ಕಣಿವೆ, ಅ. ೨೩: ಶುಚಿತ್ವ ಪ್ರತಿಯೊಬ್ಬರ ಕರ್ತವ್ಯ.ಪರಿಸರವನ್ನು ಶುಚಿಗೊಳಿಸಿದರೆ ಆರೋಗ್ಯವನ್ನು ಕಾಪಾಡಬಹುದು ಎಂದು ಭಾಗಮಂಡಲ ಕಾವೇರಿ ಪದವಿಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕ ಗಿರಿಧರ್ ಹೇಳಿದರು.
ಪಟ್ಟಣದ ಹಾರಂಗಿ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ವತಿಯಿಂದ ರಾಷ್ಟಿçÃಯ ಸೇವಾ ಯೋಜನೆ, ರೋವರ್ ಮತ್ತು ರೇಂಜರ್ ಘಟಕ, ರೆಡ್ಕ್ರಾಸ್ ಸಹಭಾಗಿತ್ವದಲ್ಲಿ ಶನಿವಾರ ಆಯೋಜಿಸಲಾದ ಸ್ವಚ್ಛ ಭಾರತ್ ಅಭಿಯಾನ್ ಮತ್ತು ಕಾಲ್ನಡಿಗೆ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಯುವ ಜನಾಂಗ ಶುಚಿತ್ವಕ್ಕೆ ಹೆಚ್ಚಿನ ಆಸಕ್ತಿ ವಹಿಸಬೇಕಾಗಿದೆ. ಅದರಲ್ಲೂ ಕಾಲೇಜಿನ ವಾತಾವರಣ ವನ್ನು ಸ್ವಚ್ಛವಾಗಿಟ್ಟುಕೊಂಡರೆ ಶುಭ್ರ ಗಾಳಿಯ ವಾತಾವರಣ ಸಿಗಲಿದೆ ಎಂದರು.
ಕಾಲೇಜಿನ ಪ್ರಾಚಾರ್ಯ ಬಿ.ಎಂ. ಪ್ರವೀಣ್ ಅವರು, ವಿದ್ಯಾರ್ಥಿಗಳು ಕಸಗಳನ್ನು ಅಲ್ಲಲ್ಲಿ ಎಸೆಯದೆ ಕಸದ ತೊಟ್ಟಿಗಳಲ್ಲಿ ಹಾಕುವುದರ ಮೂಲಕ ಸ್ವಚ್ಛತಾ ಅಭಿಯಾನಕ್ಕೆ ಕೈ ಜೋಡಿಸಬೇಕು ಎಂದರು.
ನAತರ ಕಾಲೇಜಿನ ಆವರಣದಿಂದ ಸುಂದರನಗರದ ವರೆಗಿನ ರಸ್ತೆಯ ಎರಡು ಬದಿಗಳಲ್ಲಿ ಕಸ, ಕಡ್ಡಿ, ತ್ಯಾಜ್ಯಗಳನ್ನು, ಬಾಟಲಿಗಳನ್ನು ಸಂಗ್ರಹಿಸಿ ಶ್ರಮದಾನ ಮಾಡಿ ನಂತರ ತ್ಯಾಜ್ಯ ವಿಲೇವಾರಿ ವಾಹನದಲ್ಲಿ ಹಾಕುವುದರ ಮೂಲಕ ಶ್ರಮದಾನವನ್ನು ಮಾಡಲಾಯಿತು.
ಕಾಲೇಜಿನ ಸಹಾಯಕ ಪ್ರಾಧ್ಯಾಪಕರುಗಳಾದ ಡಾ. ರಶ್ಮಿ ಎಂ., ವಂದನ ಕೆ.ಆರ್., ಡಾ. ಹರ್ಷ ಬಿ.ಡಿ. ರಮೇಶ್ಚಂದ್ರ ಪಿ. ಸುಧಾಕರ್ ಟಿ.ಎಂ. ರಾಷ್ಟಿçÃಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿ ಡಾ. ಸುನಿಲ್ ಕುಮಾರ್ ಎಸ್. ರೇಂಜರ್ ಘಟಕದ ಸಂಚಾಲಕಿ ಕುಸುಮ ಕೆ.ಪಿ., ದೈಹಿಕ ನಿರ್ದೇಶಕಿ ಜಯಂತಿ, ಉಪನ್ಯಾಸಕರಾದ ಮನೋಜ್, ಚರಣ್ ರಾಜ್, ನಟರಾಜ್, ಲೋಹಿತ್, ಸಿದ್ದರಾಮೇಗೌಡ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಇದ್ದರು.