ಸಂಪಾಜೆ, ಅ. ೨೩: ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳ ಕುರಿತು ಚರ್ಚಿಸಲು ಇತ್ತೀಚೆಗೆ ದೇವಸ್ಥಾನದ ಸಭಾಭವನದಲ್ಲಿ ಸಭೆ ಏರ್ಪಡಿಸಲಾಯಿತು. ದೇವಳದ ಮೊಕ್ತೇಸರರಾದ ಎಂ.ಬಿ. ಸದಾಶಿವ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೊಡಗು ಸಂಪಾಜೆ, ಚೆಂಬು ಗ್ರಾಮ ಹಾಗೂ ದ.ಕ. ಸಂಪಾಜೆಯ ಪದಾಧಿಕಾರಿಗಳು, ಸದಸ್ಯರು ಹಾಗೂ ಭಕ್ತಾದಿಗಳು ಭಾಗವಹಿಸಿದ್ದರು.
ಈ ಸಂದರ್ಭ ದೇವಾಲಯ ಕಾರ್ಯಾಧ್ಯಕ್ಷರುಗಳಾದ ಸೋಮಶೇಖರ್ ಕೋಯಿಂಗಾಜೆ, ಅನಂತ ಎನ್.ಸಿ., ಪ್ರಧಾನ ಕಾರ್ಯದರ್ಶಿಗಳಾದ ರಾಜಾರಾಮ್ ಕಳಗಿ, ಕಾರ್ಯದರ್ಶಿ ಲೋಹಿತ್ ಹೊದ್ದೆಟ್ಟಿ, ಆಡಳಿತ ಮಂಡಳಿ ಅಧ್ಯಕ್ಷ ಜಯಕುಮಾರ್ ಚೆದ್ಕಾರ್, ಹಿರಿಯರಾದ ಇಂದಿರಾ ದೇವಿಪ್ರಸಾದ್, ಸಂಪಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಮಾದೇವಿ ಬಾಲಚಂದ್ರ ಕಳಗಿ, ಚೆಂಬು ಗ್ರಾಮ ಪಂಚಾಯಿತಿ ಅಧ್ಯಕ್ಷ ತೀರ್ಥರಾಮ ಪೂಜಾರಿಗದ್ದೆ, ದೇವಳದ ಅರ್ಚಕ ಸತ್ಯನಾರಾಯಣ ಭಟ್ ಹಾಗೂ ವಿವಿಧ ಗ್ರಾಮಗಳ ಭಕ್ತಾದಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.