ಶ್ರೀಮಂಗಲ, ಅ. ೨೨: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್(ಡಿಸಿಸಿಬಿ)ನಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರಾಗಿದ್ದು, ರಾಷ್ಟಿçÃಕೃತ-ವಾಣಿಜ್ಯ ಬ್ಯಾಂಕ್ ಗಳ ಸರಿಸಮವಾಗಿ ಅಪೆಕ್ಸ್ ಬ್ಯಾಂಕ್ ಮೂಲಕ ನಮ್ಮ ಬ್ಯಾಂಕ್ನ ಗ್ರಾಹಕರಿಗೆ ಆನ್ ಲೈನ್ ವ್ಯವಹಾರ, ಹಣ ವರ್ಗಾವಣೆ ಸೌಲಭ್ಯ ಹೊಂದಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮತ್ತು ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಕೊಡಂದೇರ ಬಾಂಡ್ ಗಣಪತಿ ಅಭಿಪ್ರಾಯಪಟ್ಟರು.
ಅವರು ಶ್ರೀಮಂಗಲ ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡದಲ್ಲಿ ಡಿಸಿಸಿ ಬ್ಯಾಂಕ್ನ ಎಟಿಎಂ ಉದ್ಘಾಟಿಸಿ, ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಿಲ್ಲಾದ್ಯಂತ ಡಿಸಿಸಿ ಬ್ಯಾಂಕ್ ೧೫ ಎಟಿಎಂ ಸೇವೆ ನೀಡುತ್ತಿದ್ದು, ಶ್ರೀಮಂಗಲದಲ್ಲಿ ಡಿಸಿಸಿ ಬ್ಯಾಂಕ್ನ ವತಿಯಿಂದ ೧೬ನೇ ಎಟಿಎಂ ಕಾರ್ಯನಿರ್ವಹಿಸುತ್ತಿದೆ. ಇದರ ಸೌಲಭ್ಯ ಸದುಪಯೋಗಪಡಿಸಿಕೊಳ್ಳುವಂತೆ ಅವರು ಕರೆ ನೀಡಿದರು.
ಶ್ರೀಮಂಗಲ ಪ್ಯಾಕ್ಸ್ನಲ್ಲಿ ಸೇಫ್ ಲಾಕರ್ ಉದ್ಘಾಟನೆ: ಶ್ರೀಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಸ್ಥಾಪಿಸಿರುವ ಸೇಫ್ ಲಾಕರ್ ಸೌಲಭ್ಯವನ್ನು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬಾಂಡ್ ಗಣಪತಿ, ಉಪಾಧ್ಯಕ್ಷ ಹರೀಶ್ ಪೂವಯ್ಯ, ಪ್ಯಾಕ್ಸ್ ಅಧ್ಯಕ್ಷ ಅಜ್ಜಮಾಡ ಟಿ.ಚಂಗಪ್ಪ ಜಂಟಿಯಾಗಿ ಉದ್ಘಾಟಿಸಿದರು
ವೇದಿಕೆಯಲ್ಲಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ, ನಿರ್ದೇಶಕರಾದ ಹೊಟ್ಟೆಂಗಡ ರಮೇಶ್, ಕುಂಞAಗಡ ಅರುಣ್ ಭೀಮಯ್ಯ, ಪಟ್ರಪಂಡ ರಘು ನಾಣಯ್ಯ, ಶ್ರೀಮಂಗಲ ಪ್ಯಾಕ್ಸ್ ಅಧ್ಯಕ್ಷ ಅಜ್ಜಮಾಡ ಟಿ.ಚಂಗಪ್ಪ, ಶ್ರೀಮಂಗಲ ಎಪಿಸಿಎಂಎಸ್ ಅಧ್ಯಕ್ಷ ಅಜ್ಜಮಾಡ ಲವ ಕುಶಾಲಪ್ಪ, ಡಿಸಿಸಿ ಬ್ಯಾಂಕ್ ಸಿ.ಇ.ಓ. ಉಮಾಕಾಂತ್ ಹಾಜರಿದ್ದರು.
ಈ ಸಂದರ್ಭ ಡಿಸಿಸಿ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕಿ ಎ.ಎಸ್.ಪಾರ್ವತಿ, ಎ.ಜಿ.ಎಂ. ನಂಜಪ್ಪ ಪಿ.ಎಸ್, ಟಿ.ಶೆಟ್ಟಿಗೇರಿ ಡಿಸಿಸಿ ಬ್ಯಾಂಕ್ ಶಾಖಾ ವ್ಯವಸ್ಥಾಪಕಿ ಎ.ಬಿ. ದಮಯಂತಿ, ಶ್ರೀಮಂಗಲ ಪ್ಯಾಕ್ಸ್ ಉಪಾಧ್ಯಕ್ಷ ಅಯ್ಯಮಾಡ ಉದಯ ಮತ್ತಿತರರು ಹಾಜರಿದ್ದರು.