ನಾಲ್ವರು ವಿದ್ಯಾರ್ಥಿಗಳು ಗೋದಾವರಿ ನದಿಯಲ್ಲಿ ಮುಳುಗಿ ಸಾವು
ಕಾಕಿನಾಡ, ಅ. ೨೨: ಕಾಕಿನಾಡ ಜಿಲ್ಲೆಯ ಗೌತಮಿ-ಗೋದಾವರಿ ನದಿಯಲ್ಲಿ ಸ್ನಾನ ಮಾಡಲು ತೆರಳಿದ್ದ ನಾಲ್ವರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿದ್ದು, ಮೃತದೇಹಗಳನ್ನು ಭಾನುವಾರ ಹೊರತೆಗೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶನಿವಾರ ಸಂಜೆ ೪.೩೦ರ ಸುಮಾರಿಗೆ ತಲ್ಲರೇವು ಮಂಡಲದ ಪಿಳ್ಳಂಕ ಗ್ರಾಮದಲ್ಲಿ ಏಳು ವಿದ್ಯಾರ್ಥಿಗಳು ಈಜುವ ಉದ್ದೇಶದಿಂದ ಗೋದಾವರಿ ನದಿಗೆ ಇಳಿದಿದ್ದಾರೆ. ಅವರಲ್ಲಿ ನಾಲ್ವರು ನೀರಿನಲ್ಲಿ ಮುಳುಗಿದ್ದು, ಭಾನುವಾರ ಬೆಳಗ್ಗೆ ಅವರ ಮೃತ ದೇಹಗಳು ಪತ್ತೆ ಮಾಡಲಾಗಿದೆ. ಉಳಿದ ಮೂವರು ಸುರಕ್ಷಿತವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರು ಪದವಿಪೂರ್ವ ಕೋರ್ಸ್ಗಳನ್ನು ಓದುತ್ತಿದ್ದರು ಮತ್ತು ಎಲ್ಲರೂ ೨೦ ವರ್ಷದವರು. ಪಶ್ಚಿಮ ಗೋದಾವರಿ ಜಿಲ್ಲೆಯ ತನುಕು ಪಟ್ಟಣಕ್ಕೆ ಸೇರಿದ ವಿದ್ಯಾರ್ಥಿಗಳು ಪ್ರವಾಸಕ್ಕೆಂದು ಬಂದಿದ್ದರು. ಅವರು ಮೊದಲು ಹತ್ತಿರದ ಯಾನಂಗೆ ಹೋಗಿ ನಂತರ ಪಿಳ್ಳಂಕಕ್ಕೆ ಬಂದಿದ್ದರು. ಪೊಲೀಸರ ಪ್ರಕಾರ, ನಾಲ್ವರು ವಿದ್ಯಾರ್ಥಿಗಳು ಈಜುತ್ತಿದ್ದಾಗ ಬಲವಾದ ಪ್ರವಾಹಕ್ಕೆ ಸಿಲುಕಿದ್ದಾರೆ ಮತ್ತು ಹಲವಾರು ಗಂಟೆಗಳ ನಂತರ ಅವರ ಮೃತದೇಹಗಳನ್ನು ಹೊರ ತೆಗೆಯಲಾಯಿತು. ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್ಡಿಆರ್ಎಫ್), ಅಗ್ನಿಶಾಮಕ, ಕಂದಾಯ ಮತ್ತು ಪೊಲೀಸ್ ಇಲಾಖೆಗಳು ಮತ್ತು ಮೀನುಗಾರರು ಶೋಧ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಪೊಲೀಸರು ಸಿಆರ್ಪಿಸಿ ಸೆಕ್ಷನ್ ೧೭೪ ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಕಲ್ಲು ಎತ್ತಿ ಹಾಕಿ ೮ನೇ ತರಗತಿ ಹುಡುಗನ ಬರ್ಬರ ಹತ್ಯೆ!
