ಚೆಟ್ಟಳ್ಳಿ, ಅ. ೨೩: ಚೆಟ್ಟಳ್ಳಿ ಪೊಲೀಸ್ ಉಪ ಠಾಣೆಯಲ್ಲಿ ಆಯುಧ ಪೂಜೆ ಯನ್ನು ಆಚರಿಸಲಾಯಿತು. ಠಾಣೆಯನ್ನು ದೀಪಾಲಂಕಾರ ಹಾಗೂ ತಳಿರು ತೋರಣಗಳಿಂದ ಶೃಂಗರಿಸಲಾಗಿತ್ತು. ಉಪಠಾಣಾಧಿಕಾರಿ ದಿನೇಶ್ ಟಿ.ಆರ್ ಅವರ ನೇತೃತ್ವದಲ್ಲಿ ಆಯುಧ ಪೂಜೆ ಸಲ್ಲಿಸಲಾಯಿತು.
ಸಾರ್ವಜನಿಕರಿಗೆ ಪ್ರಸಾದ ಹಾಗೂ ಬೆಳಗಿನ ಉಪಹಾರ ಏರ್ಪಡಿಸಲಾಯಿತು. ಈ ಸಂದರ್ಭ ಪೊಲೀಸ್ ಸಿಬ್ಬಂದಿಗಳಾದ ಮಂಜು, ಪಿ.ಆರ್ ಉಮೇಶ್ ಮಾಳಿ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸ್ಥಳಿಯ ಬಾಡಿಗೆ ವಾಹನ ಮಾಲೀಕರು, ಅಂಗಡಿಮುAಗಟ್ಟು ಮಾಲೀಕರುಗಳು, ಗ್ರಾಮಸ್ಥರು ಹಾಜರಿದ್ದರು.