ಮಡಿಕೇರಿ, ಅ. ೨೧: ನಗರದ ಶ್ರೀ ಕೋಟೆ ಮಹಾಗಣಪತಿ ದೇವಾಲಯ ದಸರಾ ಮಂಟಪ ಸಮಿತಿಯು ಈ ಬಾರಿ ೪೭ನೇ ವರ್ಷದ ಉತ್ಸವ ಆಚರಣೆಗೆ ಸಜ್ಜಾಗುತ್ತಿದೆ ಎಂದು ಸಮಿತಿಯ ಅಧ್ಯಕ್ಷ ಹೆಚ್.ಪಿ. ಲೋಕೇಶ್ ತಿಳಿಸಿದ್ದಾರೆ.
ಎರಡು ಟ್ರಾö್ಯಕ್ಟರ್ಗಳನ್ನು ಬಳಸಲಾಗುತ್ತಿದ್ದು, ಮಹಾಗಣಪತಿಯಿಂದ ಶತಮಹಿಷಿಯ ಸಂಹಾರ ಕಥಾ ಸಾರಾಂಶವನ್ನು ಮಂಟಪದಲ್ಲಿ ಅಳವಡಿಸಲಾಗುತ್ತಿದೆ. ಮಡಿಕೇರಿ ಪೂಜಾ ಲೈಟಿಂಗ್ಸ್ನ ನಜೀರ್ ಲೈಟಿಂಗ್ ಬೋರ್ಡ್ ಅಳವಡಿಸುತ್ತಿದ್ದು, ಸ್ಟುಡಿಯೋ ಸೆಟ್ಟಿಂಗ್ಸ್ ಹಾಗೂ ಧ್ವನಿವರ್ಧಕವನ್ನು ಮಡಿಕೇರಿ ಫ್ಯೂಚರ್ ಈವೆಂಟ್ನ ಲೋಕೇಶ್ ಒದಗಿಸಲಿದ್ದಾರೆ. ೩೦ ಕಲಾಕೃತಿಗಳನ್ನು ಬಳಸಲಾಗುತ್ತಿದ್ದು, ಹುದುಬೂರಿನ ಮಹದೇವಪ್ಪ ಅಂಡ್ ಸನ್ಸ್ ಕಲಾಕೃತಿಗಳನ್ನು ತಯಾರಿಸಲಿದ್ದಾರೆ. ಪ್ಲಾಟ್ಫಾರಂ ವ್ಯವಸ್ಥೆ, ಕಲಾಕೃತಿಗಳಿಗೆ ಚಲನವಲನವನ್ನು ಮಡಿಕೇರಿಯ ಬಿ.ಎನ್. ಕ್ರಿಯೇಷನ್ಸ್ನ ಮೋಹನ್ (ಕುಟ್ಟಿ) ಹಾಗೂ ಪುನೀತ್ ತಂಡ ನೀಡಲಿದೆ. ಟ್ರಾö್ಯಕ್ಟರ್ ಸೆಟ್ಟಿಂಗ್ಸ್ನ್ನು ಗಣೇಶ್ ಹಾಗೂ ಸೋಮಶೇಖರ್ ತಂಡ ಮಾಡಲಿದ್ದು, ಫೈರ್ ಎಫೆಕ್ಟ್ನ್ನು ಟೀಂ೯೯ ಮಡಿಕೇರಿ ರೆಟ್ರೊ ಟ್ರೆöÊಯಂಗ್ ಮತ್ತು ಅಶ್ರಫ್ (ಅಚ್ಚು), ಆಸಿಫ್ ಹಾಗೂ ಸವದ್ ನೀಡಲಿದ್ದಾರೆ.
ಕಲಾಕೃತಿಗಳಿಗೆ ಸ್ಪೆಷಲ್ ಎಫೆಕ್ಟ್ನ್ನು ಪೂಜಾ ಲೈಟಿಂಗ್ ರಘು ತಂಡ ಒದಗಿಸಲಿದೆ. ಧ್ವನಿಮುದ್ರಣವನ್ನು ವಿನಾಯಕ, ಸೂರಜ್, ಕೆ.ಎನ್. ಸಂತೋಷ್ ಮತ್ತು ಫ್ಲೆöÊಯಿಂಗ್ ವರ್ಡ್ಸ್ ತಂಡ ಮಾಡಲಿದೆ. ಮುಂಬೈನಿAದ ಸ್ಪೆಷಲ್ ಎಫೆಕ್ಟ್ನ್ನು ತಯಾರಿಸಲಾಗುತ್ತಿದೆ ಎಂದು ಲೋಕೇಶ್ ಮಾಹಿತಿಯಿತ್ತರು.
ಒಟ್ಟು ೩೧.೩೫ ಲಕ್ಷ ವೆಚ್ಚದಲ್ಲಿ ಮಂಟಪವನ್ನು ಹೊರತರಲಾಗುತ್ತದೆ. ಜನಾಕರ್ಷಣೆಯೊಂದಿಗೆ ಬಹುಮಾನಕ್ಕೂ ಪೈಪೋಟಿ ನೀಡಲಾಗುತ್ತದೆ ಎಂದು ಲೋಕೇಶ್ ತಿಳಿಸಿದ್ದಾರೆ. -ಉಜ್ವಲ್ ರಂಜಿತ್