ಶನಿವಾರಸಂತೆ, ಅ. ೨೨: ಪಟ್ಟಣದ ಸೆಕ್ರೇಡ್ ಹಾರ್ಟ್ ವಿದ್ಯಾಸಂಸ್ಥೆಯ ಪಿಯು ಕಾಲೇಜಿನ ಉಪನ್ಯಾಸಕಿ ರೋಹಿಣಿ ರವಿ ಅವರ ಮನೆಯಲ್ಲಿ ನವರಾತ್ರಿ ಹಬ್ಬದ ಪ್ರಯುಕ್ತ ಸಾಂಪ್ರದಾಯಿಕವಾಗಿ ಗೊಂಬೆ ಕೂರಿಸಿ, ಅಲಂಕ ರಿಸಿ ಪೂಜಿಸಲಾಗುತ್ತಿದೆ. ಪುರಾಣೇತಿಹಾಸ ಘಟನೆಗಳನ್ನು ಹಾಗೂ ಪ್ರಸ್ತುತ ಸಮಾಜದ ಘಟನಾವಳಿಗಳ ದೃಶ್ಯಗಳನ್ನು ಪ್ರತಿಬಿಂಬಿಸುವ ಸುಂದರ ಗೊಂಬೆ ಗಳ ಜೋಡಣೆ ಹಾಗೂ ಸಂಗ್ರಹ ನೋಡುಗರ ಕಣ್ಮನ ತಣಿಸುವಂತಿದೆ.