ಸುಂಟಿಕೊಪ್ಪ, ಅ. ೨೨: ಸುಂಟಿಕೊಪ್ಪ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಚುನಾವಣೆಯಲ್ಲಿ ೧೩ ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತರು ೯ ಸ್ಥಾನ ಗಳಿಸಿದ್ದು ಕಾಂಗ್ರೆಸ್ ಬೆಂಬಲಿತರು ೪ ಸ್ಥಾನ ಪಡೆದುಕೊಂಡಿದ್ದಾರೆ.
ಬಿಜೆಪಿ ಕಾಂಗ್ರೆಸ್ ಪಕ್ಷದ ಹಿರಿಯ ಸದಸ್ಯರುಗಳು ಈ ಬಾರಿ ಬಹುತೇಕ ಹಳೆ ನಿರ್ದೇಶಕರುಗಳನ್ನು ಆಯ್ಕೆ ಮಾಡುವಲ್ಲಿ ಅಧಿಕಾರ ಹಂಚಿಕೆಯ ಒಡಂಬಡಿಕೆ ನಡೆದಿತ್ತು ಎನ್ನಲಾಗಿದೆ. ಆದರೆ ಸಾಲಗಾರರ ಸಾಮಾನ್ಯ ೬ ಸ್ಥಾನಗಳಿಗೆ ೭ ಮಂದಿ ಸ್ಪರ್ಧಿಸಿದ್ದು, ಪರಿಶಿಷ್ಟ ಜಾತಿ ೧ ಸ್ಥಾನಕ್ಕೆ ೨ ಮಂದಿ ಸ್ಪರ್ಧಿಸಿದ್ದರಿಂದ ಎಲ್ಲಾ ಸ್ಥಾನಗಳ ಅವಿರೋಧ ಆಯ್ಕೆಯ ೨ ಪಕ್ಷದ ಒಡಂಬಡಿಕೆಗೆ ಅಡ್ಡಿಯಾಯಿತು.
ತಾ. ೧೬ ರಂದು ಚುನಾವಣೆ ನಡೆದ ಸಾಲಗಾರರ ಸಾಮಾನ್ಯ ಕ್ಷೇತ್ರದಿಂದ ಬಿಜೆಪಿಯ ಪಟ್ಟೆಮನೆ ಪಿ. ಉದಯಕುಮಾರ್ ೪೬೨ ಮತಗಳನ್ನು ಪಡೆದರೆ, ಎನ್.ಸಿ. ಪೊನ್ನಪ್ಪ (ಕ್ಲೆöÊವಾ) ೪೪೭ ಮತ ಪಡೆದರು. ಡಾ. ಶಶಿಕಾಂತ ರೈ ೩೮೬ ಮತಗಳನ್ನು ಪಡೆಯುವ ಮೂಲಕ ವಿಜಯ ಸಾಧಿಸಿದರು.
ಕಾಂಗ್ರೆಸ್ಸಿನ ಕುಂಜಿಲನ ಎಸ್. ಮಂಜುನಾಥ್ ೪೮೫ ಮತಗಳನ್ನು ಪಡೆದರೆ ಜರ್ಮಿ ಡಿಸೋಜ ೪೭೬ ಮತ ಪಡೆದರೆ, ಕೆ.ಆರ್. ಮಂಜುನಾಥ್ ೪೫೮ ಮತಗಳನ್ನು ಪಡೆಯುವ ಮೂಲಕ ಜಯಗಳಿಸಿದರೆ. ಪಕ್ಷೇತರ ಆಭ್ಯರ್ಥಿ ಆರ್.ಆರ್. ಮೋಹನ ೨೧೨ ಮತಗಳನ್ನು ಪಡೆದು ಸೋಲು ಕಂಡರು. ಪರಿಶಿಷ್ಟ ಜಾತಿ ಕ್ಷೇತ್ರದಿಂದ ಕೆ.ಆರ್. ದಯಾನಂದ ೩೬೭ ಗೆಲುವು ಸಾಧಿಸಿದರೆ ಪಕ್ಷೇತರ ಆಭ್ಯರ್ಥಿ ಐ. ಸೋಮನಾಥ ೧೫೫ ಮತಗಳನ್ನು ಪಡೆದು ಪರಾಜಿತರಾದರು. ಅವಿರೋಧವಾಗಿ ಅಧ್ಯಕ್ಷ ಬಿಜೆಪಿಯ ದಾಸಂಡ ರಮೇಶ್ ಚಂಗಪ್ಪ ಸಾಲಗಾರಲ್ಲದ ಕ್ಷೇತ್ರದಿಂದ ಬಿಜೆಪಿಯ ಎಂ.ಎನ್. ಕೊಮಾರಪ್ಪ ಬಿಸಿಎಂ ಬಿ ೧ ಕ್ಷೇತ್ರದಿಂದ ಮಹಿಳಾ ಮೀಸಲು ಕ್ಷೇತ್ರದಿಂದ ಬಿಜೆಪಿಯ ಪಿ.ಪಿ. ಲೀಲಾವತಿ, ಕೆ.ಎನ್. ರಮ್ಯಾ ಪರಿಶಿಷ್ಟ ಪಂಗಡದಿAದ ಬಿಜೆಪಿಯ ಡಿ.ಕೆ. ಗಂಗಾಧರ ಹಾಗೂ ಬಿಸಿಎಂ(ಎ) ಕ್ಷೇತ್ರದಿಂದ ಕಾಂಗ್ರೆಸ್ನ ಕೆ.ಪಿ. ಜಗನ್ನಾಥ್ ಅವಿರೋಧ ಆಯ್ಕೆಯಾಗಿದ್ದಾರೆ.
ಸಾಲಗಾರರು ಆಗಿದ್ದರೂ ಸಾಲಗಾರರಲ್ಲದ ಪಟ್ಟಿಗೆ ಸೇರಿಸಿರುವುದರಿಂದ ಮತದಾನದಿಂದ ವಂಚಿತರಾಗಿದೆವು ಎಂದು ಹಲವು ಮಂದಿ ಸಹಕಾರಿ ಸದಸ್ಯರುಗಳು ಪತ್ರಿಕೆಯೊಂದಿಗೆ ದೂರಿಕೊಂಡಿದ್ದಾರೆ.