ಮಡಿಕೇರಿ, ಅ.೨೨ : ಕೊಡವ ಲ್ಯಾಂಡ್ ಜಿಯೋ-ರಾಜಕೀಯ ಸ್ವಾಯತ್ತತೆಗಾಗಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ನಡೆಸುತ್ತಿರುವ ಪಾದಯಾತ್ರೆಯ ೪ನೇ ಹಂತ ವೀರಾಜಪೇಟೆ ತಾಲೂಕಿನ ಆರ್ಜಿ ಗ್ರಾಮದ ಬೋಟೋಳಿನಾಡ್ನಲ್ಲಿ ಪೂರ್ಣಗೊಂಡಿತು.
ಸಿಎನ್ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಕೋವಿಯೊಂದಿಗೆ ಪಾದಯಾತ್ರೆ ನಡೆಸಿದ ಗ್ರಾಮದ ಕೊಡವ, ಕೊಡವತಿಯರು ಕೊಡವಲ್ಯಾಂಡ್ ಜಿಯೋ-ರಾಜಕೀಯ ಸ್ವಾಯತ್ತತೆ ಪರ ಘೋಷಣೆಗಳನ್ನು ಕೂಗಿದರು.
ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಬೋಟೋಳಿನಾಡ್ ತಿರಿಕೆ ಪಾಳಿ ಮಂದ್ನಲ್ಲಿ ಕೊಡವ ಜನಜಾಗೃತಿ ಸಭೆ ನಡೆಸಿದ ನಾಚಪ್ಪ ಅವರು, ಅತ್ಯಂತ ಸೂಕ್ಷö್ಮ ಜನಾಂಗವಾಗಿರುವ ಕೊಡವರಿಗೆ ಸಾಂವಿಧಾನಿಕ ಭದ್ರತೆ ಸಿಗಬೇಕಾದರೆ ಕೊಡವ ಲ್ಯಾಂಡ್ ಜಿಯೋ-ರಾಜಕೀಯ ಸ್ವಾಯತ್ತತೆಯ ಬೇಡಿಕೆ ಈಡೇರಬೇಕೆಂದು ಪ್ರತಿಪಾದಿಸಿದರು.
೫ನೇ ಹಂತದ ಪಾದಯಾತ್ರೆ
ಐದನೇ ಹಂತದ ಪಾದಯಾತ್ರೆ ನ.೭ ರಂದು ಬೆಳಗ್ಗೆ ೧೦ ಗಂಟೆಗೆ ಬೆಪುö್ಪನಾಡ್ನ ಅರಮೇರಿ ಮಂದ್, ಮಧ್ಯಾಹ್ನ ೨.೩೦ ಗಂಟೆಗೆ ಕಡಂಗ ಮುರೂರು ಮಂದ್ (ವೀರಾಜಪೇಟೆ ತಾಲೂಕು), ನ.೮ರಂದು ಬೆಳಗ್ಗೆ ೧೦ ಗಂಟೆಗೆ ಕಡಿಯತ್ನಾಡ್ನ ಕರಡದ ಬೇಲಿಯಾಣೆ ಮಂದ್, ಮಧ್ಯಾಹ್ನ ೨.೩೦ ಗಂಟೆಗೆ ಬಲಂಬೇರಿ ಮಂದ್ ಮತ್ತು ನ.೯ ರಂದು ಬೆಳಗ್ಗೆ ೧೦ ಗಂಟೆಗೆ ನೂರಂಬಡನಾಡ್ ಮಂದ್, ಸಂಜೆ ೪.೩೦ ಗಂಟೆಗೆ ನೆಲಜಿನಾಡ್ ಮಂದ್ (ನೆಲಜಿ) (ಮಡಿಕೇರಿ ತಾಲೂಕು) ನಲ್ಲಿ ನಡೆಯಲಿದೆ.
ನ.೧೦ ರಂದು ಬೆಳಿಗ್ಗೆ ೯ ಗಂಟೆಗೆ ಯಾತ್ರೆಯು ಪಾಡಿನಾಡ್- ಪಾಡಿ ಇಗ್ಗುತ್ತಪ್ಪ ದೇವ ಸನ್ನಿಧಿ ತಲುಪಿ, ಮಧ್ಯಾಹ್ನ ೧೨ ಗಂಟೆಗೆ ಮಡಿಕೇರಿ ತಾಲೂಕಿನ ಕುಂಜಿಲ- ಕಕ್ಕಬ್ಬೆ ಕೆಂಜರಾಣೆ ಪಾಡಿನಾಡ್ ಮಂದ್ನಲ್ಲಿ ಸಮಾರೋಪಗೊಳ್ಳಲಿದೆ ಎಂದು ನಾಚಪ್ಪ ಮಾಹಿತಿ ನೀಡಿದ್ದಾರೆ.
ಬೋಟೋಳಿನಾಡ್ನಲ್ಲಿ ನಡೆದ ಪಾದಯಾತ್ರೆ ಹಾಗೂ ಜಾಗೃತಿ ಸಭೆಯಲ್ಲಿ ಪಟ್ಟಡ ಮೀನ್ ದೇವಯ್ಯ, ಪಟ್ಟಡ ದೇವಯ್ಯ, ಅಮ್ಮಣಕುಟ್ಟಂಡ ಕಟ್ಟಿ, ಬೊಳ್ಳೆಪಂಡ ಮೇದಪ್ಪ, ಅಚ್ಚಪಂಡ ಮುತ್ತಣ್ಣ, ಕರ್ತಚಿರ ರಾಯ್, ಚಂಬAಡ ಜನತ್, ಕಾಂಡೇರ ಸುರೇಶ್, ಕಂಬAಡ ದೇವಯ್ಯ, ಕಂಬAಡ ಭೀಮಯ್ಯ, ನಾಯಕಂಡ ವಿಜಯ, ಮತ್ತಿತರರು ಪಾಲ್ಗೊಂಡಿದ್ದರು. ಇದೇ ಸಂದರ್ಭ ಗ್ರಾಮದ ಹಿರಿಯರು ಸಿಎನ್ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರನ್ನು ಸನ್ಮಾನಿಸಿ ಗೌರವಿಸಿದರು.