ಗೋಣಿಕೊಪ್ಪಲು, ಅ. ೨೩: ಶಿವನ ವೇಷಧಾರಿಯಾಗಿ ಆಗಮಿಸಿದ್ದ ಬಾಲಕ ಮೋದಕ್ ಶಂಖ ಹಾಗೂ ಢಮರುಗವನ್ನು ಅತಿಥಿಗಳಿಗೆ ನೀಡುತ್ತಿದ್ದಂತೆಯೇ ಶಂಖನಾದ ಮೊಳಗಿತು. ಇಂತಹ ಅಪರೂಪದ ಕ್ಷಣಕ್ಕೆ ಕವಿಗಳು ಸಾಕ್ಷಿಯಾದರು.
ಗೋಣಿಕೊಪ್ಪಲುವಿನ ಶ್ರೀ ಕಾವೇರಿ ದಸರಾ ಸಮಿತಿಯ ಆಶ್ರಯದಲ್ಲಿ ಕಾವೇರಿ ಕಲಾ ವೇದಿಕೆಯಲ್ಲಿ ರಾಜ್ಯಮಟ್ಟದ ಬಹುಭಾಷಾ ಕವಿಗೋಷ್ಠಿ ನಡೆಯಿತು. ಮೂಲಕ ಕವನಗಳ ಮೂಲಕ ತಮ್ಮ ಭಾವನೆಗಳಿಗೆ ಕವಿಗಳು ಜೀವ ತುಂಬಿದರು. ಕವನ ವಾಚಿಸಿದ ಪ್ರತಿಯೋರ್ವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಕನ್ನಡ, ಇಂಗ್ಲಿಷ್, ಹಿಂದಿ, ಕುಂಬಾರ, ಯರವ, ಕೊಡವ, ಅರೆಭಾಷೆಯ ಕವನ ವಾಚನ ನಡೆಯಿತು. ರಾಜ್ಯದ ೫೬ ಕವಿಗಳು ಭಾಗವಹಿಸಿದ್ದರು.
ದಸರಾ ಕವಿಗೋಷ್ಠಿಯ ಸಂಚಾಲಕ ಜಗದೀಶ್ ಜೋಡುಬೀಟಿ ಪ್ರಾಸ್ತಾವಿಕ ಮಾತನಾಡಿ, ಕವಿಗಳನ್ನು ಉತ್ತಮವಾಗಿ ನಡೆಸಿಕೊಳ್ಳಬೇಕು, ನೆಪಮಾತ್ರದ ಕಾರ್ಯಕ್ರಮ ಆಗಬಾರದು, ರಾಜರು ಕವಿಗಳಿಗೆ ವಿಶೇಷ ಗೌರವ ನೀಡುವ ಸಂಪ್ರದಾಯವಿತ್ತು.
ಕವಿಗೋಷ್ಠಿಗೆ ೧೨೩ ಕವನಗಳು ಬಂದಿದ್ದವು. ಅದರಲ್ಲಿ ೬೦ ಕವನಗಳನ್ನು ಆಯ್ಕೆ ಮಾಡಲಾಯಿತು ಎಂದರು. ಮುಖ್ಯ ಅತಿಥಿಗಳಾಗಿದ್ದ ಚಿಕ್ಕಅಳುವಾರ ಕೊಡಗು ವಿಶ್ವ ವಿದ್ಯಾನಿಲಯದ ಕನ್ನಡ ಉಪನ್ಯಾಸಕ ರಾದ ಡಾ.ಜಮೀರ್ ಅಹಮದ್ ಮಾತನಾಡಿ, ಪ್ರಸ್ತುತ ಸನ್ನಿವೇಶದಲ್ಲಿ ಕವಿಗಳ ಪಾಲ್ಗೊಳ್ಳುವಿಕೆಯ
೩ಐದನೇ ಪುಟಕ್ಕೆ
(ಮೊದಲ ಪುಟದಿಂದ) ಅಗತ್ಯತೆ ಬಗ್ಗೆ ತಿಳಿಸಿದರು. ಕವಯತ್ರಿ, ಅನುವಾದಕಿ ಕುಶಾಲನಗರದ ಸುನೀತಾ ಆಶಯ ನುಡಿಯನ್ನಾಡಿ ದರು. ವೇದಿಕೆಯಲ್ಲಿ ಕಾವೇರಿ ದಸರಾ ಸಮಿತಿಯ ಅಧ್ಯಕ್ಷರಾದ ಪ್ರಮೋದ್ ಗಣಪತಿ, ಗ್ರಾ.ಪಂ.ಅಧ್ಯಕ್ಷರಾದ ಸೌಮ್ಯ ಬಾಲು ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
ಚಂದನ ಮಂಜುನಾಥ ಸ್ವಾಗತಿಸಿ, ಶೀಲಾ ಬೋಪಣ್ಣ ಹಾಗೂ ಎಂ.ಎA. ಚನ್ನನಾಯಕ್ ನಿರೂಪಿಸಿ, ವಾಮನ ವಂದಿಸಿದರು. ಕಾರ್ಯಕ್ರಮದಲ್ಲಿ ಕಾವೇರಿ ದಸರಾ ಸಮಿತಿಯ ಪದಾಧಿಕಾರಿಗಳಾದ ದ್ಯಾನ್ ಸುಬ್ಬಯ್ಯ, ಕಂದಾ ದೇವಯ್ಯ, ಮತ್ತಿತರರು ಹಾಜರಿದ್ದರು.
