ಕೂಡಿಗೆ, ಅ. ೨೩: ಶ್ರೀ ದಂಡಿನಮ್ಮತಾಯಿ ನವರಾತ್ರಿ ಪೂಜಾ ಸೇವಾ ಸಮಿತಿ ಇವರ ವತಿಯಿಂದ ೭ನೇ ವರ್ಷದ ನವರಾತ್ರಿ ಪೂಜಾ ಕಾರ್ಯವು ೧೫ ರಿಂದ ಆರಂಭಗೊAಡು ದಿನಂಪ್ರತಿ ಪೂಜಾ ಕಾರ್ಯಕ್ರಮವು ದೇವಾಲಯದ ಆವರಣದಲ್ಲಿ ನಡೆಯುತ್ತಿದೆ.
ತಾ. ೨೦ ರಂದು ದೇವಿಯ ಆವರಣದಲ್ಲಿ ಹೋಮ ಹವನ, ದೇವಿಗೆ ಅಭಿಷೇಕ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳನ್ನು ಕಣಿವೆ ಶ್ರೀ ರಾಮಲಿಂಗೇಶ್ವರ ದೇವಾಲಯದ ಪ್ರಧಾನ ಅರ್ಚಕ ರಾಘವೇಂದ್ರ ಆಚಾರ್ ನೆರವೇರಿಸಿದರು. ಮಧ್ಯಾಹ್ನ ಮಹಾಮಂಗಳಾತಿ, ಪ್ರಸಾದ ವಿನಿಯೋಗ, ಅನ್ನಸಂತರ್ಪಣೆ, ಸಂಜೆ ದೇವಿಗೆ ಬಾಗಿನ ಸಮರ್ಪಿಸಲಾಯಿತು. ಪೂಜಾ ಕಾರ್ಯಕ್ರಮದಲ್ಲಿ ಕೂಡಿಗೆ, ಮಲ್ಲೇನಹಳ್ಳಿ, ಮದಲಾಪುರ ಸೇರಿದಂತೆ ನೂರಾರು ಭಕ್ತರು ಭಾಗವಹಿಸಿದ್ದರು. ಈ ಸಂದರ್ಭ ಶ್ರೀ ದಂಡಿನಮ್ಮತಾಯಿ ನವರಾತ್ರಿ ಪೂಜಾ ಸೇವಾ ಸಮಿತಿಯ ಎಲ್ಲಾ ಸದಸ್ಯರು ಹಾಜರಿದ್ದರು.