ಸುಂಟಿಕೊಪ್ಪ, ಅ. ೨೦ : ಇಲ್ಲಿನ ಆಟೋಚಾಲಕರ ಸಂಘದ ವತಿಯಿಂದ ಸಾಮೂಹಿಕ ಆಯುಧ ಪೂಜೆಯನ್ನು ಆಟೋ ಚಾಲಕರ ನಿಲ್ದಾಣದ ಬಳಿಯಲ್ಲಿ ಆಯೋಜಿಸ ಲಾಗಿದೆ ಎಂದು ಸಂಘದ ಅಧ್ಯಕ್ಷ ಶರೀಫ್ ಹಾಗೂ ಪದಾಧಿಕಾರಿಗಳು ತಿಳಿಸಿದ್ದಾರೆ. ಆಟೋ ಚಾಲಕರ ಸಂಘದ ಕಚೇರಿ ಮುಂಭಾಗದಲ್ಲಿ ಬೆಳಿಗ್ಗೆ ೧೦ ಗಂಟೆಗೆ ಸಾಮೂಹಿಕ ಆಯುಧ ಪೂಜೆ ಅಂಗವಾಗಿ ವಿವಿಧ ಧಾರ್ಮಿಕ ಗುರುಗಳಿಂದ ಸರ್ವಧರ್ಮಿಯರ ಪ್ರಾರ್ಥನೆ ಆಶೀರ್ವಚನ ಕಾರ್ಯ ಕ್ರಮವು ನೆರವೇರಿಸಲಾಗು ವುದೆಂದು ಸಂಘದ ಪ್ರಕಟಣೆ ತಿಳಿಸಿದೆ.