- ಹೆಚ್.ಕೆ.ಜಗದೀಶ್
ಕವಿಗಳ ಕವನ
ರಜಿತ ಕಾರ್ಯಪ್ಪ ಅವರ ಮುಖವಾಡ, ಹರೀಶ್ ಸರಳಾಯ ಅವರ ಶಾಶ್ವತವಲ್ಲ, ಡಿ.ಹೆಚ್. ರಜತ್ ರಾಜ್ ಅವರ ನಮ್ಮ ರಸ್ತೆಗಳು, ಪಿ.ಎಸ್. ವೈಲೇಶ್ ಅವರ ಇದೆಂತ ಕಾಲ, ಮಾಲಾಮೂರ್ತಿ ಅವರ ಈಗೊಂದು ಮನದೋದು, ಹೇಮಂತ್ ಪಾರೇರಾ ಅವರ ವಸುಂದರೆಯ ಮೆರಗು, ಚಾಲ್ಸ್ ಡಿಸೋಜ ಅವರ ನಗಬೇಕು, ಎಂ.ಪಿ. ಪುಷ್ಪಲತಾ ಶಿವಪ್ಪ ಅವರ ರೋಧಿಸುವ ವೃಕ್ಷದ ಸಾರ್ಥಕತೆ, ಹೇಮಲತಾ ಪೂರ್ಣಪ್ರಕಾಶ್ ಅವರ ನಾರಿ, ಸತೀಶ್ ಕುಮಾರ್ ಅವರ ಹೋಗಿ ಬರುವೆ ಪ್ರಾಣಿಗಳ ಜೊತೆ, ವಿ.ಟಿ. ಶ್ರೀನಿವಾಸ್ ಅವರ ನಾವೆತ್ತ ಸಾಗುತ್ತಿದ್ದೇವೆ, ಚೊಟ್ಟೆಯಂಡ ಮಾಡ ಲಲಿತ ಕಾರ್ಯಪ್ಪ ಅವರ ಅರಳಿದ ಕವಿತೆ, ಕೆ.ಎನ್.ಕವಿತ ಅವರ ನನ್ನ ಗ್ರಾಮ, ಪೂರ್ಣಿಮ ಬೆಳ್ಯಪ್ಪ ಅವರ ಪರ್ಯಂತ, ಹೆಚ್.ಜಿ.ಯಶೋಧ ಅವರ ನವರಾತ್ರಿ ವೈಭವ, ಆಂಡಮಾಡ ಚರಿತ್ರ ಪವನ್ ಅವರ ನವರಾತ್ರಿ, ಪಿ.ಪಿ. ಮಂಜುನಾಥ್ ಅವರ ವಿರಹಿ, ಪುತ್ತಾಮನೆ ವಿದ್ಯಾ ಜಗದೀಶ್ ಅವರ ಮೊಬೈಲ್, ಬಿ.ಬಿ. ಕಿಶೋರ್ ಕುಮಾರ್ ಅವರ ಮೂಢ ಮನಗಳು, ಕೆ.ಟಿ. ವಾತ್ಸಲ್ಯ ಅವರ ಅಮ್ಮನ ನೆನಪು, ಮಂಜು ಗೋಪಿನಾಥನ್ ಅವರ ನಿವೇಧನೆ, ಕೆ.ಎಸ್. ನಳಿನಿ ಸತ್ಯನಾರಾಯಣ ಅವರ ಬದುಕು, ಎನ್.ಎಂ. ಗೀತಾಂಜಲಿ ಅವರ ಮಾತುಗಳ ಮೈಲಿಗೆಯಲ್ಲಿ, ಕೆ.ಎಲ್. ರುಕ್ಮಿಣಿ ಗಂಗಾಧರನ್ ಅವರ ಅಪ್ಪನ ಮನೆಯಂಗಳದಲ್ಲಿ, ಟಿ.ವಿ. ಭಾಗ್ಯವತಿ ಅಣ್ಣಪ್ಪ ಅವರ ಅತ್ತೆ ಸೊಸೆ ಬಾಂಧವ್ಯ, ಬಿ.ಡಿ. ಶ್ರೀನಿಧಿ ಅವರ ಕಾವೇರಮ್ಮ ಹರಸು, ಮೌಲತ್ ಕಂಡಿ ಯೂಸುಫ್ ಅವರ ಅಮ್ಮ, ಅಣ್ಣಾಳಮಾಡ ಕಾಂತಿ ಚೋಂದಮ್ಮ ಅವರ ಅವನು ಅವಳು, ಕೆ.