ಚೆಯ್ಯಂಡಾಣೆ, ಅ. ೨೧ : ಕೊಡಗು ಜಿಲ್ಲೆಯ ಕಕ್ಕಬ್ಬೆಯ ಆಫ್ ರೋಡ್ ಅಡ್ವೆಂಚರ್ ಕ್ಲಬ್ ವತಿಯಿಂದ ನಡೆದ ಜೀಪ್ ರೈಡ್ನಲ್ಲಿ ೫೦ ಕ್ಕೂ ಹೆಚ್ಚು ಜೀಪ್ಗಳು ಭಾಗವಹಿಸಿದ್ದವು.
ನೀರು, ಕೆಸರು, ಕಾಡು, ಗದ್ದೆ, ತೋಟ, ಬಂಡೆ, ಗುಂಡಿಗಳಲ್ಲೂ ಡ್ರೆöÊವಿಂಗ್ ಮಾಡಿ ಕಾಫಿ ನಾಡು ಕೊಡಗಿನಲ್ಲಿ ನಡೆದ ಆಫ್ ರೋಡ್ ಜೀಪ್ ಫನ್ ರೈಡ್ ನೋಡುಗರ ಮನರಂಜಿಸಿತು. ಕೆಸರು ಮಯವಾದ ರಸ್ತೆಯಲ್ಲಿ ಮುನ್ನುಗುತ್ತಿದ್ದ ಜೀಪ್ಗಳು ಮನಮೋಹಕವಾಗಿತ್ತು. ಸುಂದರ ಹಸಿರು ಸಿರಿಯ ನಡುವೆ ಬೆಟ್ಟ ಗುಡ್ಡಗಳಲ್ಲಿ ಜೀಪ್ ಸವಾರರು ಹಳ್ಳ ಕೊಳ್ಳ ಯಾವುದನ್ನು ಲೆಕ್ಕಿಸದೆ ಜೀಪ್ಗಳನ್ನು ನುಗ್ಗಿಸಿ ಸಾಹಸ ಮೆರೆದರು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಹಾಗೂ ಕೇರಳದ ಹಲವಾರು ಜಿಲ್ಲೆ ಗಳಿಂದ ಆಫ್ ರೋಡ್ ಜೀಪ್ ರೈಡರ್ಸ್ಗಳು ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಒಟ್ಟು ೧೪ ಕಿ.ಮಿ. ಆಫ್ ರೋಡ್ ನಲ್ಲಿ ೫೦ ಕ್ಕೂ ಹೆಚ್ಚು ಜೀಪ್ಗಳು ಪಾಲ್ಗೊಂಡಿದ್ದು ೧೫೦ ಕ್ಕೂ ಹೆಚ್ಚು ಜನರು ಭಾಗವಹಿಸಿದ್ದು ಕಾಫಿ ನಾಡಿಗೆ ಹೆಮ್ಮೆಯಾಗಿದೆ. ನೆಲಜಿ ಇಗ್ಗುತಪ್ಪ ದೇವಸ್ಥಾನ ಮಾರ್ಗವಾಗಿ ತಡಿಯಂಡಮೋಳ್ ಬೆಟ್ಟದ ಕಚ್ಚಾ ರಸ್ತೆಯ ಮೂಲಕ ಮಾರ್ಗ ನಿಗದಿ ಪಡಿಸಲಾಗಿತ್ತು.
ಗೋಣಿಕೊಪ್ಪ ಲೋಪಮುದ್ರ ಆಸ್ಪತ್ರೆಯ ಮುಖ್ಯಸ್ಥ ಅಮೃತ್ ನಾಣಯ್ಯ ಧ್ವಜ ಮೇಲೆತ್ತುವುದರ ಮೂಲಕ ಸ್ಪರ್ಧೆಗೆ ಚಾಲನೆ ನೀಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವೀರಾಜಪೇಟೆ ಡೆಂಟಲ್ ಕಾಲೇಜು ಮುಖ್ಯಸ್ಥರಾದ ಕಂಜಿತAಡ ಸುನಿಲ್ ಮುದ್ದಯ್ಯ ಮಾತನಾಡಿ, ಇಂತಹ ಕಾರ್ಯಕ್ರಮಗಳು ಮನಮೋಹಕ. ಮುಂದಿನ ವರ್ಷ ನಾನು ಕೂಡ ಇದರಲ್ಲಿ ಸ್ಪರ್ಧಿಯಾಗಿ ಭಾಗವಹಿ ಸುವುದಾಗಿ ಹೇಳಿದರು.
ಕಾರ್ಯಕ್ರಮದ ಆಯೋಜ ಕರಾದ ಲವ ಚಿಣ್ಣಪ್ಪ ಬಾಚಮಂಡ ಹಾಗೂ ವಿಕ್ರಂ ಚಂಗಪ್ಪ ಮಾತನಾಡಿ ಕಳೆದ ೨ ವರ್ಷಗಳಿಂದ ಜೀಪ್ ಆಫ್ ರೋಡ್ ಸ್ಪರ್ಧೆ ಆಯೋಜಿಸಿಕೊಂಡು ಬಂದಿದ್ದೇವೆ ರಾಜ್ಯ ಹಾಗೂ ಕೇರಳ ದಿಂದ ಕೂಡ ಇದಕ್ಕೆ ಸ್ಪರ್ಧಿಗಳು ಆಗಮಿಸಿ ಪಾಲ್ಗೊಳ್ಳುತ್ತಿದ್ದಾರೆ ಎಂದರು. ಆಯೋಜಕರಾದ ಕೋಡಿರ ಆಶೀಶ್ ಮುತ್ತಪ್ಪ, ಪೊನ್ನ ಕಲಿಯಂಡ, ಚೇತನ್, ನಿಖಿಲ್ ಉಸ್ತುವಾರಿ ವಹಿಸಿದ್ದರು. -ಅಶ್ರಫ್