ಚಿಕ್ಕೋಡಿ, ಅ. ೨೨: ಗರ್ಲ್ ಫ್ರೆಂಡ್ ಫೋಟೋ ನೋಡಿ ಅಶ್ಲೀಲವಾಗಿ ಮಾತನಾಡಿದ ೮ನೇ ತರಗತಿ ಹುಡುಗನನ್ನು ಸ್ನೇಹಿತನೊಬ್ಬ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆಯೊಂದು ನಿಪ್ಪಾಣಿಯ ಬಾಳುಮಾಮ ನಗರದಲ್ಲಿ ನಡೆದಿದೆ. ನಿಪ್ಪಾಣಿಯ ಹಳೆ ಸಂಭಾಜಿ ನಗರದ ಸಕೀಬ್ ಸಮೀರ್ ಪಠಾಣ್ (೧೫) ಮೃತ ಬಾಲಕ, ಬಂಧಿತ ಝಬೀನ್ (೨೦) ಎಂದು ಗುರುತಿಸಲಾಗಿದೆ. ಮೃತ ಬಾಲಕ ಹಾಗೂ ಝಬೀನ್ ಇಬ್ಬರೂ ಸ್ನೇಹಿತರಾಗಿದ್ದರು. ಝಬೀನ್ ತನ್ನ ಸೆಲ್ ಫೋನ್ನಲ್ಲಿ ಸಮೀರ್ಗೆ ತನ್ನ ಗರ್ಲ್ಫ್ರೆಂಡ್ ಫೋಟೋ ತೋರಿಸಿದ್ದಾನೆ. ಈ ವೇಳೆ ಸಮೀರ್ ಅಶ್ಲೀಲವಾಗಿ ಮಾತನಾಡಿದ್ದಾನೆ. ಇದರಿಂದ ಕುಪಿತಗೊಂಡಿರುವ ಝಬೀನ್, ಸಮೀರ್ ಜೊತೆಗೆ ಜಗಳವಾಡಿದ್ದಾನೆ. ಈ ಜಗಳ ವಿಕೋಪಕ್ಕೆ ತಿರುಗಿದ್ದು, ಸಮೀರ್ ತಲೆಗೆ ಮೇಲೆ ಝಬೀನ್ ಕಲ್ಲು ಎತ್ತಿಹಾಕಿದ್ದಾನೆ. ಇದೀಗ ಯುವಕನನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಕ್ರಿಪ್ಟೋಕರೆನ್ಸಿ ಕಂಪೆನಿ ಹೆಸರಲ್ಲಿ ವಂಚನೆ; ಮೂವರನ್ನು ಬಂಧಿಸಿದ ಸಿಸಿಬಿ
ಬೆಂಗಳೂರು, ಅ. ೨೨: ಜಿಜಿಒ ಹೆಸರಿನ ಕ್ರಿಪ್ಟೋಕರೆನ್ಸಿ ಸಂಸ್ಥೆಯಲ್ಲಿ ಮೋಸದ ಹೂಡಿಕೆ ಯೋಜನೆ ಮೂಲಕ ಸಾರ್ವಜನಿಕರಿಗೆ ವಂಚಿಸಿದ ಆರೋಪದ ಮೇಲೆ ಅಪ್ಪ ಮತ್ತು ಮಗ ಸೇರಿದಂತೆ ಮೂವರನ್ನು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಾದ ಸತೀಶ್, ಅವರ ಪುತ್ರ ಶ್ರೀಕಾಂತ್ ಮತ್ತು ದೀಪಕ್ ಎಂಬುವವರು ಮಲ್ಲೇಶ್ವರಂನ ಸಂಪಿಗೆ ರಸ್ತೆಯಲ್ಲಿ ಜಿಜಿ ಆನ್ಲೈನ್ ಪ್ರೆöÊವೇಟ್ ಲಿಮಿಟೆಡ್ ಎಂಬ ಕಂಪೆನಿಯನ್ನು ನಡೆಸುತ್ತಿದ್ದರು. ಹೆಚ್ಚಿನ ಆದಾಯ ನೀಡುವುದಾಗಿ ಭರವಸೆ ನೀಡಿ ೧,೩೦೦ ಮಂದಿಗೆ ೫-೬ ಕೋಟಿ ರೂಪಾಯಿ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ಸುಳ್ಳು ಭರವಸೆಗಳನ್ನು ನೀಡುವ ಮೂಲಕ ಜಿಜಿಒ ಕಂಪೆನಿಯ ಕ್ರಿಪ್ಟೋಕರೆನ್ಸಿಯಲ್ಲಿ ಹೂಡಿಕೆ ಮಾಡುವಂತೆ ಮಾಡಲಾಗಿದೆ. ಜಿಜಿಒ ಕಂಪೆನಿಯು ಅಂರ್ರಾಷ್ಟಿçÃಯ ಕ್ರಿಪ್ಟೋಕರೆನ್ಸಿ ವಿನಿಮಯ ಕೇಂದ್ರಗಳಲ್ಲಿ ಪಟ್ಟಿಮಾಡಿದರೆ ಬಿಟ್ಕಾಯಿನ್ಗೆ ಹೋಲಿಸಬಹುದಾದ, ಹೆಚ್ಚು ಬೆಲೆಬಾಳುವ ಸಾಮರ್ಥ್ಯವನ್ನು ಹೊಂದಿದೆ. ಇದು ಹೆಚ್ಚಿನ ಆದಾಯ ನೀಡುತ್ತದೆ ಎಂದು ಜನರನ್ನು ಆಕರ್ಷಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮತ್ತೊಂದು ಚುನಾವಣಾ ಟಿಕೆಟ್ ವಂಚನೆ ಪ್ರಕರಣ ಬೆಳಕಿಗೆ
ಬೆಂಗಳೂರು, ಅ. ೨೨: ಹಿಂದೂಪರ ಸಂಘಟನೆಯ ಕಾರ್ಯಕರ್ತೆಯೊಬ್ಬರ ವಿರುದ್ಧದ ಚುನಾವಣಾ ಟಿಕೆಟ್ ವಂಚನೆ ಪ್ರಕರಣ ಹಸಿರಾಗಿರುವಂತೆಯೇ ಇತ್ತ ರಾಜ್ಯದಲ್ಲಿ ಮತ್ತೊಂದು ಚುನಾವಣಾ ಟಿಕೆಟ್ ವಂಚನೆ ಪ್ರಕರಣ ಬೆಳಕಿಗೆ ಬಂದಿದ್ದು, ನಾಲ್ವರ ವಿರುದ್ಧ ಪೊಲೀಸ್ ಎಫ್ಐಆರ್ ದಾಖಲಾಗಿದೆ. ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಕೋಟಿ ಕೋಟಿ ವಂಚನೆ ಮಾಡಿರುವ ಪ್ರಕರಣ ಇದಾಗಿದ್ದು, ಕೊಟ್ಟೂರು ನಿವಾಸಿ, ನಿವೃತ್ತ ಇಂಜಿನಿಯರ್ ನೀಡಿರುವ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಗರಿಬೊಮ್ಮನಹಳ್ಳಿ ಎಸ್ಸಿ ಮೀಸಲು ವಿಧಾನಸಭಾ ಕ್ಷೇತ್ರದ ಟಿಕೆಟ್ ಕೊಡಿಸುವುದಾಗಿ ಶಿವಮೂರ್ತಿ ಎಂಬವರಿಗೆ ನಾಲ್ವರ ತಂಡವು ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಿವಮೂರ್ತಿ, ಪಕ್ಷದ ಚಟುವಟಿಕೆಗಾಗಿ ೬೫ ಲಕ್ಷ ರೂಪಾಯಿಯನ್ನು ಖರ್ಚು ಮಾಡಿಸಲಾಗಿದೆ. ಅಲ್ಲದೆ, ಟಿಕೆಟ್ ಕೊಡಿಸುವುದಾಗಿ ವಂಚಕರು ತಮ್ಮ ಬಳಿ ಒಟ್ಟು ೧.೯೦ ಕೋಟಿ ರೂಪಾಯಿಯನ್ನು ಪಡೆದುಕೊಂಡಿದ್ದಾರೆ. ಹೀಗಾಗಿ ಒಟ್ಟು ೨.೫೫ ಕೋಟಿ ರೂ. ವಂಚನೆ ಮಾಡಲಾಗಿದೆ ಎಂದು ಆರೋಪ ಮಾಡಿದ್ದಾರೆ. ಈ ಪ್ರಕರಣ ಸಂಬAಧ ಅಕ್ಟೋಬರ್ ೧೯ ರಂದು ಶಿವಮೂರ್ತಿ ಅವರು ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅವರು ನೀಡಿದ ದೂರಿನನ್ವಯ ಪೊಲೀಸರು ಎಫ್ಐಆರ್ ದಾಖಲು ಮಾಡಿಕೊಂಡಿದ್ದಾರೆ. ಕೊಟ್ಟೂರಿನ ಕಟಾರಿ ಆಪ್ಟಿಕಲ್ ಮಾಲೀಕ ಮೋಹನ್ ಕಟಾರಿಯಾ, ಬಿಜೆಪಿ ಮಾಜಿ ಮುಖಂಡ, ಹಾಲಿ ಜನಾರ್ದನ ರೆಡ್ಡಿ ಪಕ್ಷದ ವಿಜಯನಗರ ಜಿಲ್ಲಾಧ್ಯಕ್ಷ ರೇವಣಸಿದ್ದಪ್ಪ ಹಾಗೂ ಪುತ್ತೂರು ಮೂಲದ ಶೇಖರ್ ಪುರುಷೋತ್ತಮ್ ನಿರ್ಲಕಟ್ಟೆ (ರಾಜಶೇಖರ್) ಎಂಬವರಿAದ ವಂಚನೆ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇಸ್ರೇಲ್ ವೈಮಾನಿಕ ದಾಳಿ ತೀವ್ರ, ಅಸ್ಥಿಪಂಜರದAತಾದ ಗಾಜಾ
ಟೆಲ್ಅವೀವ್, ಅ. ೨೨: ಹಮಾಸ್ ಉಗ್ರ ದಾಳಿ ಬಳಿಕ ಗಾಜಾಪಟ್ಟಿಯಲ್ಲಿ ಇಸ್ರೇಲ್ ಸೇನೆ ನಡೆಸುತ್ತಿರುವ ವೈಮಾನಿಕ ದಾಳಿ ತೀವ್ರವಾಗಿದ್ದು, ಜನಸಮೂಹ ಮತ್ತು ಬೃಹತ್ ಕಟ್ಟಡಗಳಿಂದ ತುಂಬಿ ತುಳುಕುತ್ತಿದ್ದ ಗಾಜಾ ನಗರ ಇದೀಗ ಅಸ್ಥಿಪಂಜರದAತಾಗಿದೆ. ಇಸ್ರೇಲ್ ದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿರುವ ಕಾರಣ ಗಾಜಾ ನಗರದಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ಬಿಡಿ, ಅನ್ನ, ನೀರೂ ಕೂಡ ಸಿಗದಂತಾಗಿದೆ. ಇಸ್ರೇಲ್ ದಾಳಿಗೆ ಗಾಜಾ ನಗರವು ಬಹುತೇಕವಾಗಿ ನಾಶಗೊಂಡಿದೆ. ಗಾಜಾ ನಗರದಲ್ಲಿ ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದಾರೆ. ಸಾವಿನ ಸಂಖ್ಯೆ ಈಗ ೪,೩೦೦ಕ್ಕೆ ಏರಿಕೆಯಾಗಿದೆ. ಇದಲ್ಲದೆ ನಗರದಲ್ಲಿ ಶೇ. ೪೦ರಷ್ಟು ಮನೆಗಳು ಸಂಪೂರ್ಣವಾಗಿ ಹಾಳಾಗಿವೆ. ಗಾಯಗೊಂಡಿರುವ ಸಾವಿರಾರು ಜನರಿಗೆ ಚಿಕಿತ್ಸೆ ನೀಡಲು ಕೂಡ ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಒಟ್ಟಿನಲ್ಲಿ ಇಸ್ರೇಲ್ ಸತತ ದಾಳಿಗೆ ಹಮಾಸ್ ನಗರವು ಅಸ್ಥಿಪಂಜರದAತಾಗಿದೆ. ಇಸ್ರೇಲ್ ರಾಕೆಟ್ ದಾಳಿಗೆ ವೆಸ್ಟ್ ಬ್ಯಾಂಕ್ನಲ್ಲಿರುವ ಮಸೀದಿಯು ಸಂಪೂರ್ಣವಾಗಿ ಧ್ವಂಸಗೊAಡಿದೆ. ಇಸ್ರೇಲ್ ಮೇಲೆ ಮತ್ತೆ ದಾಳಿ ನಡೆಸಲು ಹಮಾಸ್ ಉಗ್ರರು ಸಂಚು ರೂಪಿಸುತ್ತಿದ್ದಾರೆ. ಅವರು ವೆಸ್ಟ್ ಬ್ಯಾಂಕ್ನ ಜೆನಿನ್ ಎಂಬಲ್ಲಿರುವ ಮಸೀದಿ ಸೇರಿ ಹಲವೆಡೆ ಕುಳಿತು ಪಿತೂರಿ ನಡೆಸುತ್ತಿದ್ದಾರೆ. ಹಾಗಾಗಿ ಮಸೀದಿಯನ್ನು ಧ್ವಂಸಗೊಳಿಸುವ ಜತೆಗೆ ಹಮಾಸ್ ಉಗ್ರರನ್ನು ಹತ್ಯೆಗೈಯಲಾಗಿದೆ” ಎಂದು ಇಸ್ರೇಲ್ ಸೇನೆ ಮಾಹಿತಿ ನೀಡಿದೆ.