ಟಿ. ಪುಣ್ಯ ಅವರ ಗೆಳೆತನ, ಡಿ.ಪಿ. ದೃತಿ ಅವರ ತಾಯಿ, ಎ.ಜೆ. ಚಿಂತನ್ ಅವರ ಕೊಡಗು, ಭವ್ಯ ಮುಕ್ಕಾಟಿ ಅವರ ಸ್ಪೂರ್ತಿಯ ಮೂರ್ತಿ ಅಪ್ಪ, ಎ.ವಿ. ಮಂಜುನಾಥ್ ಅವರ ಚುಟುಕು, ಪಿ.ಹೆಚ್. ಅಲೀಮಾ ಅವರ ಜಲಕಾವ್ಯ, ಬಿ.ವಿ. ಶಿಲ್ಪಾ ಅವರ ಹೆಸರು, ಕುಕ್ಕನೂರು ರೇಷ್ಮಾ ಮನೋಜ್ ಅವರ ನಿನ್ನ ಬಸಿರಲ್ಲಿ ಬೆಚ್ಚಗಿರುವೆನು, ಪುಷ್ಪಾ ಪ್ರಸಾದ್ ಅವರ ಖಾಲಿ ಪುಟದ ಹಿಂದಿನ ಪುಟ, ಎಂ.ಬಿ.ಜಯಲಕ್ಷಿö್ಮÃ ಅವರ ಬದುಕು ನಾವಂದುಕೊAಡAತಿಲ್ಲ. ಯೋಗೇಶ್ ಪಡಂತಾಯ ಅವರ ಆಟಿ ಮಾಸದ ಕೂಟ, ಚಂಗಚAಡ ರಶ್ಮಿ ಅವರ ಮಣ್ಣಿನ ಬಟ್ಟಲು, ಕೊಡವ ಭಾಷೆ ಕವನಗಳಾದ ಶ್ರೀವಾಣಿ ರಾಘವೇಂದ್ರ ಅವರ ಚಾಯ್ ಕರ್ತಿ ಇವ, ಅಯ್ಯ ನೆರವಂಡ ಪ್ರಿತುನ್ ಪೊನ್ನಣ್ಣ ಅವರ ಕವನ ಓ ನಾಡ ಕೊದಿರ ಮುತ್ತ್, ಮೂಕಳೇರ ಟೈನಿ ಪೂಣಚ್ಚ ಅವರ ತುದಿಕನ, ಎಂ.ಕೆ. ನಳಿನಾಕ್ಷಿ ಅವರ ಪೊಣ್ಣ್, ಪಂದ್ಯಡ ರೇಣುಕಾ ಸೋಮಯ್ಯ ಅವರ ಪಟ್ಟಾಳ ಕಾರ, ಅರೆಭಾಷೆ ಕವನ ಬಿ.ಪಿ. ಶೃತಿ ಅವರ ಕೂಸ್ನ ಸಾಲೆ, ಕೆ.ಎ. ಜಶ್ಮಿ ಅವರ ಜೀವನದ ದಾರಿ, ಸುನಿತಾ ವಿಶ್ವನಾಥ್ ಅವರ ಕುಂಬಾರ ಭಾಷೆಯ ಕವನ ಜನ್ಮ, ಎಸ್.ಎಂ. ರಜನಿ ಅವರ ಯರವ ಕವನ ಎನ್ನ ಚಾಚಾಮೆ, ಪಿ.ಯು.ಸುಂದರ್ ಅವರ ನಮ್ಮ ಭಾಗ್ಯವಂತೆಯರ್ ತುಳು ಕವನ, ಉಳುವಂಗಡ ಕಾವೇರಿ ಉದಯ ಅವರ ಹಿಂದಿ ಭಾಷೆಯ ಕವನ ಚಮಕ್ತಿ ಆಂಕೆ, ಎಂ.ಪ್ರಜ್ಞಾ ಅವರ ಸಂಘರ್ಷ ಕ ಸಫರ್, ಚಂಗಚAಡ ತ್ವಿಶ ತಂಗಮ್ಮ ಮತ್ತು ಕೆ.ಆರ್. ಮನ, ಎಸ್.ಪಿ. ಜಶ್ಮಿತಾ ಅವರ ಇಂಗ್ಲಿಷ್ ಕವನಗಳು ವಾಚಿಸಲ್ಪಟ್ಟವು.