ಗೋಣಿಕೊಪ್ಪ, ಅ. ೨೨: ಗೋಣಿಕೊಪ್ಪ ದಸರಾದಲ್ಲಿ ತಾ. ೨೧ರಂದು ಗೋಣಿಕೊಪ್ಪಲು ಹಾಗೂ ಪೊನ್ನಂಪೇಟೆ 'ಸೈಕ್ಲೋನ್ ಡ್ಯಾನ್ಸ್ ಇನ್ಸಿ÷್ಟಟ್ಯೂಟ್' ನಡೆಸಿಕೊಟ್ಟ ವೈವಿಧ್ಯಮಯ ನೃತ್ಯ ಕಾರ್ಯಕ್ರಮಗಳು ರಸದೌತಣ ನೀಡಿದವು. ನೃತ್ಯ ನಿರ್ದೇಶಕ ರಮೇಶ್ ನಿರ್ದೇಶನದಲ್ಲಿ ಮೂಡಿಬಂದ ಹನುಮಾನ್, ಹರ ಹರ ಮಹದೇವ್ ನೃತ್ಯ ಪ್ರೇಕ್ಷಕರನ್ನ ರೋಮಾಂಚನಗೊಳಿಸಿತು. ಡ್ಯಾನ್ಸ್ ಮೂಲಕ ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲಾ ಯಿತು. ವಿಶೇಷ ಚೇತನ ಬಾಲಕ ಮಂಜು ನೃತ್ಯಕ್ಕೆ ನೆರೆದಿದ್ದವರು ಜೋರಾದ ಚಪ್ಪಾಳೆಯ ಮೂಲಕ ಪ್ರೋತ್ಸಾಹ ನೀಡಿದರು. ಮೂರು ಗಂಟೆಗಳ ಕಾಲ ನಡೆದ ನೃತ್ಯ ಹಾಗೂ ಹಾಡು ಕೊನೆಯವರೆಗೂ ಪ್ರೇಕ್ಷಕರನ್ನ ರಂಜಿಸುವಲ್ಲಿ ಯಶಸ್ವಿಯಾಯಿತು.

ಇದಕ್ಕೂ ಮುನ್ನ ನಡೆದ ಸ್ಥಳೀಯರ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಲಿದಿನ ಸುಹಾಸ್ ನೇತೃತದ ಪೊನ್ನಂಪೇಟೆ ಮತ್ತು ಗೋಣಿಕೊಪ್ಪ ಸುವೃತ ನಾಟ್ಯಲಯದಿಂದ ಮೂಡಿಬಂದ ಭರತ ನಾಟ್ಯ, ಕಥಕ್, ಗುಜರಾತ್ ದಾಂಡಿಯ ನೃತ್ಯ, ಮಣಿಪುರ ಸ್ಟಿಕ್ ಡ್ಯಾನ್ಸ್, ಉತ್ತರ ಕೇರಳದ ತೆಯ್ಯಂ ನೃತ್ಯ ನೆರೆದಿದ್ದವರನ್ನು ರೋಮಾಂಚನಗೊಳಿಸಿತು.

ಬೆAಗಳೂರಿನ ಭೂಮಿಕ ಮತ್ತು ದೀಪಿಕ ಅವರಿಂದ ಸಂಗೀತ ಕಾರ್ಯ ಕ್ರಮ ಕೇಳುಗರಿಗೆ ಮುದನೀಡಿತು.