ಕುಶಾಲನಗರ, ಅ.೨೦: ಕುಶಾಲನಗರ -ಮಡಿಕೇರಿ ರಸ್ತೆಯ ಕಾವೇರಿ ನಿಸರ್ಗಧಾಮ ಬಳಿ ಬಸ್ ಮತ್ತು ಲಾರಿ ಮುಖಾಮುಖಿ ಡಿಕ್ಕಿಯಾದ ಘಟನೆ ನಡೆದಿದೆ.
ಕುಶಾಲನಗರದಿಂದ ಮಡಿಕೇರಿ ಕಡೆಗೆ ತೆರಳುತ್ತಿದ್ದ ಲಾರಿ (ಏಂ೧೨ಃ೯೫೪೬) ಮತ್ತು ಮಡಿಕೇರಿಯಿಂದ ಕುಶಾಲನಗರಕ್ಕೆ ಬರುತ್ತಿದ್ದ ಖಾಸಗಿ ಬಸ್ (ಏಂ ೪೨ಆ ೦೩೫೮) ಡಿಕ್ಕಿಯಾಗಿದ್ದು ವಾಹನಗಳಿಗೆ ಸಣ್ಣಪುಟ್ಟ ಹಾನಿ ಉಂಟಾಗಿದೆ.
ಈ ಸಂದರ್ಭ ಮಡಿಕೇರಿ ಕುಶಾಲನಗರ ನಡುವೆ ಕೆಲಕಾಲ ವಾಹನ ಸಂಚಾರ ತೊಡಕು ಉಂಟಾಯಿತು. ತಕ್ಷಣ ಸ್ಥಳಕ್ಕೆ ಧಾವಿಸಿದ ಕುಶಾಲನಗರ ಸಂಚಾರಿ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು ವಾಹನಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಬಸ್ ಚಾಲಕ ಶಿವರಾಜ ಎಂಬವರು ದೂರು ನೀಡಿದ್ದು ಲಾರಿ ಚಾಲಕ ಮಹಮ್ಮದ್ ಎಂಬಾತನ ಮೇಲೆ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.