ಕುಶಾಲನಗರ, ಅ. ೨೩: ಮೈಸೂರು ವಿಶ್ವವಿದ್ಯಾಲಯದ ಎಂ.ಎಸ್ಸಿ ಮಾಲಿಕ್ಯುಲರ್ ಬಯಾಲಜಿಯಲ್ಲಿ ಅತ್ಯುನ್ನತ ಅಂಕಗಳನ್ನು ಗಳಿಸಿರುವ ಕೊಡ್ಲಿಪೇಟೆಯ ಬಿ.ಎಸ್. ವೇದಾಂತ್ ಅವರಿಗೆ ವಿಶ್ವವಿದ್ಯಾಲಯದಿಂದ ಚಿನ್ನದ ಪದಕ ದೊರೆತಿದೆ. ಸಾಧಕ ವೇದಾಂತ್ ಕೊಡ್ಲಿಪೇಟೆಯ ಕಿರಿಕೊಡ್ಲಿ ವಿದ್ಯಾಸಂಸ್ಥೆಯಲ್ಲಿ ದೈಹಿಕ ಶಿಕ್ಷಕ ಬಿ.ಕೆ. ಶಿವಶಂಕರ್ ಹಾಗೂ ಶಿಕ್ಷಕಿ ಡಿ.ಎಸ್. ಆಶಾ ಅವರ ಪುತ್ರ.