ಸುಂಟಿಕೊಪ್ಪ, ಅ. ೨೦ : ಮನೆಗೆ ಬೆಂಕಿ ತಗುಲಿದ ಕಾರಣ ಮನೆ ಹಾಗೂ ವಸ್ತುಗಳು ಸಂಪೂರ್ಣ ಆಹುತಿಯಾಗಿವೆ.

ಸುಂಟಿಕೊಪ್ಪ ಸಮೀಪದ ಹೋಬಳಿಯ ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿಯ ಶಾಂತಗೇರಿ ತೋಟದ ಲೈನ್ ಮನೆಯಲ್ಲಿ ವಾಸವಾಗಿದ್ದ ಕೂಲಿ ಕಾರ್ಮಿಕ ದಂಪತಿ ರಾಜ ಮತ್ತು ಕಾವೇರಿ ಕಾಫಿ ತೋಟಕ್ಕೆ ಕೆಲಸಕ್ಕೆ ತೆರಳಿದ್ದ ಸಂಬAಧ ಮನೆಯಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ಜ್ವಾಲೆ ಇಡೀ ಮನೆಯನ್ನು ಆವರಿಸಿ ಮನೆಯಲ್ಲಿದ್ದ ಮಕ್ಕಳ ಪಠ್ಯ ಪುಸ್ತಕ ಬಟ್ಟೆ ಬೀರುವಿನಲ್ಲಿದ್ದ ಚಿನ್ನ, ಹಣ ವಾಸವಾಗಿದ್ದ ಕೂಲಿ ಕಾರ್ಮಿಕ ದಂಪತಿ ರಾಜ ಮತ್ತು ಕಾವೇರಿ ಕಾಫಿ ತೋಟಕ್ಕೆ ಕೆಲಸಕ್ಕೆ ತೆರಳಿದ್ದ ಸಂಬAಧ ಮನೆಯಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ಜ್ವಾಲೆ ಇಡೀ ಮನೆಯನ್ನು ಆವರಿಸಿ ಮನೆಯಲ್ಲಿದ್ದ ಮಕ್ಕಳ ಪಠ್ಯ ಪುಸ್ತಕ ಬಟ್ಟೆ ಬೀರುವಿನಲ್ಲಿದ್ದ ಚಿನ್ನ, ಹಣ ಸಂಪೂರ್ಣ ಅಗ್ನಿಗೆ ಆಹುತಿಯಾಗಿದೆ.

ಮಕ್ಕಳಿಗೆ ದಸರಾ ರಜೆಯಾಗಿದ್ದರಿಂದ ಹೊರಗಡೆ ಆಟವಾಡುತ್ತಿದ್ದ ಮಕ್ಕಳಾದ ಭರತ್ ಹಾಗೂ ಯೋಗಿತ ಯಾವುದೇ ಪ್ರಾಣಹಾನಿಯಾಗದೆ ಅಪಾಯದಿಂದ ಪಾರಾಗಿದ್ದಾರೆ. ಸೆಸ್ಕ್ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಕೂಡಲೇ ಅಗ್ನಿ ಶಾಮಕದಳಕ್ಕೆ ಮಾಹಿತಿ ನೀಡಿದ್ದಾರೆ. ಕೂಡಲೆ ಅಗ್ನಿಶಾಮಕ ದಳದ ಅಧಿಕಾರಿ ಮಧು ಸಿಬ್ಬಂದಿಗಳಾದ ಉದಯ, ಸಂಗಮೇಶ, ರಾಖೇಶ್, ಸಂದೀಪ್ ಆಗಮಿಸಿ ಲೈನ್ ಮನೆಯ ಇತರ ಮನೆಗಳಿಗೆ ಬೆಂಕಿಹರಡದAತೆ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸುಂಟಿಕೊಪ್ಪ ನಾಡಕಚೇರಿಯ ಗ್ರಾಮ ಆಡಳಿತಾಧಿಕಾರಿ ಜಯಂತ್ ಮತ್ತು ಗ್ರಾಮ ಸಹಾಯಕ್ ಶಿವಪ್ಪ ಸ್ಥಳ ಪರಿಶೀಲನೆ ನಡೆಸಿ ಆಗಿರುವ ನಷ್ಟಗಳ ಬಗ್ಗೆ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ.