ಮಡಿಕೇರಿ, ಅ. ೨೩: ಪ್ರಾಥಮಿಕ ಆರೋಗ್ಯ ಕೇಂದ್ರ ಹೆಬ್ಬಾಲೆಯಲ್ಲಿ ಜಿಲ್ಲಾ ಆಸ್ಪತ್ರೆ/ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮಡಿಕೇರಿಯ ತಜ್ಞ ವೈದ್ಯರಿಂದ ಅಪೌಷ್ಟಿಕತೆ ಮಕ್ಕಳ ಆರೋಗ್ಯ ತಪಾಸಣೆ ಶಿಬಿರ ಮತ್ತು ಸಾರ್ವಜನಿಕರ ಆರೋಗ್ಯ ಶಿಬಿರದ ಕಾರ್ಯಕ್ರಮವನ್ನು ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿದ್ದ ಗ್ರಾಮ ಪಂಚಾಯಿತಿ ಹೆಬ್ಬಾಲೆಯ ಅಧ್ಯಕ್ಷರಾದ ಅರುಣ ಕುಮಾರಿ ಮಾತನಾಡಿ, ಎಲ್ಲಾ ಆರೋಗ್ಯ ಸೇವೆಗಳನ್ನು ಪಡೆದುಕೊಳ್ಳಲು ಹಾಗೂ ಆಸ್ಪತ್ರೆಯಲ್ಲಿ ಹೆರಿಗೆಯಾಗಲು, ಮಕ್ಕಳ ಆರೈಕೆ ಮತ್ತು ಗರ್ಭಿಣಿ ಆರೈಕೆ ಸಮಯದಲ್ಲಿ ಪೌಷ್ಟಿಕಾಂಶ ಆಹಾರ ಸೇವನೆ ಮಾಡಲು ತಿಳಿಸಿದರು.

ಮಕ್ಕಳ ತಜ್ಞರಾದ ಡಾ. ಪುರೊಷೊತ್ತಮ ಮಾತನಾಡಿ, ಮಕ್ಕಳ ಲಸಿಕೆ, ನವಜಾತ ಶಿಶುವಿನ ಆರೈಕೆ ಮತ್ತು ಎದೆ ಹಾಲಿನ ಮಹತ್ವದ ಬಗ್ಗೆ ಹಾಗೂ ಗರ್ಭಿಣಿ, ಬಾಣಂತಿಯರ ಆರೈಕೆ ಬಗ್ಗೆ ಮಾಹಿತಿ ನೀಡಿದರು. ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಾದ ಚಂದ್ರಶೇಖರ್ ಮಾತನಾಡಿ, ಗ್ರಾಮದಲ್ಲಿ ಕಸವನ್ನು ಎಲ್ಲೆಂದರಲ್ಲಿ ಬಿಸಾಡದೆ ಕಸ ವಿಲೇವಾರಿ ವಾಹನದಲ್ಲಿ ಹಾಕಲು ಮತ್ತು ಶುಚಿತ್ವವನ್ನು ಕಾಪಾಡಲು ತಿಳಿಸಿದರು.

ಕಾರ್ಯಕ್ರಮದಲ್ಲಿ ಗ್ರಾ.ಪಂ. ಸದಸ್ಯ ಚಂದ್ರಶೇಖರ್, ಸಮುದಾಯ ಆರೋಗ್ಯ ತಜ್ಞ ಡಾ. ಮಹೇಶ್, ಡಾ. ಸ್ತಿçÃರೋಗ ತಜ್ಞರು ಶಿಲ್ಪಾ, ಡಾ. ಭರತ್, ಆಯುಷ್ ವೈದ್ಯರು, ಮೋಹಿನಿ ಹಿ. ಪ್ರಾ. ಸುರಕ್ಷಾಧಿಕಾರಿ, ಸಂಜಯ್ ಕುಮಾರ್ ಆರೋಗ್ಯ ನಿರೀಕ್ಷಣಾಧಿಕಾರಿ, ಆರ್‌ಬಿಎಸ್‌ಕೆ ತಂಡದವರು, ಸಮುದಾಯ ಆರೋಗ್ಯ ಅಧಿಕಾರಿಗಳು, ಆರೋಗ್ಯ ಸಿಬ್ಬಂದಿಗಳು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಮತ್ತು ಮಕ್ಕಳು, ಗರ್ಭಿಣಿಯರು, ಸಾರ್ವಜನಿಕರು ಹಾಜರಿದ್ದರು.

ಆರೋಗ್ಯ ನಿರೀಕ್ಷಣಾಧಿಕಾರಿ ಯಾದ ಸಂಜಯ್ ಕುಮಾರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು, ಅಂಗನವಾಡಿ ಕಾರ್ಯಕರ್ತೆ ಸುಧಾ ವಂದಿಸಿದರು.