಗಳನ್ನು ಕ್ರಿಯಾ ಯೋಜನೆ ಅನುಗುಣವಾಗಿ ವಿವಿಧ ಕಾಮಗಾರಿಯನ್ನು ಪೂರ್ಣ ಗೊಳಿಸುವ ವಿಷಯಗಳ ಬಗ್ಗೆ ಚರ್ಚೆಗಳು ನಡೆದವು.
ಅಧ್ಯಕ್ಷೆ ಅರುಣಕುಮಾರಿ ಮಾತನಾಡಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ವಾರ್ಡ್ಗಳ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಪ್ರಾಮಾಣಿಕವಾಗಿ ಮತ್ತು ಪಂಚಾಯಿತಿ ನಿಯಮಾನುಸಾರ ಅಡಿಯಲ್ಲಿ ಗ್ರಾಮ ಪಂಚಾಯಿತಿ ಬೇಕಾಗುವ ಉತ್ತಮ ಗುಣಮಟ್ಟದ ವಸ್ತುಗಳನ್ನು ಖರೀದಿಸಿ, ಎಲ್ಲಾ ಸೌಕರ್ಯಗಳ ಒದಗಿಸುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರು ಮತ್ತು ಶುಚಿತ್ವಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುವುದು ಎಂದರು.
ಅಭಿವೃದ್ಧಿ ಅಧಿಕಾರಿ ಅರುಣ್ ಭಾಸ್ಕರ್ ಸರಕಾರ ಹೊಸ ಯೋಜನೆಗಳ ಬಗ್ಗೆ ಸಭೆಗೆ ಮಾಹಿತಿಯನ್ನು ತಿಳಿಸಿದರು. ನಂತರ ಸಾರ್ವಜನಿಕರಿಂದ ಬಂದ ಅರ್ಜಿಗಳನ್ನು ಸಭೆಯ ಗಮನಕ್ಕೆ ತಂದರು. ಈ ಸಂದರ್ಭ ಗ್ರಾ.ಪಂ. ಉಪಾಧ್ಯಕ್ಷೆ ಲತಾ, ಮಂಜುನಾಥ, ಚಂದ್ರಶೇಖರ್ ಜೋಗಿ, ರತ್ನಮ್ಮ, ಪರಮೇಶ್, ಮಹದೇವ, ಕವಿತ, ಪವಿತ್ರ, ಯಶಸ್ವಿನಿ, ಪುಟ್ಟ ಲಕ್ಷಿö್ಮ ಹಾಜರಿದ್ದರು.