ವೀರಾಜಪೇಟೆ, ಅ. ೨೧: ಕಾಡಾನೆಗಳ ಹಿಂಡು ಒಂದು ಕಾಫಿ ತೋಟದಲ್ಲಿ ಬೀಡುಬಿಟ್ಟು ದಾಂಧÀಲೆ ನಡೆಸಿದ ಪರಿಣಾಮ ಕೃಷಿ ಫಸಲುಗಳು ನಾಶಗೊಂಡಿರುವ ಘಟನೆ ವೀರಾಜಪೇಟೆ ನಲ್ವತೋಕ್ಲು ಗ್ರಾಮದಲ್ಲಿ ನಡೆದಿದೆ.
ಬಿಳುಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಲ್ವತೋಕ್ಲು ಗ್ರಾಮದ ನಿವಾಸಿ ಮಂಡೇಡ ಆಕಾಶ್ ಗಣಪತಿ ಎಂಬವರ ಕಾಫಿ ತೋಟದಲ್ಲಿ ಕಳೆದ ಎರಡು ದಿನಗಳಿಂದ ಕಾಡಾನೆಗಳು ಬೀಡುಬಿಟ್ಟು ಕಾಫಿ ಗಿಡಗಳು ಮತ್ತು ಬಾಳೆ ಗಿಡಗಳನ್ನು ತುಳಿದು ಧÀ್ವಂಸಗೊಳಿಸಿವೆೆ. ಭತ್ತದ ಗದ್ದೆಗಳಿಗೆ ಲಗ್ಗೆಯಿಟ್ಟು ಪೈರುಗಳನ್ನು ನಾಶಗೊಳಿಸಿವೆ.