ಪೊನ್ನಂಪೇಟೆ, ಅ. ೨೨: ಕಳೆದ ಹಲವು ವರ್ಷಗಳಿಂದ ಕೊಡವ ಜನಾಂಗ ಕಾವೇರಿ ತುಲಾ ಸಂಕ್ರ ಮಣದಂದು ಭಾಗಮಂಡಲದಿAದ ತಲಕಾವೇರಿಯವರೆಗೆ ಬೃಹತ್ ಪಾದಯಾತ್ರೆಯನ್ನು ಹಮ್ಮಿಕೊ ಳ್ಳುತ್ತಿದ್ದು, ನಾನಾ ಕೊಡವ ಸಂಘಟನೆಗಳು ಹಾಗೂ ಕೊಡವ ಸಮಾಜಗಳು ಕಾವೇರಿ ಭಕ್ತರನ್ನು ಒಂದುಗೂಡಿಸಿ ಉಚಿತ ಬಸ್ಸು ಮಾಡಿ ಕರೆದುಕೊಂಡು ಹೋಗುತ್ತಿವೆ. ಇದರಲ್ಲಿ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಹಾಗೂ ಕೊಡವ ರೈಡರ್ಸ್ ಕ್ಲಬ್ ಕೂಡ ಒಂದು. ಕಳೆದ ಐದು ವರ್ಷಗಳಿಂದ ಹೊಸ ಚಿಂತನೆಯ ಮೂಲಕ ಜೊತೆಯಾಗಿ ಹೆಜ್ಜೆ ಇಡುತ್ತಿರುವ ಈ ಎರಡು ಸಂಘಟನೆಗಳು ಪ್ರಸ್ತುತ ವರ್ಷ ಪೊನ್ನಂಪೇಟೆಯಿAದ ಮೂರು ಬಸ್ಸಿಗೂ ಹೆಚ್ಚಿನ ಯುವ ಜನಾಂಗವನ್ನು ಒಂದೆಡೆ ಸೇರಿಸಿ ಅವರ ಪೋಷಕರನ್ನು ಕೂಡ ಜೊತೆಯಲ್ಲಿ ಉಚಿತವಾಗಿ ಕರೆದುಕೊಂಡು ಹೋದದ್ದು ವಿಶೇಷವಾಗಿತ್ತು. ಇದರೊಂದಿಗೆ ಬೆಳ್ಳಿರಥ ಎಲ್ಲರ ಗಮನ ಸೆಳೆಯಿತು.
ಕಾವೇರಿ ಮಾತೆಯ ಪ್ರತಿಮೆಗೆ ಇದೇ ಮೊದಲ ಬಾರಿಗೆ ಕೊಡವತಿ ಪೊಡಿಯ (ಕೊಡವ ಸೀರೆ) ಉಡಿಸಿ ದೂರದೂರಿನಿಂದ ಬೆಳ್ಳಿ ರಥವನ್ನು ತರಿಸಿ ಅದರಲ್ಲಿ ಕಾವೇರಿ ಮಾತೆಯ ಪ್ರತಿಮೆಯನ್ನು ನಿಲ್ಲಿಸಿ ದೀಪಾ ಲಂಕಾರದ ತೇರಿನಲ್ಲಿ ಪೊನ್ನಂ ಪೇಟೆಯಿಂದ ಭಾಗಮಂಡಲದವರೆಗೆ ಮೆರವಣಿಗೆಯಲ್ಲಿ ತೆರಳಿ ನಂತರ ಪಾದಯಾತ್ರೆಯ ಮೂಲಕ ತಲಕಾವೇರಿಯವರೆಗೆ ತೆರಳಿದ್ದು ವಿಶೇಷವಾಗಿತ್ತು. ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಹಾಗೂ ಕೊಡವ ರೈಡರ್ಸ್ ಕ್ಲಬ್ ಅಧ್ಯಕ್ಷ ಅಜ್ಜಿಕುಟ್ಟೀರ ಪ್ರಥ್ವಿ ಸುಬ್ಬಯ್ಯ ನೇತೃತ್ವದಲ್ಲಿ ಹಳ್ಳಿಗಟ್ಟು ಶ್ರೀ ಭದ್ರಕಾಳಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಬೆಳ್ಳಿರಥದ ಮೆರವಣಿಗೆಗೆ ಪೊನ್ನಂಪೇಟೆಯಿAದ ಚಾಲನೆ ನೀಡಲಾಯಿತು. ಮೂರು ಖಾಸಗಿ ಬಸ್ಸು ಸೇರಿದಂತೆ ಹತ್ತಾರು ವಾಹನಗಳಲ್ಲಿ ಭಾಗಮಂಡಲದವರೆಗೆ ತೆರಳಿ ಅಲ್ಲಿಂದ ತಲಕಾವೇರಿಗೆ ಪಾದಯಾತ್ರೆಯಲ್ಲಿ ತೆರಳಿದರು. ದೇವರ ನಾಮ ಹಾಗೂ ಸಾಂಪ್ರದಾಯಿಕ ವಾಲಗಕ್ಕೆ ಹೆಜ್ಜೆ ಹಾಕಿದ ಪಾದಯಾತ್ರಿಗಳಿಗೆ ದಾರಿ ಮಧ್ಯದಲ್ಲಿ ಕಾಫಿ ಹಾಗೂ ಲಘು ಉಪಾಹಾರದ ವ್ಯವಸ್ಥೆ ಮಾಡಲಾ ಗಿತ್ತು. ಪೊನ್ನಂಪೇಟೆಯಿAದ ಹೊರಡಿ ಸಲಾದ ತೇರಿಗೆ ಹಳ್ಳಿಗಟ್ಟು ಭದ್ರಕಾಳಿ ದೇವಸ್ಥಾನದ ಅರ್ಚಕರಾದ ಸುಬ್ರಹ್ಮಣ್ಯ ಕೇಕುನ್ನಾಯ ಪೂಜೆ ನೆರವೇರಿಸಿದರು.
ಗೋಣಿಕೊಪ್ಪದ ಉಮಾಮ ಹೇಶ್ವರಿ ದೇವಸ್ಥಾನ ಸಮೀಪ ಇಗ್ಗು ತಪ್ಪ ಕೊಡವ ಸಂಘ ಆರತಿ ಬೆಳಗುವ ಮೂಲಕ ಬರಮಾಡಿಕೊಂಡಿತು.
ಈ ಸಂದರ್ಭದಲ್ಲಿ ಬಸ್ಸುಗಳ ಮಾಲೀಕರು ಸೇರಿದಂತೆ ಸಾರ್ವ ಜನಿಕರು ಉಪಸ್ಥಿತರಿದ್ದರು.