ಮಡಿಕೇರಿ, ಅ. ೨೩: ಡಾರ್ಜಿಲಿಂಗ್ ಗೂರ್ಖಾಲ್ಯಾಂಡ್ ಮತ್ತು ಬೋಡೋಲ್ಯಾಂಡ್ ಮಾದರಿಯಲ್ಲಿ ಸಂವಿಧಾನದ ಆರ್ಟಿಕಲ್ ೨೪೪ ಆರ್/ಡಬ್ಲ್ಯೂ ೬ನೇ ಮತ್ತು ೮ನೇ ಶೆಡ್ಯೂಲ್ ಅಡಿಯಲ್ಲಿ ಕೊಡವ ಲ್ಯಾಂಡ್ ಜಿಯೋ-ರಾಜಕೀಯ ಸ್ವಾಯತ್ತತೆ ನೀಡಬೇಕೆಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ಒತ್ತಾಯಿಸಿದ್ದಾರೆ.

ಕೊಡವ ಲ್ಯಾಂಡ್‌ಗಾಗಿ ಒತ್ತಾಯಿಸಿ ಸಿಎನ್‌ಸಿ ವತಿಯಿಂದ ಬಿಟ್ಟಂಗಾಲ ಜಂಕ್ಷನ್ ಬಳಿಯಿಂದ ಪಾದಯಾತ್ರೆ ನಡೆಯಿತು. ನಂತರ ಪಟ್ಟಿಬಾಣೆ ಮಂದ್ ಪೆರವನಾಡ್‌ನಲ್ಲಿ ಕೊಡವ ಜಾಗೃತಿ ಸಭೆ ನಡೆಸಿದ ನಾಚಪ್ಪ ಅವರು, ಕೊಡವರ ಸಾಂವಿಧಾನಿಕ ಭದ್ರತೆಗಾಗಿ ೯ ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊAಡು ಜಿಲ್ಲೆಯಾದ್ಯಂತ ಪಾದಯಾತ್ರೆ ನಡೆಸುತ್ತಿದ್ದು, ಸರ್ಕಾರದ ಗಮನ ಸೆಳೆಯಲಾಗುತ್ತಿದೆ ಎಂದರು.

ಕೊಡವಲ್ಯಾAಡ್ ಭೂ-ರಾಜಕೀಯ ಸ್ವಾಯತ್ತತೆ ನೀಡಬೇಕು ಎನ್ನುವುದು ಮುಖ್ಯ ಬೇಡಿಕೆಯಾಗಿದ್ದು, ಖ್ಯಾತ ಅರ್ಥಶಾಸ್ತçಜ್ಞ ಹಾಗೂ ಕೇಂದ್ರದ ಮಾಜಿ ಸಚಿವ ಡಾ.ಸುಬ್ರಮಣಿಯನ್ ಸ್ವಾಮಿ ಅವರು ಹೈಕೋರ್ಟ್ನಲ್ಲಿ ಈ ಕುರಿತು ಅರ್ಜಿ ಸಲ್ಲಿಸಿ ನಮ್ಮ ಪರವಾಗಿ ಕಾನೂನು ಹೋರಾಟ ನಡೆಸುತ್ತಿದ್ದಾರೆ. ಹಿರಿಯರಾದ ಸ್ವಾಮಿ ಅವರು ನಮಗೆ ಸ್ಫೂರ್ತಿಯಾಗಿದ್ದು, ಅವರಿಂದ ಪ್ರೇರಣೆಗೊಂಡು ಅವರ ಜನ್ಮದಿನದಿಂದ ಪಾದಯಾತ್ರೆಯನ್ನು ನಡೆಸುತ್ತಿದ್ದೇವೆ ಎಂದು ತಿಳಿಸಿದರು.

ಪೆರವನಾಡಿನ ಹಿರಿಯರಾದ ಮಾಚೇಟಿರ ಚೋಟು ಕಾವೇರಪ್ಪ, ಕಾಳೆಂಗಡ ರಮೇಶ್ ಕಾರ್ಯಪ್ಪ, ಚೇಂದAಡ ವಸಂತ್, ಮಾಚೇಟಿರ ರಮೇಶ್, ಮಾಚೇಟಿರ ಸುನಿಲ್, ಚೇಂದAಡ ಗೌರಿ ವಸಂತ್, ಚೇಂದAಡ ಮೀನಾ ಸನ್ನಿ, ಚೇಂದAಡ ಪೊನ್ನಮ್ಮ ಕಾವೇರಪ್ಪ, ಮಾಚೇಟಿರ ಲತಾ ಕಾವೇರಪ್ಪ, ಮಾಚೇಟಿರ ಚೋಂದಮ್ಮ, ಮಾಚೇಟಿರ ದೇವಕಿ ಅಪ್ಪಯ್ಯ, ಮಾಚೇಟಿರ ರುಕ್ಮಿಣಿ, ಮಾಚೇಟಿರ ನಿರ್ಮಲಾ ಕಾವೇರಪ್ಪ, ಗುಡ್ಡಂಡ ಸ್ವರ್ಣ ಪೂಣಚ್ಚ, ಗುಡ್ಡಂಡ ಪೊನ್ನು ಉತ್ತಪ್ಪ, ಗುಡ್ಡಂಡ ಪಟ್ಟು ನಾಣಯ್ಯ, ಪುಚ್ಚಿಮಂಡ ಪಾರ್ವತಿ ಮುತ್ತಪ್ಪ ಸೇರಿದಂತೆ ಬೆಂಬಲಿಗರು ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಕೋವಿಯೊಂದಿಗೆ ಪಾದಯಾತ್ರೆ ಹಾಗೂ ಜಾಗೃತಿ ಸಭೆಯಲ್ಲಿ ಪಾಲ್ಗೊಂಡರು.