ನಾಪೋಕ್ಲು, ಅ. ೨೨: ದೇಶದ ಗೌರವ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಎತ್ತಿ ಹಿಡಿಯಲು ರಾಷ್ಟಿçÃಯ ಸ್ವಯಂಸೇವಕ ಸಂಘವು ಬದ್ಧವಾಗಿದೆ ಎಂದು ಸಂಘದ ಜಿಲ್ಲಾ ಪ್ರಮುಖ್ ಮುತ್ತಾರುಮುಡಿಯ ಶ್ಯಾಮ್ ಪ್ರಸಾದ್ ಹೇಳಿದರು.
ನಾಪೋಕ್ಲುವಿನಲ್ಲಿ ವಿಜಯದಶಮಿ ಪ್ರಯುಕ್ತ ರಾಷ್ಟಿçÃಯ ಸ್ವಯಂಸೇವಕ ಸಂಘದ ವತಿಯಿಂದ ಶನಿವಾರ ಆಯೋಜಿಸಲಾಗಿದ್ದ ಪಥಸಂಚಲನದಲ್ಲಿ ಭಾಗವಹಿಸಿ ಮಾತನಾಡಿದ ಅವರು ಪ್ರತಿ ವರ್ಷ ವಿಜಯದಶಮಿಯ ಸಂದರ್ಭದಲ್ಲಿ ರಾಷ್ಟಿçÃಯ ಸ್ವಯಂಸೇವಕ ಸಂಘದ ವತಿಯಿಂದ ಪಥಸಂಚಲನ ವನ್ನು ಆಯೋಜಿಸಲಾಗುತ್ತಿದೆ. ಇದು ಒಂದು ಪದ್ಧತಿಯಾಗಿ ರೂಢಿಸಿಕೊಂಡು ಬರಲಾಗುತ್ತಿದೆ. ದೇಶದ ಸಾಂಸ್ಕೃತಿಕ ಮೌಲ್ಯಗಳನ್ನು ಎತ್ತಿ ಹಿಡಿಯುವ ಪ್ರಧಾನಿಯನ್ನು ದೇಶಕ್ಕೆ ನೀಡಿದ್ದು ಸಂಘದ ಕೊಡುಗೆ ಎಂದರು. ಅದಕ್ಕೆ ಪೂರಕವಾಗಿ ಸಾಮಾಜಿಕ ವ್ಯವಸ್ಥೆಯನ್ನು ರಾಜಕೀಯದಲ್ಲಿ ನಿರ್ಮಾಣ ಮಾಡುವಂತ ಕೆಲಸವನ್ನು ಸಂಘ ಮಾಡಿದೆ. ರಾಮಮಂದಿರ ನಿರ್ಮಾಣ, ೩೭೦ ವಿಧಿಯ ರದ್ದು ಸೇರಿದಂತೆ ಹಲವು ಸಾಮಾಜಿಕ ಕಾರ್ಯಗಳಿಗೆ ಸಂಘ ಪ್ರೇರಣೆ ನೀಡಿದೆ ಎಂದ ಶಾಮ್ ಪ್ರಸಾದ್ ನಮ್ಮ ದೇಶದ ಸಾಂಸ್ಕೃತಿಕ ಮೌಲ್ಯವನ್ನು ಎತ್ತಿ ಹಿಡಿಯಲು ನಮ್ಮ ದೇಶದ ಸಂಸ್ಕೃತಿ, ಸಮಾಜಕ್ಕೆ ಅನುಗುಣವಾಗಿ ನಿರಂತರ ನಾಯಕರ ನಿರ್ಮಾಣ ಮಾಡುವಲ್ಲಿ ಸಂಘ ಶ್ರಮಿಸುತ್ತಿದೆ ಎಂದರು. ಈ ಸಂದರ್ಭ ಮಾರುಕಟ್ಟೆಯಿಂದ ಕೆಪಿಎಸ್ ಪ್ರಾಥಮಿಕ ಶಾಲೆಯವರೆಗೆ ಅಲ್ಲಿಂದ ಶ್ರೀ ರಾಮಮಂದಿರದ ಸಮೀಪವಿರುವ ಶ್ರೀ ಗುರು ಪೊನ್ನಪ್ಪ ಸಭಾಂಗಣದವರೆಗೆ ನಾಪೋಕ್ಲು ಪಟ್ಟಣದ ಮುಖ್ಯ ಬೀದಿಯಲ್ಲಿ ಘೋಷ್ ವಾದ್ಯದೊಂದಿಗೆ ಪಥಸಂಚಲನ ನಡೆಯಿತು. ಇದರಲ್ಲಿ ತಾಲೂಕು ಪ್ರಮುಖ್ ಜಾಲಿ ಪೂವಪ್ಪ, ತಾಲೂಕು ವ್ಯವಸ್ಥ ಪ್ರಮುಖ್ ಗೌತಮ್, ಎಂ ಎಂ ನರೇಂದ್ರ ಸೇರಿದಂತೆ ೧೦ ಮಂಡಲಗಳ ನೂರಾರು ಸ್ವಯಂಸೇವಕರು ಪಥಸಂಚಲನದಲ್ಲಿ ಪಾಲ್ಗೊಂಡಿದ್ದರು.